ಹರಿಯಾಣ, ಜಮ್ಮು ಕಾಶ್ಮೀರಕ್ಕೆ ಚುನಾವಣೆ ದಿನಾಂಕ ಘೋಷಣೆ, ಮಹಾರಾಷ್ಟ್ರ ಚುನಾವಣೆ ಮುಂದಕ್ಕೆ.!!
ನವದೆಹಲಿ : ಕೇಂದ್ರ ಚುನಾವಣೆ ಆಯೋಗವು ಜಮ್ಮು ಕಾಶ್ಮೀರ ಮತ್ತು ಹರಿಯಾಣ ರಾಜ್ಯಗಳ ಚುನಾವಣೆ ದಿನಾಂಕ ಘೋಷಣೆ ಮಾಡಿದೆ. ಮಹಾರಾಷ್ಟ್ರ ರಾಜ್ಯದ ಚುನಾವಣೆ ದಿನಾಂಕ ಘೋಷಿಸದೇ ಮುಂದಕ್ಕೆ ಹಾಕಿದೆ.
ನವದೆಹಲಿಯಲ್ಲಿ ಸುದ್ದಿಗೋಷ್ಠಿ ಮಾಡಿ ಮಾತನಾಡಿದ ಕೇಂದ್ರ ಚುನಾವಣೆ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್, ಹರಿಯಾಣ ರಾಜ್ಯದ 90 ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 1 ರಂದು ಮತದಾನ ನಡೆಯಲಿದೆ. ಅಕ್ಟೋಬರ್ 4 ರಂದು ಮತ ಎಣಿಕೆ.
ಜಮ್ಮು ಮತ್ತು ಕಾಶ್ಮೀರ ರಾಜ್ಯದ ಚುನಾವಣೆ ದಿನಾಂಕವು ಕೂಡ ಘೋಷಣೆ ಮಾಡಲಾಗಿದ್ದು ಅಲ್ಲಿ 3 ಹಂತಗಳಲ್ಲಿ ಮತದಾನ ನಡೆಯಲಿದೆ. ಸುಮಾರು ಹತ್ತು ವರ್ಷಗಳ ನಂತರ ಜಮ್ಮು ಕಾಶ್ಮೀರ ದಲ್ಲಿ ಚುನಾವಣೆ ನಡೆಯಲಿದೆ. 2014 ರಲ್ಲಿ ಕೊನೆಯ ಬಾರಿಗೆ ಜಮ್ಮು ಕಾಶ್ಮೀರ ದಲ್ಲಿ ಚುನಾವಣೆ ನಡೆದಿತ್ತು. ಕಣಿವೆ ನಾಡಿನಲ್ಲಿ ಈಗ ಶಾಂತಿ ನೆಲೆಸಿದ್ದು ಸರಿ ಸುಮಾರು ದಶಕದ ನಂತರ ಅಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದೆ.
ಕೇಂದ್ರ ಸರ್ಕಾರವು 370 ವಿಧಿಯನ್ನು ರದ್ದುಗೊಳಿಸಿದೆ. ಜೊತೆಗೆ ಇದೀಗ ಕೇಂದ್ರ ಚುನಾವಣೆ ಆಯೋಗ ದಿನಾಂಕ ನಿಗದಿಪಡಿಸಿದ್ದು ಸೆಪ್ಟೆಂಬರ್ 18,ಸೆಪ್ಟೆಂಬರ್ 25, ಅಕ್ಟೋಬರ್ 1 ರಂದು ಒಟ್ಟು ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ.
ಆದರೆ ಕಳೆದ ಸಲ ಹರಿಯಾಣ ರಾಜ್ಯದ ವಿಧಾನಸಭಾ ಚುನಾವಣೆ ಜೊತೆಗೆ ಮಹಾರಾಷ್ಟ್ರ ರಾಜ್ಯದ ಚುನಾವಣೆ ನಡೆಸಲಾಗಿತ್ತು ಈ ಬಾರಿ ಮಹಾರಾಷ್ಟ್ರ ಚುನಾವಣೆ ಮುಂದಕ್ಕೆ ಹಾಕಲಾಗಿದೆ.