ನರೇಗಲ್ಲ ನಲ್ಲಿ ನಡೆದ ಅದ್ದೂರಿ ಗಣೇಶ ವಿಸರ್ಜನೆ .
ನರೇಗಲ್ಲ : ಪಟ್ಟಣದಲ್ಲಿ ಶನಿವಾರ ಶ್ರೀ ಭರಮದೇವರ ಯುವಕ ಮಂಡಳಿಯ ಗಣೇಶ ಮತ್ತು ಶ್ರೀ ತ್ರಿಪುಕಾಂತೇಶ್ವರ ಕಮೀಟಿಯ ವತಿಯಿಂದ ಸ್ಥಾಪಿಸಿದ್ದ ಸಾರ್ವಜನಿಕ ಗಣಪತಿಯ ವಿಸರ್ಜನೆ ಅದ್ದೂರಿಯಾಗಿ ನೆರವೇರಿತು.
ಗಣೇಶನ ವಿಸರ್ಜನೆಯಲ್ಲಿ ಡಿಜೆ ಸೌಂಡ್ ಗೆ ಯುವಕರು ಕುಣಿದು ಕುಪ್ಪಳಿಸಿದರು.
ಇದೇ ವೇಳೆ ಎರಡು ಗಣೇಶ ಊರಿನ ಹೃದಯ ಭಾಗವಾದ ಹಳೆ ಸಂತೆಬಜಾರ ಹತ್ತಿರ ಒಂದೇ ಕಡೆ ಎದುರಾದಾಗ ಪೊಲೀಸ್ ಇಲಾಖೆ ಎರಡು ಮೆರವಣಿಗೆ ಶಾಂತಯುತವಾಗಿ ಸಾಗಿಸಲು ಹರಸಾಹಸ ಪಟ್ಟರು.
ಸಂಭ್ರಮದ ಗಣೇಶನ ವಿಸರ್ಜನೆಯ ಕ್ಷಣವನ್ನು ಸಾವಿರಾರು ಮಹಿಳೆಯರು ಸೇರಿದಂತೆ ಭಕ್ತರು ಕಣ್ತುಂಬಿಕೊಂಡರು.