ಏ.6 ರಂದು ದವನದ ಹುಣ್ಣಿಮೆ ದಿನ ಕಾಲಕಾಲೇಶ್ವರನ ರಥೋತ್ಸವ

You are currently viewing ಏ.6 ರಂದು ದವನದ ಹುಣ್ಣಿಮೆ ದಿನ ಕಾಲಕಾಲೇಶ್ವರನ ರಥೋತ್ಸವ

ಗಜೇಂದ್ರಗಡ : ಇಲ್ಲಿನ ದಕ್ಷಿಣ ಕಾಶಿ ಎಂದೇ ಹೆಸರು ಪಡೆದಿರುವ ಇಲ್ಲಿನ ಕಾಲಕಾಲೇಶ್ವರನ ರಥೋತ್ಸವ ದವನದ ಹುಣ್ಣಿಮೆ ದಿನವಾದ ಏ.೬ರಂದು ನಡೆಯಲಿದೆ. ಇಂದು ಬೆಳಿಗ್ಗೆ ಕಾಲಕಾಲೇಶ್ವರನಿಗೆ ವಿಶೇಷ ಪೂಜೆ ನಡೆಯಲಿದೆ. ಸಂಜೆ ಚಿತ್ತಾ ನಕ್ಷತ್ರದಲ್ಲಿ ರಥೋತ್ಸವಕ್ಕೆ ಚಾಲನೆ ಲಭಿಸುತ್ತದೆ.
ದೇವರ ದರ್ಶನಕ್ಕೆ ಬರುವ ಭಕ್ತರು ದೇವರಿಗೆ ದವನ ಸಮರ್ಪಿಸಿ, ಪೂಜೆ ಸಲ್ಲಿಸುತ್ತಾರೆ. ರಥೋತ್ಸವದ ನಂತರ ದವನ, ಕಬ್ಬುಗಳನ್ನು ಕೊಂಡು ಊರಿಗೆ ಮರಳುತ್ತಾರೆ.ಈ ಜಾತ್ರೆಗೆ ಯುಗಾದಿ ಪಾಡ್ಯದಿಂದ ಚಾಲನೆ ದೊರೆಯುತ್ತದೆ. ಪಾಡ್ಯದಂದು ರಥದ ಕೋಣೆಯಿಂದ ಬೊಳು ರಥವನ್ನು ಐದು ಹೆಜ್ಜೆ ಎಳೆದು ಪೂಜೆ ಸಲ್ಲಿಸಿ ಭಕ್ತರಿಗೆ ಬೇವು, ಬೆಲ್ಲ ವಿತರಿಸಲಾಗುತ್ತದೆ.
ರಥೋತ್ಸವದ 9 ದಿನಗಳ ಮೊದಲು ರಾತ್ರಿ ದೇವಸ್ಥಾನದಲ್ಲಿ ಕಾಲಕಾಲೇಶ್ವರ ಹಾಗೂ ಬೋರಾದೇವಿಯ ಬಸವ ಪಟ (ಲಗ್ನ ಪತ್ರಿಕೆ) ಕಟ್ಟಿಸಲಾಗುತ್ತದೆ. ಅಂದಿನಿಂದ 9 ದಿನಗಳ ಕಾಲ ಪ್ರತಿದಿನ ರಾತ್ರಿ ಒಂದೊoದು ವಾಹನದ ಮೇಲೆ ಕಾಲಕಾಲೇಶ್ವರ ಹಾಗೂ ಬೋರಾದೇವಿಯ ಉಚ್ಚಯ್ಯ ಎಳೆಯಲಾಗುತ್ತದೆ. ರಥೋತ್ಸವದ ಹಿಂದಿನ ದಿನ ಮದುವೆ ನಡೆಸಿ ಮರುದಿನ ರಥೋತ್ಸವದಲ್ಲಿ ಮೆರವಣಿಗೆ ಮಾಡಲಾಗುತ್ತದೆ.ಅಲ್ಲದೇ ರಥೋತ್ಸವದ ಹಿಂದಿನ ದಿನ ಸಮೀಪದ ರಾಜೂರು ಗ್ರಾಮದಿಂದ ಕಳಸವನ್ನು ಮೆರವಣಿಗೆಯಲ್ಲಿ ಹೊತ್ತು ತಂದು ರಥದ ಮೇಲಿಟ್ಟು ರಥವನ್ನು ಸಿಂಗರಿಸಲಾಗುತ್ತದೆ. ರಥೋತ್ಸವದ ದಿನ ಸಂಜೆ ರಾಜೂರು ಗ್ರಾಮದಿಂದ ರಥದ ಹಗ್ಗವನ್ನು ಮೆರವಣಿಗೆಯಲ್ಲಿ ತರಲಾಗುತ್ತದೆ.ನಾಡಿನ ವಿವಿಧ ಪ್ರದೇಶಗಳಿಂದ ಸಾವಿರಾರು ಭಕ್ತರು ರಥೋತ್ಸದಲ್ಲಿ ಭಾಗವಹಿಸಿ ರಥಕ್ಕೆ ಉತ್ತತ್ತಿ, ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸುತ್ತಾರೆ.
ಐತಿಹ್ಯ

Leave a Reply

error: Content is protected !!