ತಾಲೂಕ ರೈತ ಸಂಘದಿಂದ ಬಿಜೆಪಿಗೆ ಬೆಂಬಲ


ಕುಕನೂರು : ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ವಿ ಆರ್ ನಾರಾಯಣ ರೆಡ್ಡಿ ಬಣದ ತಾಲೂಕ ರೈತ ಸಂಘದಿಂದ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಹಾಲಪ್ಪ ಆಚಾರ ಗೆ ರೈತ ಸಂಘದಿಂದ ಬೆಂಬಲ ಸೂಚಿಸುವುದಾಗಿ ತಿಳಿಸಿದರು.

ಪಟ್ಟಣದ ಬಿಜೆಪಿ ಕಾರ್ಯಲಯದಲ್ಲಿ ಸೋಮವಾರ ಬೆಳಿಗ್ಗೆ ತಾಲೂಕಿನ ವಿವಿಧ ಗ್ರಾಮಗಳ ರೈತ ಸಂಘದ ಸದಸ್ಯರು ಆಗಮಿಸಿ ರೈತ ಸಂಘದ ಜಿಲ್ಲಾಧ್ಯಕ್ಷರಾದ ಬಸವರಾಜ್ ಕೊಡ್ಲಿ ನೇತೃತ್ವದಲ್ಲಿ ಯಲಬುರ್ಗಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಹಾಲಪ್ಪ ಆಚಾರ್ಯ ಬೆಂಬಲ ಸೂಚಿಸುವುದಾಗಿ ತಿಳಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷರಾದ ಬಸವರಾಜ ಕೊಡಲಿ ಮಾತನಾಡಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ವಿ ಆರ್ ನಾರಾಯಣ ರೆಡ್ಡಿ ಬಣದ ತಾಲೂಕಿನ ಎಲ್ಲಾ ಗ್ರಾಮ ಘಟಕದ ಸದಸ್ಯರು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುತ್ತಿದ್ದೇವೆ. ಸದ್ಯ ಬಿಜೆಪಿಯಿಂದ ಸ್ಪರ್ಧಿಸಿರುವ ಹಾಲಪ್ಪ ಆಚಾರ್ಯರು ಈ ಹಿಂದೆ ಶಾಸಕರಿದ್ದಾಗ ರೈತರಿಗೆ ಸಾಕಷ್ಟು ಅನುಕೂಲಗಳನ್ನು ಮಾಡಿದ್ದಾರೆ. ಮುಂದೆಯೂ ಸಹ ರೈತ ಸಂಘದೊಂದಿಗೆ ಇದ್ದು, ರೈತರಿಗೆ ಅನುಕೂಲವಾಗುವ ಯೋಜನೆಗಳನ್ನು ತರುವ ಭರವಸೆಯನ್ನು ನೀಡಿದ್ದರಿಂದ ಹಾಲಪ್ಪ ಆಚಾರ್ ಗೆ ಬೆಂಬಲ ಸೂಚಿಸುತ್ತಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾದ ಹಾಲಪ್ಪ ಆಚಾರ್ ಮಾತನಾಡಿ ನನ್ನ ಈ ಇಂದಿನ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ, ಮತ್ತೊಮ್ಮೆ ನನಗೆ ಬೆಂಬಲ ನೀಡಲು ಮುಂದೆ ಬಂದಿರುವ ರೈತ ಸಂಘದ ಸರ್ವ ಸದಸ್ಯರಿಗೆ ಚಿರಋಣಿಯಾಗಿದ್ದೇನೆ ಎಂದರು.

ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ಅಂದಪ್ಪ ಹುರುಳಿ, ತಾಲೂಕ ಅಧ್ಯಕ್ಷ ಮಂಜುನಾಥ ಚೆಟ್ಟಿ,
ಗುಳನಗೌಡ, ಹುಚ್ಚಿರಪ್ಪ ಕೌದಿ, ಲಕ್ಷ್ಮಣ ಕೋರಿ, ಬಸಪ್ಪ ಮಂಡಲಗೇರಿ, ಮಲ್ಲಿಕಾರ್ಜುನ ಪಾಟೀಲ, ರೇಣಮ್ಮ ಬಿನ್ನಾಳ, ಸಾವಿತ್ರಮ್ಮ ತೆಗ್ಗಿನಮನಿ, ರಾಜು ಮಡಿವಾಳರ, ಶರಣಪ್ಪ ಎಮ್ಮಿ , ಅನಿಲ್ ಹುಜರತ್ತಿ ಹಾಗೂ ಇತರರಿದ್ದರು.

Leave a Reply

error: Content is protected !!