“ಅಂತರಾಷ್ಟ್ರೀಯ ಮಹಿಳಾ ದಿನ” ಆಚರಣೆಯ ಇತಿಹಾಸ
ಮಹಿಳಾ ದಿನಾಚರಣೆಯನ್ನು ಕಳೆದ ಒಂದು ಶತಕದಿಂದಲೂ ಪ್ರತಿ ವರ್ಷ ಸಂಭ್ರಮಿಸಲಾಗುತ್ತಿದೆ. 1911 ರಲ್ಲಿ ಡೆನ್ಮಾರ್ಕ್, ಆಸ್ಟ್ರೀಯ, ಜಮರ್ನಿ, ಸ್ವಜರ್‌ಲ್ಯಾಂಡ್ ದೇಶಗಳಲ್ಲಿ ದಶಲಕ್ಷಗಟ್ಟಲೇ ಜನರು ಒಂದು ಕಡೆ ಸೇರುವ ಮೂಲಕ ಮಹಿಳೆಗೆ ವಿಶೇಷವಾಗಿ ಗೌರವ ನೀಡುವುದಕ್ಕೆ ಮಹಿಳಾ ದಿನಾಚರಣೆಯನ್ನು ಆಚರಿಸಲು ಆರಂಭಿಸಿದರು. ಬಳಿಕ ಅಮೆರಿಕ, ಬ್ರಿಟನ್‌ಗಳು ಸೇರಿದಂತೆ ಹಲವು ದೇಶಗಳಲ್ಲಿನ ಸಮಾಜವಾದಿ ಪಕ್ಷಗಳು ಹೆಚ್ಚು ಪ್ರಚಾರ ಮಾಡುವ ಮೂಲಕ ಇಂದು ಬಹು ಸಂಖ್ಯಾತ ದೇಶಗಳಲ್ಲಿ ವಿಶೇಷ ದಿನವಾಗಿ ವಿಶ್ವ ಮಹಿಳಾ ದಿನಾಚರಣೆ ಆಗಿ ಆಚರಣೆ ಮಾಡಲಾಗುತ್ತದೆ.
‘ಅಂತರಾಷ್ಟ್ರೀಯ ಮಹಿಳೆಯರ ದಿನ’ವನ್ನು ಪ್ರಥಮ ಬಾರಿಗೆ ಕೂಲಿ ಚಳುವಳಿಯ ಮೂಲಕ (Labour Movement) ಉತ್ತರ ಅಮೆರಿಕ ಮತ್ತು ಯೂರೋಪ್ ದೇಶಗಳಲ್ಲಿ ಪ್ರಾರಂಭಿಸಲಾಯಿತು. ಇದಾದ ಬಳಿಕ ಮಹಿಳಾ ದಿನಾಚರಣೆ ಮೂಲಕ ಲಿಂಗ ಸಮಾನತೆ ರೂಪಿಸುವಲ್ಲಿ ಪ್ರತಿಯೊಬ್ಬರ ಪಾತ್ರವಿದೆ ಎಂಬ ಅಂಶವನ್ನು ಬಲವಾಗಿ ಸಾರಲು ಈ ದಿನ ಒಂದು ದೊಡ್ಡ ವೇದಿಕೆ ಆಗಿರುತ್ತದೆ. ಅಲ್ಲದೇ ದೇಶಕ್ಕೆ, ಪ್ರಪಂಚಕ್ಕೆ ಮಹಿಳಾ ಸಾಧಕರ ಕೊಡುಗೆಗಳನ್ನು ನೆನೆದು ಸಾರುವ ವಿಶಿಷ್ಟವಾದ ದಿನವಿದು. 1975 ರ ಮಾರ್ಚ್ 8 ರ ‘ಅಂತರರಾಷ್ಟ್ರೀಯ ಮಹಿಳಾ ದಿನ’ದಿಂದ ಸಂಯುಕ್ತ ರಾಷ್ಟ್ರಗಳು ‘ಮಹಿಳಾ ದಿನ’ವನ್ನ ಆಚರಿಸಲು ಆರಂಭಿಸಿದವು. ಇದು ಇದರ ಸಂಕ್ಷಿಪ್ತ ಮಾಹಿತಿ.