ಪ್ರತಿಯೊಬ್ಬ ಮನುಷ್ಯ ಒಂದೊಂದು ಸಸಿ ನೆಟ್ಟು ಪರಿಸರವನ್ನು ಕಾಪಾಡಬೇಕು: ರಮೇಶ್ ನಿರ್ವಾಣ ಶೆಟ್ಟರ್!!
ಶಿರಹಟ್ಟಿ : ತಾಯಿ ಯಾವಾಗಲೂ ಪ್ರಕೃತಿಯ ಸ್ವರೂಪ ಎಂದು ಹೆಸರನ್ನು ಅಮರವಾಗಿರಿಸಲು ಪ್ರತಿಯೊಬ್ಬ ಮನುಷ್ಯ ಒಂದೊಂದು ಸಸಿಯನ್ನು ನೆಟ್ಟು ಪರಿಸರವನ್ನು ಕಾಪಾಡಬೇಕು. ಪರಿಸರ ಪ್ರೇಮವನ್ನು ಬೆಳಸಿಕೊಳ್ಳಬೇಕು ಎಂದು ಬೆಳ್ಳಟ್ಟಿ ಗ್ರಾಮದ ಪಂಚಾಯಿತಿ ಅಧ್ಯಕ್ಷ ರಮೇಶ್ ನಿರ್ವಾಣಶೆಟ್ಟರ್ ಅವರು ಹೇಳಿದರು.
ಬೆಳ್ಳಟ್ಟಿ ಗ್ರಾಮ ಪಂಚಾಯಿತಿ ತೋಟಗಾರಿಕೆ ಇಲಾಖೆ ಹಾಗೂ ಸಾಮಾಜಿಕ ಅರಣ್ಯ ಇಲಾಖೆಗಳ ಸಹಯೋಗದಲ್ಲಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಜರುಗಿದ ತಾಯಿಯ ಹೆಸರಲ್ಲಿ ಒಂದು ವೃತ್ತ ಅಭಿಯಾನ ಕಾರ್ಯಕ್ರಮಕ್ಕೆ ಬೆಳ್ಳಟ್ಟಿಯ ಕರ್ನಾಟಕ ಪಬ್ಲಿಕ್ ಹೆಣ್ಣು ಮಕ್ಕಳ ಶಾಲೆಯಲ್ಲಿ ಚಾಲನೆಯನ್ನು ನೀಡಿದ ಆರ್ ವಿ ದೊಡ್ಮನೆ ಅವರು ನಂತರ ಮಾತನಾಡುತ್ತಾ, ತಾಯಿಯ ಋಣವನ್ನು ತೀರಿಸಲು ಯಾರಿಂದಲೂ ಸಾಧ್ಯವಿಲ್ಲ ಆದರೆ ಈ ಮೂಲಕವಾದರೂ ತಾಯಿಯ ಹೆಸರಿನಲ್ಲಿ ಸಸಿ ಬೆಳೆಸಿ ಪ್ರಕೃತಿಗೆ ಕೊಡುಗೆಯಾಗಿ ನೀಡಬೇಕೆಂದು ತಿಳಿಸಿದರು. ಪರಿಸರವನ್ನು ನಾವು ಹಸಿದಾಗಿರಿಸಿದರೆ ಅದು ನಮಗೆ ಒಳ್ಳೆಯ ಉಸಿರನ್ನು ನೀಡುತ್ತದೆ. ಹಸಿರೇ ಉಸಿರಾಗಬೇಕು ಎಂದು ಮಾತನಾಡಿದರು.
ಈ ವೇಳೆ ಗ್ರಾಮ ಪಂಚಾಯತ್ ಸದಸ್ಯರಾದ ತಿಮ್ಮರೆಡ್ಡಿ ಮರಡ್ಡಿ, ಮೋಹನ್ ಗುತ್ಯಮ್ಮನವರ, ಸುರೇಶ್ ರೆಡ್ಡಿ ಬಸವ ರೆಡ್ಡಿ, ದ್ಯಾಮಣ್ಣ ಮಾಳಮ್ಮನವರ್,
ಪಿ ಡಿ ಒ ಹನುಮಂತಪ್ಪ ತಳವಾರ್, ಕಾರ್ಯದರ್ಶಿ ಬಸವರಾಜ ಉಪಲವಯ್ಯ ಅರಣ್ಯ ಅಧಿಕಾರಿ ಕೋಣಪ್ಪನವರ, ಸಹಾಯಕ ತೋಟಗಾರಿಕೆ ನಿರ್ದೇಶಕರು ರಮೇಶ್ ಹಾವರೆಡ್ಡಿ, ಸಹಾಯಕ ತೋಟಗಾರಿಕೆ ಅಧಿಕಾರಿ ಲಕ್ಷ್ಮಿ ಗಾಣಿಗೇರ, ಮಂಜುನಾಥ ಸ್ವಾಮಿ ಎಚ್ ಎಮ್ ತಾಲೂಕ ನರೇಗಾ ಸಿಬ್ಬಂದಿ. ಜಿಕೆಎಂ ವಿಶಾಲಾಕ್ಷಿ ಶಾಲಾ ಶಿಕ್ಷಕರು ಎಸ್ ಡಿ ಎಂ ಸಿ ಅಧ್ಯಕ್ಷರು ಹಾಗೂ ಸದಸ್ಯರು, ವಿದ್ಯಾರ್ಥಿಗಳು ಭಾಗಿಯಾಗಿದ್ದರು.