ಬೆಂಗಳೂರು : ಸದನದ ಕಾಲಾಪದಲ್ಲಿ ಬಿಜೆಪಿ-ಕಾಂಗ್ರೆಸ್ ನಾಯಕರ ನಡುವೆ ಭಾರೀ ಕಾಳಗ ಶುರುವಾಗಿದ್ದು, “ನಿನ್ನ ನಾಲಿಗೆ ಮೇಲೆ ಹಿಡಿತವಿರಬೇಕು, ನನ್ನಂತವನು ಆಗಿದರೆ, ದಿನದ 24 ಗಂಟೆಯಲ್ಲಿ ನಿನ್ನನ್ನು ಪಕ್ಷದಿಂದ ಅಮಾನತು ಮಾಡ್ತಿದ್ದೆ. ಹಿಂದೆ ನೀನು ಮುಖ್ಯಮಂತ್ರಿ ಹುದ್ದೆಗೆ 2,000 ಕೋಟಿ ರೂ. ಡೀಲ್ ಅಂದವನು ನೀನು” ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕಿಡಿಕಾರಿದರು.
ಇಂದು ವಿಧಾನಸಭೆಯ ಅಧಿವೇಶನ ಕಲಾಪದ ವೇಳೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದಾರೆ. ನಿಮ್ಮ ನಾಯಕರು ಕೇಳಿದ್ದಾರೆ ಅಂತಾ ನಾವು ಕೇಳ್ಕೊಂದು ಕುರೋಕೆ ರೆಡಿಯಿಲ್ಲ. ನಿನ್ನ ನಾಲಿಗೆ ಮೇಲೆ ಹಿಡಿತವಿರಬೇಕು, ನಾನಾಗಿದ್ರೆ 24 ಗಂಟೆಯಲ್ಲಿ ನಿನ್ನನ್ನು ಪಕ್ಷದಿಂದ ಅಮಾನತು ಮಾಡ್ತಿದ್ದೆ ಎಂದು ಹೇಳಿದ್ದಾರೆ.
ಈ ಸಂಧರ್ಭದಲ್ಲಿ ಆಕ್ರೋಶಗೊಂಡ ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್, “ನೀವು ಭ್ರಷ್ಟಾಚಾರದ ಬಂಡೆ ಎಂದಿದಕ್ಕೆ, ಆಗ ಅದಕ್ಕೆ ನಾನು ಈ ಕಡೆ ಬಂದು ಕುಳಿತಿರೋದು ಎಂದು ಡಿಕೆ ಶಿವಕುಮಾರ್ ಹೇಳಿದರು. ಆಗ ಏನ್ ಮಾಡ್ತಾರೋ ನೋಡೇ ಬಿಡೋಣ ಎಂದು ಯತ್ನಾಳ್ ಸಿಟ್ಟಿಗೆದ್ದಿದ್ದು, ಅದಲ್ಲದೇ ಡಿಕೆ ಶಿ ಕ್ಷಮೆ ಕೇಳಬೇಕು” ಎಂದು ಶಾಸಕ ಯತ್ನಾಳ್ ಸೇರಿ ಬಿಜೆಪಿ ಶಾಸಕರು ಬಾವಿಗಿಳಿದು ಧರಣಿ ಶುರು ಮಾಡಿದರು.