ಕೊಪ್ಪಳ : ಕೊಪ್ಪಳ ತಾಲೂಕಿನ ಗಿಣಗೇರಾದಿಂದ ಹಾಗೂ ಹಿರೇಬಗನಾಳ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಈ ಕುರಿತು ಹಿರೇಕಾಸನಕಂಡಿ ಕ್ರಾಸ್ ಹತ್ತಿರ ರಸ್ತೆ ತಡೆದು ಮುಷ್ಕರ ಮಾಡಲಾಗಿದ್ದು, ಈ ಮೂಲಕ ಸಾರ್ವಜನಿಕರಿಗೆ ತುಂಬಾ ತೊಂದರೆ ಆಗುತ್ತಿದ್ದು, ಈ ಕಾರಣ ಸದರಿ ರಸ್ತೆಯನ್ನು ದುರಸ್ಥಿ ಮಾಡಬೆಕೇಂದು ಜಿಲ್ಲಾ ಲೋಕೋಪಯೋಗಿ ಇಲಾಖೆಗೆ ಅಲ್ಲಿನ ಗ್ರಾಮಸ್ತರು ರಸ್ತೆ ದುರಸ್ತಿಗೆ ಒತ್ತಾಯಿಸಿದ್ದಾರೆ.
ಕೊಪ್ಪಳ ತಾಲೂಕಿನ ಗಿಣಗೇರಾದಿಂದ ಹಿರೇಬಗನಾಳ, ಹಿರೇಕಾಸನಕಾಂಡಿ, ಅಲ್ಲಾನಗರ, ಚಿಕ್ಕಬಗನಾಳ, ಕರ್ಕಿಹಳ್ಳಿ ಗ್ರಾಮದಲ್ಲಿ ಭಾರೀ ಗ್ರಾಮದ ವಾಹನಗಳ ಓಡಾಟದಿಂದ ರಸ್ತೆ ತುಂಬಾ ಹಾಳಾಗಿದ್ದು, ಸದರಿ ರಸ್ತೆಗಳಲ್ಲಿ ಸಾರ್ವಜನಿಕರಿಗೆ, ರೈತರಿಗೆ, ಶಾಲಾ ಮಕ್ಕಳಿಗೆ ಬಹಳ ತೊಂದರೆ ಆಗಿರುವುದುರಿಂದ ಅದನ್ನು ಸರಿಪಡಡಿಸಲೇಬೇಕು. ಹಾಗಾಗಿ ನಾಳೆ (ಜುಲೈ 24 ರಂದು) ಬೆಳಗ್ಗೆ 7:00 ಗಂಟೆಯಿಂದ ಅನಿರ್ಧಿಷ್ಟಾವಧಿಯವರೆಗೆ ಹಿರೇಬಗನಾಳ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಗ್ರಾಮಗಳ ಗ್ರಾಮಸ್ಥರಿಂದ ಸಾರ್ವಜನಿಕರು ಹಿರೇಕಾಸನಕಂಡಿ ಕ್ರಾಸ್ ಹತ್ತಿರ ಆಂಬುಲೇನ್ಸ್, ರೈತರ ಗಾಡಿಗಳು, ಸರ್ಕಾರಿ ವಾಹನಗಳನ್ನು ಹೊರತುಪಡೆಸಿ ಇನ್ನುಳಿದ ಎಲ್ಲಾ ವಾಹನಗಳನ್ನು ತಡೆದು ಧರಣಿಯನ್ನು ಹಮ್ಮಿಕೊಳ್ಳಾಗುತ್ತದೆ ಎಂದು ಹಿರೇಬಗನಾಳ ಗ್ರಾಮದ ಗ್ರಾಮಸ್ಥರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.