ಕುಕನೂರು : ನಗರದಲ್ಲಿ ಮಹಿಳಾ ಧ್ವನಿ ಶಿಕ್ಷಣ ಮತ್ತು ಗ್ರಾಮೀಣ ಕ್ಷೇಮಾಭಿವೃದ್ಧಿ ಸಂಸ್ಥೆ (ರಿ) ಕೊಪ್ಪಳ ಹಾಗೂ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಮಹಿಳಾ ಸಬಲಿಕರಣ ಅಭಿಯಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ಸಂಸ್ಥಾಪಕರಾದ ಪ್ರಿಯದರ್ಶಿನಿ ಮುಂಡರಗಿಮಠ ‘ಮಹಿಳೆಯರು ಅಡುಗೆ ಮನೆಗೆ ಅಷ್ಟೇ ಸಿಮಿತವಾಗದೆ ಸಾಮಾಜಿಕ ಚಟುವಟಿಕೆಗಳ ಮೂಲಕ ಮುಖ್ಯ ವಾಹಿನಿಗೆ ಪರಿಚಯವಾಗಬೇಕು.ಮಹಿಳೆಯರು ತಮ್ಮಲ್ಲಿರುವ ಕೌಶಲಗಳನ್ನು ಗುರುತಿಸಿಕೊಂಡು ಸ್ವಾವಲಂಬಿ ಬದುಕಿನತ್ತ ಚಿಂತನೆ ಮಾಡಬೇಕು ಎಂದರು.
ಇದೇ ವೇಳೆ ಸಲ್ಮಾ,ರೇಣುಕಾ ಹುರುಳಿ,ಮಂಜುಳಾ ಹಾಗೂ ಮಹಿಳೆಯರು ಉಪಸ್ಥಿತಿ ಇದ್ದರು.