ಗದಗ : ರಾಜ್ಯ ಬಿಜೆಪಿಗೆ ಮರ್ಮಾಘಾತವಾಗಿದ್ದು, “ಮುಂದಿನ ತಿಂಗಳು ಅಕ್ಟೋಬರ್ 10ರಂದು ಬಿಜೆಪಿಯನ್ನು ತೊರೆದು ಮಾಜಿ ಸಿಎಂ ಜಗದೀಶ ಶೆಟ್ಟರ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದೇನೆ” ಎಂದು ಬಿಜೆಪಿ ಮಾಜಿ ಶಾಸಕ ರಾಮಣ್ಣ ಲಮಾಣಿ ತಿಳಿಸಿದ್ದಾರೆ.
BIG NEWS : ಕಾಂಗ್ರೆಸ್ ಶಾಸಕ ಹಾಗೂ ಬಿಜೆಪಿ ಸಂಸದ ವೇದಿಕೆಯ ಮೇಲೆ ಜಗಳ : ಈ ಇಬ್ಬರ ವಿರುದ್ಧ FIR ದಾಖಲು.!!
ಈ ಕುರಿತು ಶಿರಹಟ್ಟಿ ತಾಲೂಕಿನ ಕುಂದ್ರಳ್ಳಿಯಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, “ಅಕ್ಟೋಬರ್ 10ರಂದು ಬಿಜೆಪಿ ತೊರೆದು ಕಾಂಗ್ರೆಸ್ ಸೇರಲಿದ್ದೇನೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಕಾಂಗ್ರೆಸ್ ಸೇರಲಿದ್ದೇನೆ. ಮೂಡಿಗೆರೆ ಮಾಜಿ ಶಾಸಕ ಕುಮಾರಸ್ವಾಮಿ ನಾನು ಬಿಜೆಪಿಗೆ ಸೇರುತ್ತೇವೆ. ಇದೇ ವೇಳೆ ಬಿಜೆಪಿಯ ಹಲವು ಮಾಜಿ ಶಾಸಕರು ಸಹ ಕಾಂಗ್ರೆಸ್ ಸೇರಲಿದ್ದಾರೆ ಎಂದು ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.
BREAKING : ಪ್ರತಿಭಟನೆ ಮಾಡಿದ ಕರವೇ ಯುವ ಸೈನ್ಯ : “ಕರ್ನಾಟಕ ಬಂದ್”ಗೆ ಬೆಂಬಲ ಇಲ್ಲ”..!!
ಕಳೆದ ಕೆಲವು ದಿನಗಳ ಹಿಂದೆ ರಾಜಧಾನಿ ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಕಾಂಗ್ರೆಸ್ ಸೇರುವ ಬಗ್ಗೆ ರಾಮಣ್ಣ ಲಮಾಣಿ ಮಾತುಕತೆ ನಡೆಸಿದ್ದರು ಎನ್ನಲಾಗಿತ್ತು. ಆದರೆ ಈಗ ಅವರೇ ಸ್ಪಷ್ಟಪಡಿಸಿದ್ದು, ಅಕ್ಟೋಬರ್ 10ರಂದು ಕಾಂಗ್ರೆಸ್ ಸೇರುವುದು ಖಚಿತವಾಗಿದೆ. ಈ ಮೂಲಕ ಮಾಜಿ ಶಾಸಕರೊಬ್ಬರು ಲೋಕಸಭೆ ಚುನಾವಣೆ ಸನಿಹದಲ್ಲಿ ರಾಜ್ಯ ಬಿಜೆಪಿಗೆ ಶಾಕ್ ನೀಡಿದ್ದಾರೆ.