ಟಣಕನಕಲ್ ಆದರ್ಶ ವಿದ್ಯಾಲಯ ದಾಖಲಾತಿ : ಆ.31ಕ್ಕೆ ಕೌನ್ಸಲಿಂಗ್

You are currently viewing ಟಣಕನಕಲ್ ಆದರ್ಶ ವಿದ್ಯಾಲಯ ದಾಖಲಾತಿ : ಆ.31ಕ್ಕೆ ಕೌನ್ಸಲಿಂಗ್

ಕೊಪ್ಪಳ : ಕೊಪ್ಪಳ ತಾಲೂಕಿನ ಟಣಕನಕಲ್ ಗ್ರಾಮದ ಆದರ್ಶ ವಿದ್ಯಾಲಯದ 6ನೇ ತರಗತಿಯ ದಾಖಲಾತಿಗೆ ಕೌನ್ಸಲಿಂಗನ್ನು ಆಗಸ್ಟ್ 31ಕ್ಕೆ ನಡೆಯಲಿದೆ ಎಂದು ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.

ಟಣಕನಕಲ್ ಆದರ್ಶ ವಿದ್ಯಾಲಯದ 2023-24ನೇ ಸಾಲಿಗೆ ಈಗಾಗಲೇ ಮೂರು ಹಂತದಲ್ಲಿ 6ನೇ ತರಗತಿಗೆ ದಾಖಲಾತಿಯನ್ನು ಮಾಡಿಕೊಳ್ಳಲಾಗಿದ್ದು, ಇನ್ನು 42 ಸೀಟುಗಳು ಖಾಲಿ ಉಳಿದಿರುತ್ತವೆ. ಈ ಖಾಲಿ ಸೀಟುಗಳ ಭರ್ತಿಗೆ 1:10 ರಂತೆ ಮೀಸಲಾತಿವಾರು ಅರ್ಹ ವಿದ್ಯಾರ್ಥಿಗಳ ಪಟ್ಟಿಯ ಪ್ರಕಾರ (ಒಂದು ಸೀಟಿಗೆ 10 ವಿದ್ಯಾರ್ಥಿಗಳಂತೆ) ಕೌನ್ಸಲಿಂಗ್ ಮೂಲಕ ದಾಖಲಾತಿಯನ್ನು ಆಯೋಜಿಸಲಾಗಿದೆ.

ಕೌನ್ಸಲಿಂಗ್ ದಿನದಂದು ಬೆಳಿಗ್ಗೆ 10ಗಂಟೆಗೆ 1:10 ಪಟ್ಟಿಯಲ್ಲಿರುವ ಅರ್ಹ ವಿದ್ಯಾರ್ಥಿಗಳು ಆದರ್ಶ ವಿದ್ಯಾಲಯ ಟಣಕನಕಲ್ ತಾ:ಕೊಪ್ಪಳ ಇಲ್ಲಿಗೆ ಸಂಬಂಧಿಸಿದ ದಾಖಲಾತಿಗಳಾದ ಆಯ್ಕೆ ಪರೀಕ್ಷೆಯ ಪ್ರವೇಶ ಪತ್ರದ ಪ್ರತಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ ಪ್ರತಿ, ಬೇರೆ ತಾಲೂಕು ಅಥವಾ ಜಿಲ್ಲೆಯ ವಿದ್ಯಾರ್ಥಿಯಾಗಿದ್ದಲ್ಲಿ ತಹಶೀಲ್ದಾರರಿಂದ ಪಡೆದ ವಾಸಸ್ಥಳ ಪ್ರಮಾಣ ಪತ್ರ ಮುಂತಾದ ದಾಖಲಾತಿಗಳೊಂದಿಗೆ ಕೌನ್ಸಲಿಂಗ್‌ಗೆ ಹಾಜರಾಗಬೇಕು.

ಅರ್ಹ ವಿದ್ಯಾರ್ಥಿಗಳ ಪಟ್ಟಿಯನ್ನು ಟಣಕನಕಲ್ ಆದರ್ಶ ವಿದ್ಯಾಲಯದಲ್ಲಿ ಮತ್ತು ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಪಾಲಕರ ಹಾಗೂ ವಿದ್ಯಾರ್ಥಿಗಳ ಮಾಹಿತಿಗಾಗಿ ಪ್ರಕಟಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Leave a Reply

error: Content is protected !!