ಪ್ರಜಾವೀಕ್ಷಣೆ ವಿಶೇಷ ವರದಿ
ಕುಕನೂರು : ಕುಕನೂರು ಪಟ್ಟಣದಿಂದ ಬನ್ನಿಕೊಪ್ಪ ಮಾರ್ಗವಾಗಿ ಮುಂಡರಗಿಗೆ ಸಂಚರಿಸುವ ಬಸ್ ಸಂಚಾರವನ್ನು ಬಂದ್ ಮಾಡಲಾಗಿದೆ ಎಂದು ಕುಕನೂರು ಬಸ್ ಘಟಕದ ವ್ಯವಸ್ಥಾಪಕರು ಕವಲೂರು ಗ್ರಾಮ ಪಂಚಾಯಿತಿ ಪತ್ರವನ್ನು ಬರೆದಿದ್ದಾರೆ.
ಬಸ್ ಸಂಚಾರ ಬಂದ್ ಮಾಡಲು ಕಾರಣ, ಕುಕನೂರು ಪಟ್ಟಣದಿಂದ ಬನ್ನಿಕೊಪ್ಪ ಹಾಗೂ ಕವಲೂರು ಮಾರ್ಗವಾಗಿ ಮುಂಡರಗಿಗೆ ನಿತ್ಯ ಬಸ್ ಸಂಚರಿಸುತ್ತಿತ್ತು. ಆದರೆ ಬನ್ನಿಕೊಪ್ಪ ಸೀಮಾದ ಬಳಿಕ ಕವಲೂರು ಸೀಮಾದ ರಸ್ತೆ ಸಂಪೂರ್ಣ ಹಾಳಾಗಿದ್ದು ಇದರಿಂದ ಸಂಸ್ಥೆಯ ವಾಹನಗಳು ದಿನದಿಂದ ದಿನಕ್ಕೆ ಅವಗಡಗಳು ಉಂಟಾಗುತ್ತಿವೆ. ಆದ್ದರಿಂದ ಬಸ್ ಸಂಚಾರವನ್ನು ಬಂದ್ ಮಾಡಿದ್ದೇವೆ. ರಸ್ತೆಯನ್ನು ಸುಧಾರಿಸಿದ ನಂತರ ಬಸ್ ಸಂಚಾರವನ್ನು ಪ್ರಾರಂಭ ಮಾಡುತ್ತೇವೆ ಎಂದು. ಕುಕನೂರು ಸಾರಿಗೆ ವ್ಯವಸ್ಥಾಪಕರು ಕವಲುರು ಗ್ರಾಮ ಪಂಚಾಯಿತಿಗೆ ಪತ್ರವನ್ನು ಬರೆದಿದ್ದಾರೆ. ಇದೀಗ ಈ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಕವಲೂರು ಸೀಮಾ ವ್ಯಾಪ್ತಿಯಲ್ಲಿ ರಸ್ತೆ ಸುಧಾರಣೆ ಮಾಡುವಂತೆ ಸಾರ್ವಜನಿಕರು ಸಂಬಂಧಿಸಿದ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಸಾಮಾಜಿಕ ಜಾಲ ತಾಣದ ಮೂಲಕ ತಮ್ಮ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ.
ಇತ್ತ ಬಸ್ ಇಲ್ಲದೇ ನಿತ್ಯ ಅದೇ ಬಸ್ ಮೂಲಕ ಸಂಚರಿಸುತ್ತಿದ್ದ ಪ್ರಯಾಣಿಕರು ಬಸ್‌ಗಾಗಿ ಪರಡುತ್ತಿರುವುದು ಸಾಮಾನ್ಯವಾಗಿ ಕಂಡು ಬಂದಿತು. ಹೀಗೆ ಏಕಾಏಕಿ ಬಸ್ ಬಂದ್ ಮಾಡಿರುವುದು ಸಹಿತ ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿದೆ.
ರಸ್ತೆ ಸುಧಾರಣೆ ಮಾಡಿದರೆ ಮಾತ್ರ ಬಸ್ ಸಂಚಾರವನ್ನು ಮುಂದುವರಿಸಲಾಗುವುದು ಎಂದು ಗ್ರಾಮ ಪಂಚಾಯತಿಗೆ, ಸಾರಿಗೆ ಘಟಕ ವ್ಯವಸ್ಥಾಪಕರು ಪತ್ರ ಬರೆದಿರುವುದು ಇದೇ ಮೊದಲು ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.
ಆದಷ್ಟೂ ಬೇಗ ಸಂಬಂದಿಸಿದ ಅಧಿಕಾರಿಗಳು ರಸ್ತೆ ಸುಧಾರಣೆ ಮಾಡಿದರೆ ನಿತ್ಯ ಇದೇ ಮಾರ್ಗದಲ್ಲಿ ಸಂಚರಿಸು ಸಾವಿರಾರು ಜನರಿಗೆ ಹಾಗೂ ಬೈ ಸವಾರರಿಗೆ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಸಹಾಯವಾಗಲಿದೆ.
“ಕುಕನೂರು-ಮುಂಡರಗಿ ಸದ್ಯಕ್ಕೆ ಸ್ಥಗಿತವಾಗಿದೆ. ಬನ್ನಿಕೊಪ್ಪದಿಂದ ಮುಂಡರಗಿ ರಸ್ತೆ ಸಂಪೂರ್ಣ ಹಾಳಾಗಿದೆ. ಇದರಿಂದ ಕಾರಣ ಗ್ರಾಮೀಣ ರಸ್ತೆ ಸಾಕಷ್ಟು ಹಾಳಾಗಿದ್ದು, ಚಾಲಕರು ಕಾಂ ನಿರ್ವಾಹಕರು ಈ ಮಾರ್ಗವಾಗಿ ಸಂಚರಿಸಲು ನಿರಾಕರಿಸುತ್ತಿದ್ದಾರೆ. ಈಗಾಗಲೇ ರಸ್ತೆ ಸರಿಪಡಿಸಿ ಎಂದು ಗ್ರಾಮ ಪಂಚಾಯಿತಿಗೆ ಪತ್ರ ಬರೆದಿದ್ದೇವೆ. ಬನ್ನಿಕೊಪ್ಪದಿಂದ ಮುಂಡರಗಿ ರಸ್ತೆ ಸಂಪೂರ್ಣ ಹಾಳಾಗಿದೆ. ಇದರಿಂ ಇನ್ನು ಎರಡು ದಿನದಲ್ಲಿ ಬಸ್ ಸಂಚರಿಸಲಿವೆ. ಸೋಮವಾರದಿಂದ ಯಥಾವತ್ತಾಗಿ ಈ ಮಾರ್ಗವಾಗಿ ಬಸ್ ಗಳು ಸಂಚರಿಸಲಿವೆ”
ಸೋಮಶೇಖರ್
ಡಿಪೋ ವ್ಯವಸ್ಥಾಪಕರು, ಕುಕನೂರು ಘಟಕ