LOCAL EXPRESS : ಯಲಬುರ್ಗಾ-ಕುಷ್ಟಗಿ-ಕುಕನೂರು ತಾಲೂಕುಗಳಿಗೆ ಅತಿ ಶೀಘ್ರದಲ್ಲಿ ರೈಲು ಸಂಚಾರ..!!

You are currently viewing LOCAL EXPRESS : ಯಲಬುರ್ಗಾ-ಕುಷ್ಟಗಿ-ಕುಕನೂರು ತಾಲೂಕುಗಳಿಗೆ ಅತಿ ಶೀಘ್ರದಲ್ಲಿ ರೈಲು ಸಂಚಾರ..!!

ಪ್ರಜಾ ವೀಕ್ಷಣೆ ಸುದ್ದಿ :- 

LOCAL EXPRESS : ಯಲಬುರ್ಗಾ-ಕುಷ್ಟಗಿ-ಕುಕನೂರು ತಾಲೂಕುಗಳಿಗೆ ಅತಿ ಶೀಘ್ರದಲ್ಲಿ ರೈಲು ಸಂಚಾರ..!!


ಕೊಪ್ಪಳ : ಯಲಬುರ್ಗಾ ಕುಷ್ಟಗಿ ಕುಕನೂರು ತಾಲೂಕುಗಳಿಗೆ ಬಹುದಿನಗಳ ಬೇಡಿಕೆಯಾಗಿದ್ದ ರೈಲು ಸಂಚಾರ ಇನ್ನೇನು ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು (ಕೇಂದ್ರ ಸಚಿವ) ರಾಜ್ಯ ಖಾತೆಯ ರೈಲ್ವೆ ಸಚಿವ ವಿ ಸೋಮಣ್ಣ ಅವರು ತಿಳಿಸಿದರು.

ಇಂದು ಕೊಪ್ಪಳದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಚಿವ ವಿ ಸೋಮಣ್ಣ, ‘ಈಗಾಗಲೇ ಗದಗ ವಾಡಿ ರೈಲ್ವೆ ಮಾರ್ಗವು ಶರವೇಗದಲ್ಲಿ ನಡೆಯುತ್ತಿದೆ. ಇದೀಗ ಕುಕುನೂರು ಯಲಬುರ್ಗಾ ಕುಷ್ಟಗಿ ಮಾರ್ಗವು ಸಂಪೂರ್ಣಗೊಂಡಿದೆ. ಮುಂದಿನ ತಿಂಗಳು ಫೆಬ್ರುವರಿ 25 ರಂದು ರೈಲ್ವೆ ಇಲಾಖೆಯ ರೈಲ್ವೆ ಸುರಕ್ಷತಾ ಆಯೋಗವು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಇದಾದ ಬಳಿಕ ಅತಿ ಶೀಘ್ರದಲ್ಲೇ ಈ ಭಾಗದಲ್ಲಿ ರೈಲ್ವೆ ಸಂಚಾರ ನಡೆಸಲಿದೆ ಎಂದು ಹೇಳಿದರು.

Leave a Reply

error: Content is protected !!