ಗಾಂಧೀಜಿ ಭೇಟಿ ನೀಡಿದ್ದ ಐತಿಹಾಸಿಕ ಭಾನಾಪೂರ ರೈಲ್ವೇ ನಿಲ್ದಾಣಕ್ಕೆ ಪಾದಯಾತ್ರೆ ಕೈಗೊಂಡ ಕೊಪ್ಪಳ ಜಿಲ್ಲಾ ಕಲಾ ತಂಡ
ಗಾಂಧೀಜಿಯವರ ತತ್ವ ಹಾಗೂ ಆದರ್ಶಗಳನ್ನು ಮೈಗಡಿಸಿಕೊಳ್ಳೋಣ
ಕುಕನೂರು : ತಾಲೂಕಿನ ಭಾನಾಪೂರ ಗ್ರಾಮದಲ್ಲಿ ಕೊಪ್ಪಳ ನಗರದ ಅಶೋಕ ವೃತ್ತದಿಂದ ಪಾದಯಾತ್ರೆ ಹೊರಟು ಭಾನಾಪುರ ರೈಲ್ವೇ ನಿಲ್ದಾಣ ತಲುಪಿ ಗಾಂಧೀಜಿಯವರ ಭಾವ ಚಿತ್ರಕ್ಕೆ ಪೂಜೆಸಲ್ಲಿಸಲಾಯಿತು.
ಈ ಭಾನಾಪೂರ ಗ್ರಾಮಕ್ಕೆ 1934ರಲ್ಲಿ ಮಹಾತ್ಮ ಗಾಂಧೀಯವರು ಭೇಟಿ ನೀಡಿದ್ದರು. ಈ ವೇಳೆಯಲ್ಲಿ ತಳಕಲ್ ಗ್ರಾಮದ ಹರಿಜನ ಉದ್ದಾರಕ್ಕಾಗಿ ದೇಣಿಗೆ ಸಂಗ್ರಹಿಸಿ ನೀಡಿದ್ದ ಸುಟ್ಟವ್ವ ಹರಿಜನ್ ಅವರು, ಅಂದು ಗಾಂಧಿಯವರಿಗೆ ಬೊಗಸೆ ನೀರು ಕೊಟ್ಟು ಈ ಭಾಗದಲ್ಲಿ ಅಸ್ಪೃಶ್ಯತೆಯನ್ನು ನಿರ್ಮೂಲನೆ ಮಾಡುವುಕ್ಕೆ ನಾಂದಿ ಹಾಡಿದ್ದರು. ಇಂದು ಸುಟ್ಟವ್ವ ಹರಿಜನ್ ಅವರ ಕೊನೆಯ ಮಗ ಶೇಖಪ್ಪ ಹರಿಜನ್ ಅವರು ಹಾಗೂ ಗಾಂಧೀಜಿಯವರ ಸ್ವಾಗತ ಸಮಿತಿಯ ಅಧ್ಯಕ್ಷರ ಮಾಜಿ ಶಾಸಕ ಶಿರೂರು ವಿರಭದ್ರಪ್ಪ ಅವರ ಮಗ ದೇವಪ್ಪ ಶಿರೂರು ಮತ್ತು ಅಂದು ಗಾಂಧೀಜಿಯವರ ಭಾವಚಿತ್ರವನ್ನು ಬರೆದ ಕಾಳಪ್ಪ ಪತ್ತಾರ ಅವರ ಮಗ ಶಂಕರ್ ಪತ್ತಾರ್ ಅವರನ್ನು ಗ್ರಾಮಸ್ಥ ಹಾಗೂ ಗ್ರಾಮ ಪಂಚಾಯತ ವತಿಯಿಂದ ಗೌರವಿಸಿ, ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು ಹಾಗೂ ಭಾರತ ಸೇವಾದಳದ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಹಿರೇಮಠ, “ಹೈದ್ರಾಬಾದ್ ಕರ್ನಾಟಕದಲ್ಲಿಯೇ ಗಾಂಧೀಜಿ ಭೇಟಿ ನೀಡಿದ್ದ ಐತಿಹಾಸಿಕ ಸ್ಥಳ ಭಾನಾಪೂರ ರೈಲ್ವೇ ನಿಲ್ದಾಣದ ವಾಗಿದ್ದು, ಇಲ್ಲಿ ಗಾಂಧೀಜಿಯವರ ಪುತ್ತಳಿ ನಿರ್ಮಾಣವಾಗಬೇಕು ಹಾಗೂ ರೈಲ್ವೇ ನಿಲ್ದಾಣಕ್ಕೆ ಗಾಂಧಿ ರೈಲ್ವೇ ನಿಲ್ದಾಣವೆಂದು ನಾಮಕರಣವಾಗಬೇಕು ಎಂದು ಒತ್ತಾಯಿಸಿದರು.
LOCAL NEWS : ಸ್ವಚ್ಛತೆ ಇದಲ್ಲಿ ದೇವರು ನೆಲೆಸಿರುತ್ತಾನೆ : ಸಿ.ಇ.ಓ ರಾಹುಲ್ ರತ್ನಮ್ ಪಾಂಡೆ
ಇದೇ ವೇಳೆ ದೇವಪ್ಪ ವಿರಭದ್ರಪ್ಪ ಶಿರೂರು ಮಾತನಾಡಿ, ” ಸ್ವಾತಂತ್ರ್ಯ ಚಳುವಳಿ ಆರಂಭೀಕ ದಿನಗಳಲ್ಲಿ ಗಾಂಧೀಜಿಯವರು ಭೇಟಿ ನೀಡಿದ್ದ ಐತಿಹಾಸಿಕ ಸ್ಥಳ ಹಾಗೂ ಪುಣ್ಯ ಭೂಮಿ ಭಾನಾಪೂರ. ಸರ್ವೇ ಜನಾಃ ಸುಖಿನೋ ಭವಂತು ಎಂಬ ನುಡಿಯಂತೆ ಮಹಾತ್ಮ ಗಾಂಧಿಯವರು ಬಯಸಿದ್ದರು. ಭಾರತದ ಐಕ್ಯತೆಗಾಗಿ ಹಾಗೂ ಸ್ವಾತಂತ್ರ್ಯಕ್ಕಾಗಿ ಸಾಕಷ್ಟು ಅವೀರತವಾಗಿ ಶ್ರಮಿಸಿ ಬ್ರೀಟಿಸರ ವಿರುದ್ಧ ಶಾಂತಿಯಿಂದ ಅಹಿಂಸಾ ತತ್ವದಿಂದ, ಅಸಹಕಾರ ಚಳುವಳಿಯಿಂದ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹಾನ್ ಪುರುಷ ಗಾಂಧಿಜೀಯವರು” ಎಂದರು.
ದೇವಪ್ಪ ವಿರಭದ್ರಪ್ಪ ಶಿರೂರು ಅವರು ಈ ವೇಳೆ ಭಾವುಕ ನುಡಿಗಳಿಂದ ತಮ್ಮ ತಂದೆಯವರಾದ ವಿರಭದ್ರಪ್ಪ ಶಿರೂರು ಅವರನ್ನು ನೆನೆದರು. ವಿರಭದ್ರಪ್ಪ ಶಿರೂರು ಅವರ ಕೊನೆಯ ದಿನಗಳನ್ನು ಮೆಲುಕು ಹಾಕುತ್ತಾ ಅವರ ತಂದೆಯವರು ದೈವಾಧಿನರಾದಾಗ ಅವರ ಪಾರ್ಥೀವ ಶಿರೀರವನ್ನು ಆಸ್ಪತ್ರೆಯಿಂದ ಕೊಂಡ್ಯೊಯಲು ಅವರ ಕಡೆ ಹಣ ವಿರಿದ ಪರಿಸ್ಥಿತಿಯನ್ನು ವಿವರಿಸಿದರು.
ಇದೇ ಸಂದರ್ಭದಲ್ಲಿ ಗಾಂಧಿಜೀಯವರ ಚಿತ್ರ ಬಿಡಿಸಿದ ಕಾಳಪ್ಪ ಪತ್ತಾರ್ ಅವರ ಮಗ ಕಲಾವಿದ ಶಂಕರ್ ಪತ್ತಾರ್, ಸುಟ್ಟವ್ವ ಹರಿಜನ್ ಪುತ್ರ ಶೇಖಪ್ಪ ಹರಿಜನ್ ಹಾಗೂ ದೇವಪ್ಪ ವಿರಭದ್ರಪ್ಪ ಶಿರೂರು ಗೌರವಿಸಿ, ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಗಾಂಧಿ ಚಿತ್ರ ಬಿಡಿಸಿದ ಕಾಳಪ್ಪ ಪತ್ತಾರ್ ಅವರ ಮಗ ಕಲಾವಿದ ಶಂಕರ್ ಪತ್ತಾರ್, ಸುಟ್ಟವ್ವ ಹರಿಜನ್ ಪುತ್ರ ಶೇಖಪ್ಪ ಹರಿಜನ್, ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಎ. ಬಸವರಾಜ್, ಕೊಪ್ಪಳ ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿ ಶಂಕ್ರಯ್ಯ, ಕರಿಯಪ್ಪ ಹಳ್ಳಿಕೇರಿ ಗ್ರಾ.ಪಂ. ಅಧ್ಯಕ್ಷರು ಭಾನಾಪೂರ್, ಶಿಕ್ಷಕರ ಕಲಾ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಶ್ಯಾಮಿ, ಕಲರವ ಶಿಕ್ಷಕರ ಸಂಘದ ಕೊಪ್ಪಳ ಪದಾಧಿಕಾರಿಗಳು, ಪ್ರಜಾವಾಣಿ ಜಿಲ್ಲಾ ವರದಿಗಾರ ಪ್ರಮೋದ್, ಲೇಖಕ ನಾಗರಾಜ್ ಡೋಳ್ಳಿನ್, ರಮೇಶ್ ತೀಮ್ಮರೆಡ್ಡಿ ಪಿಡಿಓ ಗ್ರಾ.ಪಂ. ಭಾನಾಪೂರ್ ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಭಾಗವಹಿಸಿದ್ದರು. ಶಿಕ್ಷಕ ಪ್ರಾಣೇಶ್ ಕಾರ್ಯಕ್ರಮ ನಿರೂಪಣೆ ಮಾಡಿದರು. ವಿಕಲಚೇತನ ಶಿಕ್ಷಕರ ಫಕಿರಪ್ಪ ಅವರು ಪಾದಯಾತ್ರೆಯಲ್ಲಿ ಭಾಗವಹಿಸಿದವರಿಗೆ ಕಾಳು ಮತ್ತು ನೀರಿನ ವ್ಯವಸ್ಥೆ ಮಾಡಿದರು.