ಕುಕನೂರುಯಲಬುರ್ಗಾ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದ ಹಾಲಪ್ಪ ಆಚಾರ್ ಗೆಲವು ಸಾಧಿಸಲಿ ಎಂದು ತಾಲೂಕಿನ ವೀರಾಪೂರ ಗ್ರಾಮದಲ್ಲಿ ಅವರ ಅಭಿಮಾನಿಗಳು ದೀರ್ಘ ದಂಡ ನಮಸ್ಕಾರ ಹಾಕಿದ್ದಾರೆ.
2023ರ ಕರ್ನಾಟಕ ಸಾರ್ವತ್ರಿಕ ಚುನಾವಣೆಯ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಹಾಲಪ್ಪ ಬಸಪ್ಪ ಆಚಾರ್ ಗೆಲವು ಸಾಧಿಸಲಿ ಎಂದು ತಾಲೂಕಿನ ವೀರಾಪುರ ಗ್ರಾಮದ ಅವರ ಅಭಿಮಾನಿಗಳಾದ ಮಹಾಂತೇಶ ಹೊಸಮನಿ ಹಾಗೂ ಶಿವಶರಣ ಮಾಲಿ ಪಾಟೀಲ ಎಂಬುವರು ಶುಕ್ರವಾರ ಗ್ರಾಮದ ಆದಿ ದೇವತೆಯಾದ ಶ್ರೀ ದುರ್ಗಾದೇವಿಯ ದೇವಸ್ಥಾನದಿಂದ ಶ್ರೀ ಶಿವಬಸವೇಶ್ವರ ದೇವಸ್ಥಾನದವರೆಗೆ ದೀರ್ಘ ದಂಡ ನಮಸ್ಕಾರ ಹಾಕುವುದ ಮೂಲಕ ಯಲಬುರ್ಗಾ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಹಾಲಪ್ಪ ಗೆಲ್ಲಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಂಡು ದೀರ್ಘದಂಡ ನಮಸ್ಕಾರ ಹಾಕಿದ್ದಾರೆ.
ಈ ಸಂದರ್ಭದಲ್ಲಿ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷ ಪ್ರಭುಗೌಡ ಮಾಲಿ ಪಾಟೀಲ, ಶಿವಶಂಕರ ಪೊಲೀಸ್ ಪಾಟೀಲ, ಪಕ್ಷದ ಕಾರ್ಯಕರ್ತರು ಹಾಗೂ ಇತರರಿದ್ದರು.