ಗೆಲುವಿನ ನಗೆ ಬೀರಿದ ಹಾಲಪ್ಪ ಆಚಾರ್

You are currently viewing ಗೆಲುವಿನ ನಗೆ ಬೀರಿದ ಹಾಲಪ್ಪ ಆಚಾರ್

ಯಲಬುರ್ಗಾ : 2023ರ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಬೆಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಬುಧವಾರ ೨ ನೇ ಬಾರಿಗೆ ನಾಮಪತ್ರ ಸಲ್ಲಿಸಿದ ಸಚಿವ ಹಾಲಪ್ಪ ಆಚಾರ್ ಮೆರವಣಿಗೆಯಲ್ಲಿ ನೆರೆದಿದ್ದ ಸಾವಿರಾರು ಕಾರ್ಯಕರ್ತರನ್ನು ಕಂಡು ಗೆಲುವಿನ ನಗೆ ಬೀರಿದರು.
ಯಲಬುರ್ಗಾ ಪಟ್ಟಣದ ಮೊಗ್ಗಿ ಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿ, ಬಳಿಕ ಅಲ್ಲಿಂದ ನೆರೆದಿದ್ದ ಸಾವಿರಾರೂ ಕಾರ್ಯಕರ್ತರ ನಡುವೆ ಬೃಹತ್ ಮೆರವಣಿಗೆ ಮೂಲಕ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಮಾಲಾರ್ಪಣೆಯನ್ನು ಮಾಡಿದರು. ಬಿಜೆಪಿಯ ಕಾರ್ಯಕರ್ತರ ಜೈಕಾರ ಹಾಗೂ ಮೊತ್ತೋಮ್ಮೆ ಹಾಲಪ್ಪ ಆಚಾರ್ ಎಂಬ ಘೋಷಣೆಗಳು ಜೋರಾಗಿದ್ದವು.
ಮೆರವಣಿಗೆಯಲ್ಲಿ ನೆರೆದಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ಚುನಾವಣೆ ಪೂರ್ವದಲ್ಲಿ ಕೊಟ್ಟ ಮಾತಿನಂತೆ ಕ್ಷೇತ್ರದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಯಾಗೂ ಶೈಕ್ಷಣಿಕವಾಗಿ ನಿರೀಕ್ಷೆಗೂ ಮೀರಿ ಕೆಲಸ ಮಾಡಿದ್ದೇನೆ. ನನ್ನ ಅಭಿವೃದ್ದಿ ಯೋಜನೆಗಳನ್ನು ಹಾಗೂ ಬೆಜೆಪಿಯ ತತ್ವ ಸಿದ್ದಾಂತಗಳನ್ನು ಮೆಚ್ಚಿ ಇಷ್ಟೋಂದು ಸಂಖ್ಯೆಯಲ್ಲಿ ಜನ ಸೇರಿ ನನಗೆ ಆರ್ಶಿವಾದ ಮಾಡಲು ಬಂದ್ದಿದ್ದು ನನಗೆ ಗದ್ದಷ್ಟೇ ಖುಷಿಯಾಗಿದೆ. ನಿಮ್ಮ ಪ್ರೀತಿ, ಸಹಕಾರ, ಆರ್ಶಿವಾದ ಸದಾ ಹೀಗೆ ಇರಲಿ ಎಂದು ನೆರೆದಿದ್ದ ಜನರನ್ನು ಕಂಡು ವಿಕ್ಟರಿ ತೋರಿಸುವ ಮೂಲಕ ಗೆಲುವಿನ ವಿಶ್ವಾಸದ ನಗೆ ಬೀರಿದರು.
ಬೃಹತ್ ಮೆರವಣಿಗೆಯು ಸುಮಾರು ಎರಡು ತಾಸುಗಳ ವರೆಗೆ ನೆಡೆಯಿತು. ಬಳಿಕ ತಹಶೀಲ್ದಾರ್ ಕಚೇರಿಗೆ ತೆರಳಿ ಚುನಾಚಣಾ ಅಧಿಕಾರಿ ಕಾವ್ಯರಾಣಿ ಅವರಿಗೆ ನಾಮಪತ್ರ ಸಲ್ಲಿಸಿದರು.

Leave a Reply

error: Content is protected !!