25 ಫೀಟ್ ರಸ್ತೆ ಅಗಲೀಕರಣಕ್ಕೆ ಮಂಗಳೂರು ಗ್ರಾಮಸ್ಥರ ಒತ್ತಾಯ

25 ಫೀಟ್ ರಸ್ತೆ ಅಗಲೀಕರಣಕ್ಕೆ ಮಂಗಳೂರು ಗ್ರಾಮಸ್ಥರ ಒತ್ತಾಯ

ಕುಕನೂರು : ತಾಲೂಕಿನ ಮಂಗಳೂರು ಗ್ರಾಮದ ಮುಖ್ಯ ರಸ್ತೆ ಅಗಲೀಕರಣಕ್ಕೆ ತಾಲೂಕು ಆಡಳಿತ ಮುಂದಾಗಿದೆ, ಗ್ರಾಮಸ್ಥರು ರಸ್ತೆಯ ಮದ್ಯ ಭಾಗದಿಂದ ಎಡ ಮತ್ತು ಬಲಕ್ಕೆ 25 ಫೀಟ್ ವಿಸ್ತರಿಸಿ ಅಗಲೀಕರಣ ಮಾಡಲು ಗ್ರಾಮದ ಸಾರ್ವಜನಿಕರು, ಸಂಘ ಸಂಸ್ಥೆಗಳು ಒತ್ತಾಯಿಸಿವೆ.

ಗ್ರಾಮದ ಮಂಗಳೇಶ್ವರ ಕಲ್ಯಾಣ ಮಂಟಪ ಆವರಣದಲ್ಲಿ ಗ್ರಾಮಸ್ಥರು ರಸ್ತೆ ಅಗಲೀಕರಣ ಮತ್ತು ಸುಧಾರಣೆಗೆ ಧರಣಿ ನಡೆಸುತ್ತಿದ್ದು ತಾಲೂಕು ಆಡಳಿತ ಕೂಡಲೇ ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸಬೇಕು, ಸೂಕ್ತ ತೀರ್ಮಾನ ತೀರ್ಮಾನ ತೆಗೆದುಕೊಂಡು ಕೂಡಲೇ ಕಾಮಗಾರಿ ಪ್ರಾರಂಭಿಸಲು ಗ್ರಾಮಸ್ಥರು ಅಗ್ರಹಿಸಿದ್ದಾರೆ.

ಹಿಂದಿನ ಶಾಸಕ ಹಾಲಪ್ಪ ಆಚಾರ್ ಅವರ ಅವಧಿಯಲ್ಲಿ ಮಂಗಳೂರು ಗ್ರಾಮದ ಪ್ರಮುಖ ರಸ್ತೆಯ ಸುಧಾರಣೆಗೆ 2 ಕೋಟಿ 80 ಲಕ್ಷ ಅನುದಾನ ದೊರೆತಿದೆ, ಈಗಿನ ಶಾಸಕ ಬಸವರಾಜ್ ರಾಯರಡ್ಡಿ ಅವರು ಮತ್ತಷ್ಟು ಅನುದಾನ ನೀಡುವ ಭರವಸೆ ಕೊಟ್ಟಿದ್ದು ಗ್ರಾಮದ ಅಭಿವೃದ್ಧಿ ದೃಷ್ಟಿಯಿಂದ ರಸ್ತೆ ಮದ್ಯ ಭಾಗದಿಂದ 25 ಫೀಟ್ ವಿಸ್ತರಣೆಗೆ ಗ್ರಾಮದ ಸಂಘ ಸಂಸ್ಥೆಗಳು, ಸಾರ್ವಜನಿಕರು ತಾಲೂಕು ಆಡಳಿತಕ್ಕೆ ಒತ್ತಾಯಿಸಿದ್ದಾರೆ.

ಧರಣಿಯಲ್ಲಿ ಅಂಬೇಡ್ಕರ್ ಸೇನೆ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು, ಹಿರಿಯ ಪತ್ರಕರ್ತ ಕೊಟ್ರಪ್ಪ ಮುತ್ತಾಳ್,, ವಿಶ್ವನಾಥ್ ಮರೀಬಸಪ್ಪ, ಎಂ ಬಿ ಆಳವಂಡಿ ಸೇರಿದಂತೆ ಪ್ರಮುಖರಾದ ಮರಿಸ್ವಾಮಿ ಪೂಜಾರ್, ಆನಂದ್ ಬಂಡಿ, ನೀಲನಗೌಡ ಪಾಟೀಲ್, ಸುಭಾಸ್ ಮರಕಟ್ಟಿ, ಸುನಿಲ್ ಮುದ್ಲಾಪುರ,, ಮುತ್ತು ತಳವಾರ್, ವಿರೂಪಾಕ್ಷ ಯಡಿಯಾಪುರ ಅನೇಕರು ಇದ್ದರು.

Leave a Reply

error: Content is protected !!