ಯಲಬುರ್ಗಾ: ಇತ್ತೀಚಿಗೆ ಜಿಲ್ಲೆಯಲ್ಲಿ ಇಸ್ಪೀಟ್, ಮಟ್ಕಾ ಹಾಗೂ ಕ್ರೀಕೆಟ್ ಬೆಟ್ಟಿಂಗ್ ಹೆಚ್ಚಾಗುತ್ತಿದ್ದು, ಇವುಗಳು ರಾಜಕೀಯ ಪ್ರೇರಿತವಾಗಿ ಹಾಗೂ ಪೊಲೀಸ್ ಕೇಲ ಅಧಿಕಾರಿಗಳ ಸಾಥ್ ನೀಡುತ್ತಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಇದಕ್ಕೆ ಜೀವಂತ ಉದಾರಹಣೆ ಎನ್ನುವಂತೆ ಪಟ್ಟಣದ ಪೊಲೀಸ್ ಠಾಣೆಯ ತಮ್ಮನಗೌಡ, ವೆಂಕಟೇಶ್, ಮತ್ತು ಗಂಗಾಧರ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ಇವರು ಇಸ್ಪೀಟ್ ಆಟದ ಅಡ್ಡೆಗಳ ಮೇಲೆ ದಾಳಿ ನಡೆಸಿ, ವಶಕ್ಕೆ ಪಡೆದ ಹಣವನ್ನು ಸ್ವಂತ ಕರ್ಚಿಗಾಗಿ ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು. ಇಷ್ಟೆಲ್ಲ ಘಟನೆ ನಡೆದರೂ ಇಲಾಖೆ ಮಾತ್ರ ಮೌನವಹಿಸಿತ್ತು. ಇದೀಗ ದಾಖಲೆಗಳ ಸಮೇತ ಸಾರ್ವಜನಿಕರು ದೂರು ಕೊಟ್ಟಿದ್ದರ ಪರಿಣಾಮ ವಿಚಾರಣೆ ಕೈಗೊಂಡು ಕರ್ತವ್ಯಲೋಪ ಹಾಗೂ ಹಣ ದುರುಪಯೋಗ ಮಾಡಿಕೊಂಡಿದ್ದು, ಸಾಬಿತಾದ ಹಿನ್ನಲೆಯಲ್ಲಿ ಮೂವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ಕೊಪ್ಪಳ ಜಿಲ್ಲಾ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ತಿಳಿಸಿದ್ದಾರೆ.