LOCAL EXPRESS : ಅವರ ಅಪ್ಪಂದಿರ ಜತೆ ನಾನು ಕೆಲಸ‌ ಮಾಡಿದವನು. ಇವರು, ಈಗ ನಮ್ಮ ಮುಂದೆ ಧಿಮಾಕು : MLA ರಾಯರೆಡ್ಡಿ

You are currently viewing LOCAL EXPRESS : ಅವರ ಅಪ್ಪಂದಿರ ಜತೆ ನಾನು ಕೆಲಸ‌ ಮಾಡಿದವನು. ಇವರು, ಈಗ ನಮ್ಮ ಮುಂದೆ ಧಿಮಾಕು : MLA ರಾಯರೆಡ್ಡಿ

ಕುಕನೂರು : ‘ದೇವೆಗೌಡರ ಮಂತ್ರಿ ಮಂಡಲದಲ್ಲಿ ನಾನು ಮಿನಿಸ್ಟರ್ ಆಗಿದ್ದವನು, ‌ಈ ಕುಮಾರಸ್ವಾಮಿ ನನ್ನ ಪಕ್ಕ ನಿಲ್ಲೋದಕ್ಕೂ ಹೆದರುತ್ತಿದ್ದ. ಏನ್ ಮಾಡೊದು ಅವನ ಹಣೆ ಬರಹದಲ್ಲಿ ಬರೆದಿತ್ತು, ಮುಖ್ಯಮಂತ್ರಿ ಆಗಿಬಿಟ್ಟ’ ಎಂದು ಶಾಸಕ ಬಸವರಾಜ ರಾಯರೆಡ್ಡಿಯವರು ಮಾಜಿ ಸಿಎಂ ಕುಮಾರಸ್ವಾಮಿಯನ್ನು ಏಕವಚನದಲ್ಲೇ ಮಾತನಾಡಿದರು.

ಕುಕನೂರು ತಾಲೂಕಿನ ತಳಕಲ್ ಗ್ರಾಮದಲ್ಲಿ ಇಂದು ನಡೆದ ಸಾರ್ವಜನಿಕರ ಸಭೆಯಲ್ಲಿ ‘ನೀವು ಮಂತ್ರಿ ಆಗೋದು ಯಾವಾಗ’ ಎಂಬ ನೆರೆದಿದ್ದ ಕಾರ್ಯಕರ್ತರ ಪ್ರಶ್ನೆಗೆ ಶಾಸಕ ರಾಯರೆಡ್ಡಿ ಪ್ರತಿಕ್ರಿಯೆ ಹೀಗೆ ನೀಡಿದ್ದು, ‘ನೀವು ದುಖಃ ಪಡೋ ಅಗತ್ಯವಿಲ್ಲ. ಒಮ್ಮೊಮ್ಮೆ ಮಂತ್ರಿ ಆಗೋದಕ್ಕೆ ಆಗುವುದಿಲ್ಲ. ಅದಕ್ಕೆ ಹಣೆ ಬರಹ ಬೇಕು ಎಂದು ಪರೋಕ್ಷವಾಗಿ ಅಸಮಧಾನ ಹೊರ ಹಾಕಿದ್ದಾರೆ.

ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಬಂದು ಎರಡು ಭಾರಿ ಮುಖ್ಯಂಂತ್ರಿ ಆಗಿದ್ದಾರೆ. ಕಾಂಗ್ರೆಸ್‌ನ ಹಳೆ (ಮೂಲ) ಮಂದಿ ಏನಂತಿರಬಹುದು? ಇದೆಲ್ಲಾ ಮನುಷ್ಯನ ಅದೃಷ್ಟ, ನನ್ನ ಹಿಂದೆ ಓಡಾಡಿದವರೆಲ್ಲಾ ಮಂತ್ರಿ ಆಗಿದ್ದಾರೆ.‌ ಅವರ ಅಪ್ಪಂದಿರ ಜತೆ ನಾನು ಕೆಲಸ‌ ಮಾಡಿದವನು.ಇವರು, ಈಗ ನಮ್ಮ ಮುಂದೆ ಧಿಮಾಕು ಮಾಡ್ಕೊಂಡು ಓಡುತ್ತಿದ್ದಾರೆ ಎಂದು ಶಾಸಕ ರಾಯರೆಡ್ಡಿ ಹೇಳಿದ್ದಾರೆ.

ಇಂದು ದೆಹಲಿಯಲ್ಲಿ ಕಾಂಗ್ರೆಸ್‌ನ ಹೈವೋಲ್ಟೇಜ್ ಸಭೆ ನಡೆದಿದ್ದು, ಇತ್ತ ರಾಜ್ಯ ಕಾಂಗ್ರೆಸ್‌ ಪಾಳಯದಲ್ಲಿ ಅಸಮಾಧಾನ ಭುಗಿಲೆದ್ದಿದೆ ಇದಕ್ಕೆ ಸೂಕ್ತ ಉದಾಹರಣೆ ಇಂದು ಕಾಂಗ್ರೆಸ್‌ನ ಹಿರಿಯ ಶಾಸಕ, ಮಾಜಿ ಸಚಿವ, ಮಾಜಿ ಸಂಸದ ಬಸವರಾಜ ರಾಯರೆಡ್ಡಿಯವರು ಹೇಳಿಕೆಗಳು, ರಾಜ್ಯದ ಕಾಂಗ್ರೆಸ್‌ನಲ್ಲಿ ಬಿನ್ನಮತ ಸ್ಪೋಟವಾಗುವ ಎಲ್ಲಾ ಲಕ್ಷಣಗಳು ಮೇಲ್ನೋಟದಲ್ಲಿ ಕಾಣುತ್ತಿದೆ.

Leave a Reply

error: Content is protected !!