ಮಕ್ಕಳಿಗೆ ಉತ್ತಮ ಶಿಕ್ಷಣ ಜೊತೆಗೆ ಜೀವನದ ಮೌಲ್ಯ ಅಗತ್ಯ : ಕನಕಪ್ಪ ಕೆ. ತಳವಾರ

You are currently viewing ಮಕ್ಕಳಿಗೆ ಉತ್ತಮ ಶಿಕ್ಷಣ ಜೊತೆಗೆ ಜೀವನದ ಮೌಲ್ಯ ಅಗತ್ಯ : ಕನಕಪ್ಪ ಕೆ. ತಳವಾರ

ಕೊಪ್ಪಳ : “ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ಅತ್ಯಗತ್ಯ, ಹಾಗಾಗಿ ಮನೆಯಲ್ಲಿ ಮಕ್ಕಿಳಿಗೆ ಓದಿಸಲು ಮತ್ತು ವ್ಯಕ್ತಿಕವಾಗಿ ಅವರನ್ನು ಓದಿನ ಕಡೆಗೆ ಮನವೊಲಿಸುವುದಕ್ಕೆ ಸಾದ್ಯವಿಲ್ಲ, ಆದರೆ ಜ್ಞಾನ ಜ್ಯೋತಿ ನವೋದಯ ಕೋಂಚಿಂಗ್‌ ಸೆಂಟರ್‌ ಮಕ್ಕಳಿಗೆ ಉತ್ತಮ ಶಿಕ್ಷಣ ಜೊತೆಗೆ ಜೀವನದ ಮೌಲ್ಯವನ್ನು ನೀಡುತ್ತಿದೆ” ಎಂದು ಯುಕೆ ನ್ಯೂಸ್‌ ಸಂಪಾದಕ ಕನಕಪ್ಪ ಕೆ. ತಳವಾರ ಹೇಳಿದರು.

ಕೊಪ್ಪಳ ತಾಲೂಕಿನ ಬೋಚನಹಳ್ಳಿ ಗ್ರಾಮದಲ್ಲಿನ ಶ್ರೀ ಜ್ಞಾನ ಜ್ಯೋತಿ ನವೋದಯ ಕೋಂಚಿಂಗ್‌ ಸೆಂಟರ್‌ನ ಈ ವರ್ಷದ ಮೊದಲ “ಪಾಲಕರ ಸಭೆ” ನಡೆಯಿತು. ಈ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, “ಫೋಷಕರು ತಮ್ಮ ಮನೆಯಲ್ಲಿ ಮಕ್ಕಳ ಶಿಕ್ಷಣದ ಕುರಿತು ಹೆಚ್ಚು ಒತ್ತು ನೀಡುವುದಿಲ್ಲ, ಏಕೆಂದರೆ ಪೋಷಕರ ಬೇರೆ ಬೇರೆ ಜವಾಬ್ದಾರಿಗಳಿದ್ದು, ಪಾಲಕರು ಮಕ್ಕಳ ವಿದ್ಯಾಬ್ಯಾಸ ಕಡೆಗೆ ಹೆಚ್ಚು ಗಮನ ನೀಡುವುದಿಲ್ಲ, ಆದ್ದರಿಂದ ಇಂತಹ ಕೋಂಚಿಂಗ್‌ ಸೆಂಟರ್‌ಗಳಲ್ಲಿ ನಮ್ಮ ಮಕ್ಕಳ ಓದಿಗಾಗಿ ಹಗಲಿರುಳು ಶ್ರಮ ಪಡುತ್ತಾರೆ” ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಶ್ರೀ ಜ್ಞಾನ ಜ್ಯೋತಿ ನವೋದಯ ಕೋಂಚಿಂಗ್‌ ಸೆಂಟರ್‌ ಮುಖ್ಯಸ್ಥ ರಮೇಶ್‌ ಹೆಚ್‌ ಮೇಟಿ, ಪರಶುರಾಮ್‌ ಮತ್ತೂರು, ಶಂಕ್ರಪ್ಪ ಕಂಬಳಿ, ಸುರೇಶ್‌ ಹಡಪದ್‌, ಮಲ್ಲಪ್ಪ ಬಾಚಟನವರು, ಸುರೇಶ್‌ ಹಲಗೇರಿ, ಸದ್ದಾಂ ಕುಕನಪಳ್ಳಿ ಹಾಗೂ ಪೋಷಕರು, ವಿದ್ಯಾರ್ಥಿಗಳು ಇದ್ದರು.

Leave a Reply

error: Content is protected !!