ಕುಕನೂರು : ಸುಮಾರು ಮೂವತ್ತು ವರ್ಷಗಳ ಕಾಲ ಶಿಕ್ಷಕ ವೃತ್ತಿಯಲ್ಲಿ ಸೇವೆ ಸಲ್ಲಿಸಿದ ತಮ್ಮ ನೆಚ್ಚಿನ ಗುರುಗಳಾದ ಶರಣಗೌಡ ಪಾಟೀಲ್ ಅವರಿಗೆ ಡಿಜೆ ಮೆರವಣಿಗೆ ಮಾಡುವ ಮೂಲಕ ವಿದ್ಯಾರ್ಥಿಗಳು ಅದ್ದೂರಿ ಸೇವಾ ನಿವೃತ್ತಿಯ ಬೀಳ್ಕೊಡುಗೆ ಮಾಡಿದರು.
ಕುಕನೂರು ಪಟ್ಟಣದ ಸರ್ಕಾರಿ ಹಿರಿಯ ಪ್ರೌಢಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸಿ ಇಂದು ತಮ್ಮ ಸೇವಾ ನಿವೃತ್ತಿ ಹೊಂದಿದ ಶರಣಗೌಡ ಪಾಟೀಲ್ ಅವರಿಗೆ ಇಪ್ಪತ್ತು ವರ್ಷದ ಅವರ ಶಿಸ್ಯ ವೃಂದದ ವಿದ್ಯಾರ್ಥಿಗಳು ಅದ್ದೂರಿ ಬೀಳ್ಕೊಡುಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಪ್ರೌಢಶಾಲೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಪ್ಪತ್ತು ವರ್ಷದ ಹಳೆಯ ವಿದ್ಯಾರ್ಥಿಗಳು, ಶಾಲೆಯ ಶಿಕ್ಷಕರ ಬಳಗ, ಎಸ್ ಡಿ ಎಂ ಸಿ ಸದಸ್ಯರು, ಶಾಲಾ ವಿದ್ಯಾರ್ಥಿಗಳು ಸೇರಿಕೊಂಡು ವಿದ್ಯೆ ಕಲಿಸಿದ ತಮ್ಮ ನೆಚ್ಚಿನ ಗುರುಗಳಿಗೆ ಆತ್ಮೀಯ ಬೀಳ್ಕೊಡುಗೆ ಮಾಡುವ ಮೂಲಕ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ಬಸವರಾಜ್ ಹಡಪದ್,, ಶಿಕ್ಷಕರಾದ ಬಸವರಾಜ್ ಮೇಟಿ, ನಿಂಗಪ್ಪ ಕಂಬಳಿ, ನಾಗರಾಜ್ ಜಗತಾಪ್, ಪ್ರಾಚಾರ್ಯರಾದ ಈಶಪ್ಪ ಮಳಗಿ, ಶಿಕ್ಷಕ ಮುತ್ತಣ್ಣ, ನಿವೃತ್ತ ಶಿಕ್ಷಕರಾದ ಎಸ್ ಕೆ ಜೋಳದ, ಕೆ ಎಸ್ ಪತ್ತಾರ್, ಪತ್ರಕರ್ತ ಮಂಜುನಾಥ ಅಂಗಡಿ, ಸರ್ಕಾರಿ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳು, ಶಿಕ್ಷಕ ವೃಂದ, ಎಸ್ ಡಿ ಎಂ ಸಿ ಸದಸ್ಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ : ಈರಯ್ಯ ಕುರ್ತಕೋಟಿ