08539-295469ಗೆ ಕಾಲ್ ಮಾಡಿ 50,000 ರೂ. ಪಡೆಯಿರಿ…!!

You are currently viewing 08539-295469ಗೆ ಕಾಲ್ ಮಾಡಿ 50,000 ರೂ. ಪಡೆಯಿರಿ…!!

ಕೈಮಗ್ಗ ನೇಕಾರರಿಗೆ ಸಾಲದ ನೆರವು: ಅರ್ಜಿ ಆಹ್ವಾನ

ಕೊಪ್ಪಳ : ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ 2023-24ನೇ ಸಾಲಿನ ಮುದ್ರಾ ಯೋಜನೆಯಡಿ ಕೊಪ್ಪಳ ಜಿಲ್ಲೆಯ ಕೈಮಗ್ಗ ನೇಕಾರರಿಗೆ ಬ್ಯಾಂಕ್‌ನಿಂದ ಸಾಲದ ನೆರವಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಮುದ್ರಾ ಯೋಜನೆಯಡಿ ಕೈಮಗ್ಗ ನೇಕಾರರಿಗೆ ಮಗ್ಗ ಖರೀದಿಸಲು ಅಥವಾ ದುಡಿಮೆ ಬಂಡವಾಳಕ್ಕಾಗಿ ರಾಷ್ಟ್ರೀಕೃತ ಬ್ಯಾಂಕ್‌ನಿಂದ ಸಾಲ ಪಡೆಯಲು ಜಿಲ್ಲೆಗೆ 30 ಗುರಿ ನಿಗದಿಪಡಿಸಲಾಗಿದ್ದು, ಪ್ರತಿ ಫಲಾನುಭವಿಗೆ 50,000 ರೂ. ಗಳಂತೆ 20% ಮಾರ್ಜಿನ್‌ಮನಿ ಪಡೆಯಲು ಅವಕಾಶವಿರುತ್ತದೆ. ಕೈಮಗ್ಗ ನೇಕಾರರು ಯಾವುದೇ ಮಧ್ಯವರ್ತಿಗಳನ್ನು ಸಂಪರ್ಕಿಸದೆ ನೇರವಾಗಿ ಉಪ ನಿರ್ದೇಶಕರ ಕಚೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ, ಕೊಪ್ಪಳ ಇಲ್ಲಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ದೂ.ಸಂ: 08539-295469ಗೆ ಸಂಪರ್ಕಿಸಬಹುದಾಗಿದೆ ಎಂದು ಕೊಪ್ಪಳ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

error: Content is protected !!