BREAKING : ರಾಜಧಾನಿಯಲ್ಲಿ ಐವರು ಶಂಕಿತ ಭಯೋತ್ಪಾದಕರ ಬಂಧನ..!! : ಅದೇನು ಅಂತೀರಾ ಈ ಸ್ಟೋರಿ ಕಂಪೀಟ್‌ ಓದಿ……!!

You are currently viewing BREAKING : ರಾಜಧಾನಿಯಲ್ಲಿ ಐವರು ಶಂಕಿತ ಭಯೋತ್ಪಾದಕರ ಬಂಧನ..!! : ಅದೇನು ಅಂತೀರಾ ಈ ಸ್ಟೋರಿ ಕಂಪೀಟ್‌ ಓದಿ……!!

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಐವರು ಶಂಕಿತ ಭಯೋತ್ಪಾದಕರ ಬಂಧನ ಪ್ರಕರಣ ಸಂಬಂಧಿಸಿದಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಇಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ.

ಇಂದು ವಿಧಾನಸಭೆಯಲ್ಲಿ ಕಲಾಪ ಆರಂಭದ ಮುನ್ನ ರಾಜಧಾನಿಯಲ್ಲಿ ಐವರು ಶಂಕಿತ ಭಯೋತ್ಪಾದಕರ ಬಂಧನ ಪ್ರಕರಣವೂ ಸದ್ದು ಮಾಡಿದೆ. ಈ ವೇಳೆ ಸದನದಲ್ಲಿ ಶಂಕಿತ ಉಗ್ರರ ವಿರುದ್ಧ ಸಿಸಿಬಿ ನಡೆಸಿದ ಕಾರ್ಯಾಚರಣೆಯ ಬಗ್ಗೆ
ಸ್ಫೋಟಕ ಮಾಹಿತಿಯನ್ನು ಗೃಹ ಸಚಿವ ಡಾ.ಜಿ ಪರಮೇಶ್ವರ್ ಬಿಚ್ಚಿದ್ದಾರೆ.

ಕೆಲ ಶಂಕಿತ ಭಯೋತ್ಪಾದಕರ ಗುಂಪು ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದರು. ಈ ಬಗ್ಗೆ ಮಾಹಿತಿ ಪಡೆದು 4 ಜನ ಎಸಿಪಿಗಳ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿತ್ತು. ಮಾರುವೇಷದಲ್ಲಿ ಸಿಸಿಬಿ ಅಧಿಕಾರಿಗಳು ಮಾನಿಟರ್ ಮಾಡಿದ್ದಾರೆ ಎಂದು ಅವರು ಸದನದಲ್ಲಿ ತಿಳಿಸಿದ್ದಾರೆ.

ಸಿಸಿಬಿ ಪೊಲೀಸರು ಅವರು ವಾಸವಿದ್ದ ಮನೆ ಹಾಗೂ ಪಕ್ಕದ ಮನೆ ವಿಳಾಸ ಸೇರಿದಂತೆ ಇತರೆ ಹೆಚ್ಚಿನ ಮಾಹಿತಿ ಸಂಗ್ರಹಿಸಿದ್ದಾರೆ. 4 ತಂಡಗಳು ಏಕಕಾಲದಲ್ಲಿ ದಾಳಿ ನಡೆಸಿ 5 ಜನ ಶಂಕಿತ ಭಯೋತ್ಪಾದಕರನ್ನು ಬಂಧಿಸಿದ್ದಾರೆ ಎಂದು ಹೇಳಿದರು.

Leave a Reply

error: Content is protected !!