BREAKING : “ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ” ಚಿತ್ರದ ಟ್ರೇಲರ್‌ನಿಂದ ರಮ್ಯಾ ಅವರ ವಿಡಿಯೊ ತುಣುಕು ತೆಗೆದುಹಾಕಬೇಕು ಎಂದು ನಿರ್ಮಾಣ ಸಂಸ್ಥೆಗೆ ಕೋರ್ಟ್‌ ನಿರ್ದೇಶನ..!!

You are currently viewing BREAKING : “ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ” ಚಿತ್ರದ ಟ್ರೇಲರ್‌ನಿಂದ ರಮ್ಯಾ ಅವರ ವಿಡಿಯೊ ತುಣುಕು ತೆಗೆದುಹಾಕಬೇಕು ಎಂದು ನಿರ್ಮಾಣ ಸಂಸ್ಥೆಗೆ ಕೋರ್ಟ್‌ ನಿರ್ದೇಶನ..!!

ಬೆಂಗಳೂರು : “ನನ್ನ ವಿಡಿಯೊ ಕ್ಲಿಪ್ ಅನ್ನು ಚಿತ್ರ ಹಾಗೂ ಟ್ರೇಲರ್‌ನಲ್ಲಿ ಅನಧಿಕೃತವಾಗಿ ಬಳಸಲಾಗಿದೆ ಎಂದು ಆರೋಪಿಸಿ ನಟಿ ರಮ್ಯಾ ಸಲ್ಲಿಸಿರುವ ದಾವೆ ವಿಚಾರಣೆ ನಡೆಸಿದ 83ನೇ ಹೆಚ್ಚುವರಿ ಸೆಷನ್ಸ್ (ವಾಣಿಜ್ಯ ಕೋರ್ಟ್ ಸಂಖ್ಯೆ-84) ನ್ಯಾಯಾಲಯ ನಟಿ ರಮ್ಯಾ (ದಿವ್ಯ ಸ್ಪಂದನಾ) ಅವರ ವಿಡಿಯೊ ತುಣುಕನ್ನು ತೆಗೆದುಹಾಕುವಂತೆ ಚಿತ್ರ ನಿರ್ಮಾಣ ಹಾಗೂ ವಿತರಕ ಸಂಸ್ಥೆಗೆ ಕೋರ್ಟ್ ನಿರ್ದೇಶಿಸಿದೆ” ಎಂದು ತಿಳಿದು ಬಂದಿದೆ.

ಯೂಟ್ಯೂಬ್ ಹಾಗೂ ಇತರೆ ಎಲ್ಲಾ ಸೋಶಿಯಲ್‌ ಮೀಡಿಯಾದಲ್ಲಿ ಪ್ರಸಾರ ಮಾಡಿರುವ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರದ ಟ್ರೇಲರ್‌ನಿಂದ ರಮ್ಯಾ ಅವರ ವಿಡಿಯೊ ತುಣುಕು ತೆಗೆದುಹಾಕಬೇಕು ಹಾಗೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ರಮ್ಯಾ ಅವರ ವಿಡಿಯೊ ತುಣುಕು, ಫೋಟೊ, ಜಿಫ್ (ಗ್ರಾಫಿಕ್ಸ್ ಇಂಟರ್‌ಚೇಂಜ್‌ ಫಾರ್ಮ್ಯಾಟ್‌) ಇರುವ ಚಿತ್ರವನ್ನು ಅರ್ಜಿಯ ಸಂಪೂರ್ಣ ಇತ್ಯರ್ಥಪಡಿಸುವರೆಗೂ ಬಿಡುಗಡೆ ಮಾಡಬಾರದು‘ ಎಂದು ಚಿತ್ರದ ನಿರ್ಮಾಣ ಸಂಸ್ಥೆ ಗುಲ್‌ಮೊಹರ್ ಫಿಲ್ಮ್ ಪ್ರೈ.ಲಿಮಿಟೆಡ್‌ ಕಂಪನಿ ಹಾಗೂ ವಿತರಕ ಸಂಸ್ಥೆ ಜೀ ಎಂಟರ್‌ಟೈನ್ಮೆಂಟ್‌ ಎಂಟರ್‌ಪ್ರೈಸೆಸ್ ಪ್ರೈ.ಲಿಮಿಟೆಡ್‌ ಮತ್ತು ದಾವೆಯ ಇತರೆ ಪ್ರತಿವಾದಿಗಳಿಗೆ ಆದೇಶಿಸಿದೆ. ಇದರ ವಿಚಾರಣೆಯನ್ನು ಆಗಸ್ಟ್‌ 7ಕ್ಕೆ ಮುಂದೂಡಲಾಗಿದೆ ಎಂದು ಕೋರ್ಟ್‌ ಹೇಳಿದೆ.

Leave a Reply

error: Content is protected !!