ಯಲಬುರ್ಗಾ : ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಬುಧವಾರ ಸಚಿವ ಹಾಲಪ್ಪ ಆಚಾರ್ ನೇತೃತ್ವದಲ್ಲಿ ಬಿಜೆಪಿ ಪಕ್ಷದ ಕಾರ್ಯಕಾರಣಿ ಸಭೆ ನೆಡೆಯಿತು. ಈ ಸಂದರ್ಭದಲ್ಲಿ ಚುನಾವಣಾ ನಿರ್ವಹಣಾ ಸಮಿತಿಯನ್ನು ರಚಿಸಿ ವಿವಿಧ ವಿಷಯಗಳ ಕುರಿತು ಚರ್ಚೆ ನೆಡೆಸಲಾಯಿತು.
ತಾಲೂಕಿನ ಮ್ಯಾದನೇರಿ,ಕೊನಸಾಗರ, ಸಂಗನಾಳ ಗ್ರಾಮದ ಹಿರಿಯರು ಹಾಗೂ ಮಹಿಳೆಯರು ಸೇರಿದಂತೆ ೩೫೦ ಕಾರ್ಯಕರ್ತರು ಕಾಂಗ್ರೆಸ್ ಪಕ್ಷವನ್ನು ತೊರೆದು ಸಚಿವ ಹಾಲಪ್ಪ ಆಚಾರ್ ನೇತೃತ್ವದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಯಲಬುರ್ಗಾ ಭಾಜಪ ಮಂಡಲ ಅಧ್ಯಕ್ಷ ವಿಶ್ವನಾಥ ಮರಿಬಸಪ್ಪನವರ ಮಾತನಾಡಿ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಹಾಗೂ ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿಯವರ ಮತ್ತು ಕ್ಷೇತ್ರದಲ್ಲಿ ಸಚಿವ ಹಾಲಪ್ಪ ಆಚಾರ್‌ರ ಕಾರ್ಯಗಳನ್ನು ಹಾಗೂ ಪಕ್ಷದ ತತ್ವ ಸಿದ್ದಾಂತಗಳನ್ನು ಮೆಚ್ಚಿ ವಿವಿಧ ಪಕ್ಷಗಳನ್ನು ತೊರೆದು ಕಾರ್ಯಕರ್ತರು ಬಿಜೆಪಿಯನ್ನು ಸೇರುತ್ತಿದ್ದಾರೆ. ಸಚಿವರ ಸಂಘಟನಾತ್ಮಕ ಶಕ್ತಿ ಅವರಿಗೆ ವಿಜಯದ ಮಾಲೆಯನ್ನು ಹಾಕಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಮುಖರಾದ ಸಿ.ಎಚ್.ಪೋಲಿಸ್ ಪಾಟೀಲ, ಗಿರಿಗೌಡ್ರ, ನರಸಿಂಹರಾವ್ ಕುಲಕರ್ಣಿ, ಅಯ್ಯನಗೌಡ ಕೆಂಚಮ್ಮನವರ, ಶರಣಪ್ಪ ಈಳಗೇರ, ಬಸನಗೌಡ ತೊಂಡಿಹಾಳ, ಕಳಕಪ್ಪ ಕಂಬಳಿ, ಶಿವಪ್ಪ ವಾದಿ, ಮಾರುತಿ ಗಾವರಾಳ, ದ್ಯಾಮಣ್ಣ ಬೇವೂರು ಹಾಗೂ ಇತರರಿದ್ದರು.