LOCAL NEWS : ತಾಲೂಕ ಆಸ್ಪತ್ರೆಗೆ ಜಿಲ್ಲಾ ವೈದ್ಯಾಧಿಕಾರಿಗಳ ಜೊತೆ ದಿಡೀರನೆ ಭೇಟಿ ನೀಡಿದ ಶಾಸಕ ಡಾ.ಚಂದ್ರು ಲಮಾಣಿ..!!
ಲಕ್ಷ್ಮೇಶ್ವರ : ಪಟ್ಟಣದ ತಾಲ್ಲೂಕ ಸರಕಾರಿ ಆಸ್ಪತ್ರೆಗೆ ಜಿಲ್ಲಾ ವೈದ್ಯಾಧಿಕಾರಿ ಜೊತೆಗೆ ಕೋವಿಡ್ ಸಂಜೀವಿನಿ ಎನಿಸಿಕೊಂಡ ಶಾಸಕ ಡಾ.ಚಂದ್ರು ಲಮಾಣಿ ಯವರು ದಿಢೀರನೆ ಭೇಟಿ ನೀಡಿ ಆಸ್ಪತ್ರೆಯಲ್ಲಿನ ಕುಂದು ಕೊರತೆಗಳನ್ನು ಹಾಗೂ ರೋಗಿಗಳ ಆರೋಗ್ಯ ತಪಾಸಣೆ ಮಾಡಿದರು.
ಒಳ ರೋಗಿಗಳು ಮತ್ತು ದಾಖಲಾದ ರೋಗಿಗಳ ಆರೋಗ್ಯ ವಿಚಾರಿಸಿ ಅಲ್ಲಿನ ವ್ಯವಸ್ಥೆಗಳ ಬಗ್ಗೆ ಆಸ್ಪತ್ರೆಯ ಎಲ್ಲ ಕಡೆ ಜಿಲ್ಲಾ ಆರೋಗ್ಯ ಅಧಿಕಾರಿ ಗಳೊಂದಿಗೆ ಸಂಚರಿಸಿ ವ್ಯವಸ್ಥೆ ಪರಿಶೀಲಿಸಿದರು.
ಅಲ್ಲಿರುವಂತ ವೈದ್ಯಾಧಿಕಾರಿಗಳಿಗೆ ಸಾರ್ವಜನಿಕರಿಗೆ ಯಾವುದೆ ತೊಂದರೆಯಾಗದಂತೆ 24 ಗಂಟೆಗಳ ಕಾಲ ಆರೋಗ್ಯ ಸೇವೆ ಸರಿಯಾಗಿ ಒದಗಿಸಬೇಕೆಂದು ವೈದ್ಯಾಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಸೂಚಿಸಿ 24×7 ಸುತ್ತೋಲೆಯನ್ನು ಕಟ್ಟು ನಿಟ್ಟಾಗಿ ಪಾಲಿಸಲು ಹೇಳಿದರು.
ವರದಿ: ವೀರೇಶ್ ಗುಗ್ಗರಿ