ಗದಗ ಜಿಲ್ಲಾ ಮುಂಡರಗಿ ಪಟ್ಟಣದಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಕುಂದುಕೊರತೆ ಸಭೆ
PV ನ್ಯೂಸ್ ಡೆಸ್ಕ್ – ಗದಗ : ಮುಂಡರಗಿ ತಾಲೂಕಿನಲ್ಲಿ ದಲಿತ ಕುಂದುಕೊರತೆ ಸಭೆಯು ನರಗುಂದ ಡಿ ವೈ ಎಸ್ ಪಿ ಪ್ರಭುಗೌಡ ಕಿರೇಗೌಡ್ರು ಅಧ್ಯಕ್ಷತೆಯಲ್ಲಿ ನೆರವೇರಿತು.
ಈ ಸಭೆಯಲ್ಲಿ ದಲಿತರ ಮುಖಂಡರಾದ ಎಚ್ ಡಿ ಪೂಜಾರ್ ಅವರು ಮಾತನಾಡಿ ಅನೇಕ ಕುಂದು ಕೊರತೆಗಳನ್ನು ಆಲಿಸಿದರು ಅವುಗಳ್ಳಲ್ಲಿ ಸರ್ಕಾರಿ ಕಚೇರಿಗಳಲ್ಲಿ ದೊರೆಯುವ ಯೋಜನೆಗಳು ಅರ್ಹ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ದೊರೆಯುತ್ತಿಲ್ಲ.ದಲಿತ ದೌರ್ಜನ್ಯ ಕಾಯಿದೆಯ ನಾಮ ಫಲಕವನ್ನು ಎಲ್ಲಾ ಸರಕಾರಿ ಕಛೇರಿಗಳಲ್ಲಿ ಹಾಕಬೇಕು. ಶಿಂಗಟಾಲೂರ ಗ್ರಾಮದಲ್ಲಿ ಅಸ್ಪೃಶ್ಯತೆ ಹೆಚ್ಚಾಗಿದ್ದು ಅಸ್ಪೃಶ್ಯತೆ ನಿರ್ಮೂಲನೆ ಮಾಡದೆ ಸಿಂಗಟಾಲೂರ ಗ್ರಾಮದಲ್ಲಿ ಮೌಢ್ಯದ ಕತ್ತಲೆಗೆ ಜನರನ್ನು ನೂಕುತ್ತಿದ್ದಾರೆ.ದಲಿತ ಕುಟುಂಬಗಳ ಕಟಿಂಗ್ ಮಾಡದೆ ಅಂಗಡಿ ಬಂದ್ ಮಾಡಿ ಸವರ್ಣಿಯರ ಮನೆ,ಮನೆಗೆ ಧಾವಿಸಿ ಕಟಿಂಗ್ ಮಾಡುತ್ತಿದ್ದಾರೆ.ಇದು ಅಧಿಕಾರಿಗಳ ಗಮನಕ್ಕೆ ಬಂದರೂ ಅದನ್ನು ಕಂಡು ಕಾಣದವರಂತೆ ವರ್ತಿಸುತ್ತಿರುವುದು ಅಂಬೇಡ್ಕರರ ಕನಸಿಗೆ ಕೊಳ್ಳಿ ಇಟ್ಟಂತಾಗಿದೆ.ಶಿಂಗಟಾಲೂರ ಎಸ್.ಸಿ ಕಾಲೋನಿಯಿಂದ ಸಂತೆ, ಪ್ರಾಥಮಿಕ ಶಾಲೆ, ಪಂಚಾಯಿತಿ ಸಂಪರ್ಕಿಸುವ ರಸ್ತೆಯಲ್ಲಿ ಅಕ್ರಮವಾಗಿ ನಿರ್ಮಿಸಲಾದ ಮನೆ ತೆರವುಗೊಳಿಸಿ ರಸ್ತೆ ನಿರ್ಮಿಸುವುದು.ಕೊಟ್ಟಿ ಜಾತಿ ಪ್ರಮಾಣ ಪತ್ರ ರದ್ದು ಮಾಡಬೇಕು. ಮುಂಡರಗಿ ತಾಲೂಕಿನ ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಕಾನೂನಿನ ಅರಿವು ಮೂಡಿಸಬೇಕು.ಮುಂಡರಗಿ ತಾಲೂಕಿನ 52 ಗ್ರಾಮಗಳ ಗಂಭೀರ ಸಮಸ್ಯೆಗಳ ಬಗ್ಗೆ ಚರ್ಚಿಸಿ ಕ್ರಮ ಜರುಗಿಸಲು ಸ್ಥಾನಿಕ ವೀಕ್ಷಣೆ ನಡೆಸಬೇಕು. ಮಧ್ಯಪಾನ,ಜೂಜು, ಇಸ್ಪೀಟ್ ದಂಧೆಕೋರರ ಕಡಿವಾನ ಹಾಕಬೇಕು ಎಂದು .ಪರಿಶಿಷ್ಠ ಜಾತಿ, ಪಂಗಡದ ಇನ್ನೂ ಹತ್ತಾರು ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಮುಂಡರಗಿ ತಾಲೂಕಿನ ದಲಿತ ಪರ ಸಂಘಟನೆಗಳು ಅಗ್ರಹಿಮಾಡಿದರು. ಸಭೆಯಲ್ಲಿ ತಾಲೂಕ ದಂಡಾಧಿಕಾರಿಗಳಾದ ಎರ್ರಿ ಸ್ವಾಮಿ. ಪಿ ಎಸ್. ಸಿಪಿಐ ಮಂಜುನಾಥ್ ಕುಸಗಲ್. ಪಿಎಸ್ಐ ವಿ. ಜಿ. ಪವಾರ ಹಾಗೂ ತಾಲೂಕ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಸಂಚಾಲಕರು ಎಚ್. ಡಿ ಪೂಜಾರ. ದಲಿತ ಸಂಘರ್ಷ ಸಮಿತಿ ಸಂಚಾಲಕರು ಸೋಮಣ್ಣ ಹೈತಾಪುರ್.ನಾಗರಾಜ್ ಹೊಸಮನಿ.ಲಕ್ಷ್ಮಣ್ ತಗಡಿನಮನಿ.ದುರ್ಗಪ್ಪ ಹರಿಜನ್.ಮಾರುತಿ ಹೊಸಮನಿ. ಸಂತೋಷ ಅಡಗಲಿ,ಮೈಲಾರಪ್ಪ ಕಲಿಕೇರಿ,ಅಡಿವೆಪ್ಪ ಚಲವಾದಿ ಹಾಗೂ ಮುಂಡರಗಿ ತಾಲೂಕಿನ ಅನೇಕ ದಲಿತ ಸಂಘಟನೆಗಳ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಸಭೆಯಲ್ಲಿ ಉಪಸಿತರಿದ್ದರು.