LOCAL NEWS : ಸ್ತ್ರೀ ಶಕ್ತಿ ಭವನ ಮಹಿಳೆಯರಿಗೆ ಸದುಪಯೋಗವಾಗಲಿ : ಶಾಸಕ ಚಂದ್ರು ಲಮಾಣಿ!!
ಶಿರಹಟ್ಟಿ: ಸ್ತ್ರೀ ಶಕ್ತಿ ಭವನ ಕಟ್ಟಡ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕ ಡಾ ಚಂದ್ರು ಲಮಾಣಿ ಸ್ತ್ರೀ ಶಕ್ತಿ ಭವನ ಮಹಿಳೆಯರಿಗೆ ಸದುಪಯೋಗವಾಗಲಿ, ಯಾವುದೇ ಮಹಿಳೆಯರಿಗೆ ಸಣ್ಣ ಪುಟ್ಟ ಕಾರ್ಯಕ್ರಮ ಗಳಿದ್ದರು ಸಹ ಉಪಯೋಗವಾಗಲಿ ಇಲ್ಲಿರುವ ಜನರು ಇದರ ಸದುಪಯೋಗ ಪಡೆದು ಕೊಳ್ಳಬೇಕು, ಎಂದು ಹೇಳಿದರು.
ನಂತರ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಯಾದ ಮೃತುಂಜಯ ಗುಡ್ಡದಾನವೇರಿ ಮಾತನಾಡಿ ಸುಮಾರು 25 ಲಕ್ಷ ರೂಪಾಯಿ ಅನುದಾನ ಬಿಡುಗಡೆಯಾಗಿದ್ದು ಸ್ತ್ರೀ ಶಕ್ತಿ ಭವನ ನಿರ್ಮಿಸಲು ಯಾವುದೇ ಜಾಗ ಇದ್ದಿದ್ದಿಲ್ಲ, ಪಟ್ಟಣ ಪಂಚಾಯಿತಿಯವರು ನಮ್ಮ ವಿನಂತಿಗೆ ಸ್ಪಂದಿಸಿ ಸ್ತ್ರೀ ಶಕ್ತಿ ಭವನ ನಿರ್ಮಿಸಲು ಜಾಗವನ್ನು ಮಂಜೂರು ಮಾಡಿದ್ದಕ್ಕಾಗಿ ಪಟ್ಟಣ ಪಂಚಾಯಿತಿ ಯವರಿಗೆ ಧನ್ನವದಗಳನ್ನು ತಿಳಿಸಿ, ನಂತರ ಮಹಿಳೆಯರಿಗೆ ಕಾರ್ಯಕ್ರಮ ಮಾಡಲು ಶಿರಹಟ್ಟಿ ಯಲ್ಲಿ ಯಾವುದೇ ಭವನ ಇಲ್ಲದ ಕಾರಣ ಇನ್ನೂ ಮುಂದೆ ಸ್ತ್ರೀ ಶಕ್ತಿ ಭವನದ ಸದುಪಯೋಗವನ್ನು ಎಲ್ಲಾ ಮಹಿಳೆಯರು ಪಡೆದುಕೊಳ್ಳಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸಿದ್ದರಾಯ ಕಟ್ಟಿಮನಿ, ಮಾಜಿ ಪಟ್ಟಣ ಪಂಚಾಯತ್ ಅಧ್ಯಕ್ಷ ನಾಗರಾಜ್ ಲಕ್ಕುಂಡಿ,ಪಟ್ಟಣ ಪಂಚಾಯತ್ ಉಪಾಧ್ಯಕ್ಷೆ ನೀಲವ್ವ ಹುಬ್ಬಳ್ಳಿ,ಸಂದೀಪ ಕಪ್ಪತ್ತನವರ್,ಸ್ಥಾಯಿ ಸಮಿತಿ ಅಧ್ಯಕ್ಷ ಹೊನ್ನಪ್ಪ ಶಿರಹಟ್ಟಿ, ಜಾನು ಲಮಾಣಿ,ಪರಮೇಶ್ ಪರಬ, ಅಕ್ಬರಸಾಬ್ ಯಾದಗಿರಿ,ನಂದಾ ಪಲ್ಲೇದ,ಪರಶುರಾಮ್ ಡೊಂಕಬಳ್ಳಿ,ರಾಮಣ್ಣ ಕಂಬಳಿ,ಅಶೋಕ್ ವರವಿ, ಸೇರಿದಂತೆ ಇನ್ನೂ ಅನೇಕರು ಕಾರ್ಯಕ್ರಮದಲ್ಲಿ ಉಪಸ್ಥಿತಿಯಲ್ಲಿದ್ದರು.