ಲೋಕಸಭೆ ಚುನಾವಣೇಲಿ ನನ್ನನ್ನೇ ಸೋಲಿಸಿ ಬಿಟ್ಟಿದ್ರು : ಅನ್ಸಾರಿ ಮುನಿಸಿಗೆ ಸಿ. ಎಂ. ಸಿದ್ದರಾಮಯ್ಯ ಮದ್ದು.!!!!

You are currently viewing ಲೋಕಸಭೆ ಚುನಾವಣೇಲಿ ನನ್ನನ್ನೇ ಸೋಲಿಸಿ ಬಿಟ್ಟಿದ್ರು : ಅನ್ಸಾರಿ ಮುನಿಸಿಗೆ ಸಿ. ಎಂ. ಸಿದ್ದರಾಮಯ್ಯ ಮದ್ದು.!!!!

ಲೋಕಸಭೆ ಚುನಾವಣೇಲಿ ನನ್ನನ್ನೇ ಸೋಲಿಸಿ ಬಿಟ್ಟಿದ್ರು : ಅನ್ಸಾರಿ ಮುನಿಸಿಗೆ ಸಿ. ಎಂ. ಸಿದ್ದರಾಮಯ್ಯ ಮದ್ದು.!!!!

ಕೊಪ್ಪಳ : ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮ್ಮವರೇ ನನ್ನನ್ನು ಸೋಲಿಸಿಬಿಟ್ರು ಎಂದು ಸ್ವಪಕ್ಷದ ನಾಯಕರ ವಿರುದ್ಧವೇ ಮುನಿಸಿಕೊಂಡಿದ್ದ ಕಾಂಗ್ರೆಸ್ ಪಕ್ದದ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಮನೆಗೆ ಖುದ್ದು ಸಿ ಎಂ ಸಿದ್ದರಾಮಯ್ಯ ಅವರು ಭೇಟಿ ನೀಡಿ ಅನ್ಸಾರಿ ಮುನಿಸಿಗೆ ಮದ್ದು ಅರೆದಿದ್ದಾರೆ.

ಅಷ್ಟೇ ಅಲ್ಲ ಪಕ್ಷದ ಕೆಲ ನಾಯಕರ ವಿರುದ್ದ ಇಕ್ಬಾಲ್ ಅನ್ಸಾರಿ ಅವರು ಸಿದ್ದರಾಮಯ್ಯ ಅವರ ಮುಂದೆ ಅಸಮಾಧಾನ ತೋಡಿಕೊಂಡಿದ್ದಾರೆ ಎನ್ನಲಾಗಿದೆ. ಇದೆಲ್ಲವನ್ನು ಗಮನಿಸಿರುವ ಮುಖ್ಯಮಂತ್ರಿಗಳು ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನ ಮಾನದ ಭರವಸೆ ನೀಡಿ ಸಮಾಧಾನ ಪಡಿಸಿದ್ದಾರೆ ಎನ್ನಲಾಗಿದೆ.



  1. ಕನಕಗಿರಿ ಉತ್ಸವದಲ್ಲಿ ಭಾಗವಹಿಸಲು  ಕೊಪ್ಪಳಕ್ಕೆ ಬಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರ ಗಂಗಾವತಿ ನಿವಾಸಕ್ಕೆ ಭೇಟಿ ಕೊಟ್ಟು ಕೆಲ ಹೊತ್ತು ಸಮಯ ಕಳೆದು ಅನ್ಸಾರಿಯವರನ್ನು ಸಮಾಧಾನ ಮಾಡಿದ್ದಾರೆ ಎನ್ನಲಾಗಿದೆ . 1991 ರ ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳದಿಂದ ಸ್ಪರ್ಧೆ ಮಾಡಿದ್ದ ನಾನೂ ಸೋತಿದ್ದೆ, ನನ್ನನ್ನೂ ಸೋಲಿಸಿಬಿಟ್ಟಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದಿನ ಘಟನೆಯನ್ನು ಮೆಲುಕು ಹಾಕಿದ್ದಾರೆ..

Leave a Reply

error: Content is protected !!