ಕುಕನೂರು : ರವಿವಾರ ತಡರಾತ್ರಿ ಗಾಳಿ ಮಳೆಗೆ ಬೃಹತ್ ಗಾತ್ರದ ಮರ ಒಂದು ವಾಹನದ ಮೇಲೆ ಬಿದ್ದು ವಾಹನ ಸಂಪೂರ್ಣವಾಗಿ ಜಖಂಗೊಂಡಿರುತ್ತದೆ.
ಕುಕನೂರು ಪಟ್ಟಣದ 1ನೇ ವಾರ್ಡನ ಪರಶುರಾಮ ಪೊಳದ ಎಂಬುವರ ವಾಹನದ ಮೇಲೆ ರವಿವಾರ ರಾತ್ರಿ ಸುರಿದ ಗಾಳಿ ಮಳೆಗೆ ಬೃಹತ್ ಮರವೊಂದು ವಾಹನದ ಮೇಲೆ ಬಿದ್ದಿದ್ದು ಟಾಟಾ ಎಸ್ ವಾಹನ ಸಂಪೂರ್ಣವಾಗಿ ಹಾಳಾಗಿದೆ. ಪಕ್ಕದಲ್ಲೇ ಇರುವ ಮನೆಯ ಛಾವಣಿ ಮೇಲೆ ಬಿದ್ದು, ಛಾವಣಿ ಹಾಳಾಗಿದ್ದು ಯಾವುದೇ ಅಪಾಯ ಸಂಭವಿಸಿಲ್ಲ.
ಮಾಹಿತಿಯನ್ನು ತಹಶೀಲ್ದಾರ್ ಗೆ ತಿಳಿಸಿದ್ದು ಗ್ರಾಮ ಲೆಕ್ಕಾಧಿಕಾರಿಗಳನ್ನು ಕಳುಹಿಸಿ ವರದಿ ಸಂಗ್ರಹಿಸುವಂತೆ ತಿಳಿಸಲಾಗಿದೆ ಎಂದು ತಿಳಿಸಿರುತ್ತಾರೆ.