BREAKING : ಗ್ರಾಹಕರೇ ಗಮನಿಸಿ : ಇಂದಿನಿಂದ ಈ ನಿಯಮಗಳು ಬದಲಾವಣೆ

You are currently viewing BREAKING : ಗ್ರಾಹಕರೇ ಗಮನಿಸಿ : ಇಂದಿನಿಂದ ಈ ನಿಯಮಗಳು ಬದಲಾವಣೆ

ನವದೆಹಲಿ : ಇಂದು ಮೇ 1, ಮೇ ತಿಂಗಳು ಆರಂಭವಾಗಿದೆ. ಇಂದಿನಿಂದ ಅನೇಕ ನಿಯಮಗಳು ಸಹ ಬದಲಾಗಲಿವೆ. ಬ್ಯಾಟರಿ ಚಾಲಿತ ವಾಹನಗಳು, ಬ್ಯಾಂಕ್ ವಹಿವಾಟುಗಳು, ಜಿಎಸ್‌ಟಿ, ಎಲ್ ಪಿಜಿ ಸಿಲಿಂಡರ್ ಬೆಲೆಗಳು ಮತ್ತು ಷೇರು ಮಾರುಕಟ್ಟೆಗೆ ಸಂಬಂಧಿಸಿದ ನಿಯಮಗಳನ್ನು ಈ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಕೆಲವು ಬದಲಾವಣೆಗಳು ಸಾರ್ವಜನಿಕರ ಜೇಬಿನ ಮೇಲೂ ಪರಿಣಾಮ ಬೀರುತ್ತವೆ ಎಂದು ಎನ್ನಲಾಗಿದೆ.

ಇಂದಿನಿಂದ ಪ್ರಮುಖವಾಗಿ ಇವುಗಳಲ್ಲಿ ಬದಲಾವಣೆ ಆಗಲಿದೆ.


1. ಮ್ಯೂಚುವಲ್ ಫಂಡ್ ನಿಯಮ

ಭಾರತೀಯ ಮಾರುಕಟ್ಟೆ ನಿಯಂತ್ರಕ ಸೆಬಿ *(ಸೆಬಿ ಎಂದರೇನು? ಸೆಕ್ಯುರಿಟೀಸ್ ಆಂಡ್ ಎಕ್ಸ್‌ಚೇಂಜ್‌ ಬೋರ್ಡ್ ಆಫ್ ಇಂಡಿಯಾ (Securities and Exchange Board of India) (SEBI) ಎನ್ನುವುದು ಭಾರತ ಸರ್ಕಾರದ ಶಾಸನಬದ್ಧ ಸಂಸ್ಥೆಯಾಗಿದೆ. ಇದನ್ನು 1992ರಲ್ಲಿ ಏಪ್ರಿಲ್ 12 ರಂದು ಸ್ಥಾಪಿಸಲಾಯಿತು. ಭಾರತೀಯ ಹೂಡಿಕೆ ಮಾರುಕಟ್ಟೆಯಲ್ಲಿ ಪಾರದರ್ಶಕತೆಯನ್ನು ಉತ್ತೇಜಿಸಲು ಸೆಬಿ ಪರಿಚಯಿಸಲಾಯಿತು)* ಮ್ಯೂಚುವಲ್ ಫಂಡ್ ಗಳ ನಿಯಮಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಇದನ್ನು ಹೂಡಿಕೆದಾರರ ಸ್ನೇಹಿಯಾಗಿಸಲು, ಸೆಬಿ ಹೊಸ ನವೀಕರಣವನ್ನು ಕೇಳಿದೆ. ಇದಕ್ಕಾಗಿ, ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ಬಳಸುವ ಡಿಜಿಟಲ್ ವ್ಯಾಲೆಟ್ ಆರ್‌ಬಿಐನ ಕೆವೈಸಿ ಪಡೆಯಬೇಕಾಗುತ್ತದೆ. ಈ ನಿಯಮವು ಇಂದಿನಿಂದ (ಮೇ 1, 2023) ರಿಂದ ಜಾರಿಗೆ ಬರಲಿದೆ ಎಂದು ತಿಳಿದು ಬಂದಿದೆ.

2. ಸರಕು ಮತ್ತು ಸೇವಾ ತೆರಿಗೆ, (Goods and Services Tax) ಜಿಎಸ್‌ಟಿ ನಿಯಮಗಳು

ಜಿಎಸ್‌ಟಿ (GST)ಯ ಹಲವು ನಿಯಮಗಳನ್ನು ಇಂದಿನಿಂದ ಬದಲಾಯಿಸಲಾಗಿದೆ. ಇಂದಿನಿಂದ ಆರಂಭ ಮತ್ತು ಈ ಹಿಂದೆ ಇರುವ ವ್ಯವಹಾರಗಳಿಗೆ ಹೊಸ ನಿಯಮಗಳನ್ನು ಅನುಸರಿಸುವುದು ಅಗತ್ಯವಾಗಿರುತ್ತದೆ. ಯಾವುದೇ ವಹಿವಾಟಿನ ಸ್ವೀಕೃತಿಯನ್ನು ಇನ್ವಾಯ್ಸ್ ನೋಂದಣಿ ಪೋರ್ಟಲ್‌ನ 7 ದಿನಗಳ ಒಳಗೆ ಅಪ್ಲೋಡ್ ಮಾಡುವುದು ಕಡ್ಡಾಯವಾಗಿದೆ. ಇವೆಲ್ಲವೂ (ಮೇ 1) ರಿಂದ ಜಾರಿಗೆ ಬರಲಿದೆ.

3. ಬ್ಯಾಟರಿ ಚಾಲಿತ ವಾಹನಗಳಿಗೆ ನಿಯಮ

ಬ್ಯಾಟರಿ ಚಾಲಿತ ಪ್ರವಾಸಿ ವಾಹನಗಳ ನಿಯಮಗಳಲ್ಲಿ ಕೇಂದ್ರ ಸರ್ಕಾರ ಪ್ರಮುಖ ಬದಲಾವಣೆಗಳನ್ನು ಈಗಾಗಲೇ ಮಾಡಿದೆ. ಈ ವಾಹನಗಳಿಂದ ಯಾವುದೇ ಪರವಾನಗಿ ಶುಲ್ಕವನ್ನು ವಿಧಿಸಲಾಗುವುದಿಲ್ಲ. ಹಾಗಾಗಿ ಈ ಹೊಸ ನಿಯಮವು ಇಂದಿನಿಂದ (ಮೇ 1) ಜಾರಿಗೆ ಬರಲಿದೆ. ಈ ನಿಯಮದಡಿಯಲ್ಲಿ, ಎಲೆಕ್ಟ್ರಿಕ್, ಎಥೆನಾಲ್ ಮತ್ತು ಮೆಥನಾಲ್‌ನಲ್ಲಿ ಚಲಿಸುವ ಪ್ರವಾಸಿ ವಾಹನಗಳಿಗೆ ಪರಿಹಾರ ಸಿಗುತ್ತದೆ. ಜೊತೆಗೆ ಪ್ರವಾಸಿಗರಿಗೂ ಅನುಕೂಲವಾಗುತ್ತದೆ.

4. ಎಟಿಎಂ (Automated teller machine) ವಹಿವಾಟಿಗೆ ಶುಲ್ಕ ವಿಧಿಸಲಾಗುವುದು

(ಸ್ವಯಂಚಾಲಿತ ಟೆಲ್ಲರ್ ಮಷಿನ್) ಒಂದು ಸ್ವಯಂಚಾಲಿತ ಬ್ಯಾಂಕಿಂಗ್ ಯಂತ್ರ)

ಪಂಜಾಬ್ ನ್ಯಾಷನಲ್ ಬ್ಯಾಂಕ್ ಮೇ 1 ರಿಂದ ಈ ಹೊಸ ನಿಯಮವನ್ನು ಪ್ರಾರಂಭಿಸಲಿದೆ. ನೀವು ಈ ಬ್ಯಾಂಕ್‌ನ ಗ್ರಾಹಕರಾಗಿದ್ದರೆ, ನಿಮ್ಮ ಖಾತೆಯಲ್ಲಿ ಹಣವಿಲ್ಲದಿದ್ದರೆ, ಎಟಿಎಂನಿಂದ ಹಣವನ್ನು ಹಿಂತೆಗೆದುಕೊಳ್ಳುವಾಗ ಈ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಖಾತೆಯಲ್ಲಿ ಸಾಕಷ್ಟು ಬ್ಯಾಲೆನ್ಸ್ ಇಲ್ಲದಿದ್ದರೆ ಹಾಗೂ ಎಟಿಎಂ ವಹಿವಾಟು ಪೂರ್ಣಗೊಳ್ಳದಿದ್ದರೆ, ನಗದು ವಹಿವಾಟಿನ ಮೇಲೆ ನಿಮಗೆ ಕನಿಷ್ಠ 10 ರೂ + ಜಿಎಸ್‌ಟಿ ವಿಧಿಸಲಾಗುತ್ತದೆ.

5. ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆ ಸಾಧ್ಯತೆ ಈ ಹಿಂದಿನ ನಿಯಮಗಳು ಬದಲಾವಣೆ

ಸರ್ಕಾರದ ಅಧಿನದಲ್ಲಿರುವ ತೈಲ ಕಂಪನಿಗಳು ಪ್ರತಿ ತಿಂಗಳ ಮೊದಲನೇ ದಿನಾಂಕದಂದು ಗ್ಯಾಸ್ ಸಿಲಿಂಡರ್‌ಗಳ, ಪೆಟ್ರೋಲ್ ಹಾಗೂ ಡೀಸೆಲ್‌ ಹೊಸ ದರಗಳನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಈಗಿರುವ ಅನಿಲ ಬೆಲೆಗಳು ಹಾಗೂ ಮುಂದಿನ ತಿಂಗಳು ಮತ್ತೊಮ್ಮೆ ಬದಲಾಗಬಹುದು ಎಂದು ಆರ್ಥಿಕ ತಜ್ಞನರು ಹೇಳುತ್ತಿದ್ದಾರೆ.

Leave a Reply

error: Content is protected !!