ಯಲಬುರ್ಗಾ : 2023ರ ಎಸ್ ಎಲ್ ಸಿ ಫಲಿತಾಂಶ ಹೊರ ಬಿದ್ದಿದ್ದು 625 ಅಂಕಕ್ಕೆ 623 ಅಂಕಗಳನ್ನು ಪಡೆಯುವ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆಯುವುದರೊಂದಿಗೆ ರಾಜ್ಯಕ್ಕೆ ಮೂರನೇ ಸ್ಥಾನದಲ್ಲಿ ತಾಲೂಕಿನ ಬಳೂಟಿಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಯಾದ ಕಾರ್ತಿಕ ದೊಡ್ಡಬಸಪ್ಪ ಜಿಲ್ಲೆಗೆ ಟಾಪರ್ ಆಗಿ ಹೊರಹೊಮ್ಮಿದ್ದಾನೆ.
ಈ ಕುರಿತು ವಿದ್ಯಾರ್ಥಿಯೊಂದಿಗೆ ಮಾತನಾಡಿದಾಗ ಈ ನನ್ನ ಸಾಧನೆಗೆ ನನ್ನ ಶಾಲಾ ಶಿಕ್ಷಕರಾದ
M.d.ಯುಸೂಪ್, G.D.ದ್ಯಾಮನಗೌಡ್ರು, ಜಯಶ್ರೀ, ಶೋಭಾ ನಾಲವಾಡ, ಅಂಜಿರುಕಿಯಾ, ಮಹಾದೇವಿ, ಶೈಲೇಂದ್ರ ಬಾಚಲಾಪುರ ಗುರುಗಳೇ ಕಾರಣ ಇವರ ಮಾರ್ಗದರ್ಶನದಿಂದಲೇ ನಾನು ಈ ಸಾಧನೆ ಮಾಡಲು ಸಾಧ್ಯವಾಯಿತು ಎಂದು ತಿಳಿಸಿದ್ದಾನೆ.
ಕೆಳಗಿನಂತೆ ವಿಷಯವಾರು ಅಂಕಗಳನ್ನು ಪಡೆದಿದ್ದಾನೆ.
ಕನ್ನಡ-125
ಇಂಗ್ಲೀಷ್ -100
ಹಿಂದಿ -100
ಸಮಾಜ ವಿ-100
ಗಣಿತ – 99
ವಿಜ್ಞಾನ-99.