ಕುಕನೂರು : ಬಿಡಾಡಿ ದಾನವೊಂದು ಶಾಲಾ ವಿದ್ಯಾರ್ಥಿನಿಯನ್ನು ಗೊಂಬಿನಿಂದ ತಿವಿದು ಭಯಾನಕ ದಾಳಿ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಸಂಚಲನವನ್ನು ಮೂಡಿಸಿದೆ.
ಇದರಿಂದಾಗಿ ಕುಕನೂರು ಪಟ್ಟಣದ ಜನತೆಯಲ್ಲಿಯೂ ಸಹಿತ ಬೀದಿ ಬಿಡಾಡಿ ದನಗಳ ಬಗ್ಗೆ ಅತಿ ಹೆಚ್ಚು ಭಯವನ್ನು ಉಂಟು ಮಾಡಿದೆ.
ಪಟ್ಟಣದಲ್ಲಿ ಸಾಕಷ್ಟು ಬಿಡಿದಾಡಿ ದನಗಳಿದ್ದು ಅವುಗಳಿಂದ ಯಾವಾಗ ಬೇಕಾದರೂ ಇದೆ ರೀತಿ ಅಗಬಹುದು ಎಂಬ ಭಯದಲ್ಲಿ ಕಾಲವನ್ನು ಕಳೆಯುತ್ತಿದ್ದಾರೆ.
ಪಟ್ಟಣದ ಪ್ರಮುಖ ರಸ್ತೆಗಳೆ ಈ ಬಿಡಾಡಿ ದನಗಳ ಆಶ್ರಯ ತಾಣವಾಗಿದ್ದು, ರಸ್ತೆ ಮಧ್ಯೆನೆ ಮಲಗಿರುತ್ತವೆ. ಪಟ್ಟಣದ ಯಲಬುರ್ಗಾ ರಸ್ತೆ, ಗುದ್ನೇಪ್ಪನಮಠ ರಸ್ತೆ, ತೆರಿನಗಡ್ಡಿ ರಸ್ತೆ ಹೀಗೆ ಜನ ನಿಬಿಡ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳೇ ಓಡಾಡೋ ರಸ್ತೆಯಲ್ಲಿ ಇವು ಬಿಡು ಬಿಟ್ಟಿದ್ದು ಸಹಜವಾಗಿ ಭಯ ಹುಟ್ಟಿಸಿತ್ತು. ಆದರೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ವಿಡಿಯೋ ದಿಂದಾಗಿ ಪಟ್ಟಣದ ಹಾಗೂ ಪಟ್ಟಣಕ್ಕೆ ಆಗಮಿಸುವ ವಿದ್ಯಾರ್ಥಿ, ಪೋಷಕರಲ್ಲಿಯೂ ಭಯವನ್ನು ಉಂಟು ಮಾಡಿದೆ.
ಈ ಕುರಿತು ಕುಕನೂರು ಪಟ್ಟಣ ಪಂಚಾಯಿತ ಮುಖ್ಯಾಧಿಕಾರಿಯಾದ ಸುಬ್ರಹ್ಮಣ್ಯ ಅವರನ್ನು ಸಂಪರ್ಕಿಸಿದಾಗ ಮಾತನಾಡಿದ ಅವರು. “ಸಂಬಂಧಪಟ್ಟ ದನಗಳ ಮಾಲೀಕರಿಗೆ ಮೌಖಿಕವಾಗಿ ಎಚ್ಚರಿಕೆ ನೀಡಲಾಗಿದೆ. ಇಂದು ನೋಟಿಸ್ ಜಾರಿಗೊಳಿಸಲು ಸೂಚಿಸಿದ್ದೇನೆ. ನೋಟಿಸ್ ಗೆ ಅವರು ಸ್ಪಂದಿಸದಿದ್ದರೆ ದನಗಳನ್ನು ಗೋ ಶಾಲೆಗೆ ಕಳುಹಿಸಲಾಗುವುದು” ಎಂದು ಹೇಳಿದರು.
ವರದಿ: ಶರಣಯ್ಯ ತೋಂಟದಾರ್ಯಮಠ