ಬೆಂಗಳೂರು : ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿಳ್ಳಮುನಿಶಾಮಪ್ಪ ಅವರ ಪರವಾಗಿ ರವಿವಾರ ಖ್ಯಾತ ಚಲನಚಿತ್ರ ನಟ ಕರುನಾಡ ಚಕ್ರವರ್ತಿ ಕಿಚ್ಚ ಸುದೀಪ್ ರವರು,ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಕೆ.ಸುಧಾಕರ್ ಜೊತೆಗೂಡಿ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ಸುದೀಪ್ ರವರು ಮಾತನಾಡುತ್ತಾ ನನಗೆ ಹೂ ಏನು ಹಾಕಬೇಡಿ ದೇವರಿಗೆ ಹಾಕಿ,ಮನುಷ್ಯರನ್ನು ದೇವರನ್ನಾಗಿ ಮಾಡಬೇಡಿ ಎಂದು ಹೇಳುತ್ತ, ಪಿಳ್ಳಮುನಿಶಾಮಪ್ಪ ರವರು ಸರಳ,ಸಜ್ಜನ ವ್ಯಕ್ತಿ ಇವರು ಶಾಸಕರಾಗಿದ್ದ ಸಂದರ್ಭದಲ್ಲಿ ಒಂದು ಚೂರು ಬ್ರಷ್ಟಾಚಾರ ಇಲ್ಲದೆ ಕೆಲಸ ಮಾಡಿದ್ದಾರೆ.ಸ್ವಂತಕ್ಕೆ ಏನು ಮಾಡಿಕೊಳ್ಳದೆ ಸದಾ ಜನರ ಸೇವೆಯನ್ನು ಮಾಡಿ ಬರುತ್ತಿರುವ ಪಿಳ್ಳಮುನಿಶಾಮಪ್ಪ ರವರಿಗೆ ಈ ಬಾರಿ ದೇವನಹಳ್ಳಿ ಜನತೆ ಆಶೀರ್ವಾದ ಮಾಡಬೇಕಾಗಿ ಕೋರಿದರು.
ಪ್ರಚಾರ ಸಭೆಯಲ್ಲಿ ಸುದೀಪ್ ರವರ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಸುದೀಪ್ ಅವರನ್ನು ನೋಡಲು ಜನಸಾಗರವೇ ಹರಿದು ಬಂದಿತ್ತು. ವಿಧಾನ ಪರಿಷತ್ ಸದಸ್ಯರಾದ ಛಲವಾದಿ ನಾರಾಯಣಸ್ವಾಮಿ ರವರು ಮತಯಾಚನೆ ಮಾಡಿದರು.
ಈ ಸಂಧರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಎ ವಿ ನಾರಾಯಣಸ್ವಾಮಿ, ಮಾಜಿ ಶಾಸಕರಾದ ಜಿ.ಚಂದ್ರಣ್ಣ ರವರು, ರಾಜ್ಯ ಬಿಜೆಪಿ ಎಸ್.ಸಿ.ಮೋರ್ಚಾ ಖಜಾಂಜಿ ನಾಗೇಶ್ ರವರು ತ್ತಾರೆ ಮುಖಂಡರು ಉಪಸ್ಥಿತರಿದ್ದರು.
ಏನಾಗಲಿ ಮುಂದೆ ಸಾಗು ನೀ ಎಂಬ ಹಾಡನ್ನು ಹೇಳಿ ನೆರೆದಿದ್ದ ಸಾವಿರಾರು ಅಭಿಮಾನಿಗಳನ್ನು ರಂಜಿಸಿದರು.
ವರದಿ : ಸಾಗರ ಯು.ಬೆಂಗಳೂರು ಗ್ರಾಮಾಂತರ