ಕುಷ್ಟಗಿ : ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯ ದಲಿತ ಚಳುವಳಿ ಚತುರ,ಹೋರಾಟಗಾರ ಆನಂದ ಬಂಡಾರಿ ನಿಧರಾಗಿದ್ದಾರೆ. ದಲಿತ ಚಳುವಳಿಯಲ್ಲಿ ಪ್ರಮುಖರು ದಲಿತ ಸಂಘಟನೆಯಲ್ಲಿ ಬಿ.ಕೃಷ್ಣಪ್ಪ ಅವರ ಜೊತೆ ರಾಜ್ಯಾದ್ಯಂತ ಸಂಘಟನೆ ಮಾಡಿದ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಿ ನಗರದ ಆನಂದ್ ಬಂಡಾರಿ ಅವರು ಅನಾರೋಗ್ಯದ ಸಮಸ್ಯೆಯಿಂದ ನಿನ್ನೆ ನಿಧಾನರಾದರೆಂದು ತಿಳಿದು ಬಂದಿದೆ.
SPECIAL POST : ದೀಪಾವಳಿಯ ಹಬ್ಬದ ಹಾರ್ದಿಕ ಶುಭಾಶಯಗಳು
ಇಂದು ಸಮಯ 1:00 ಘಂಟೆಗೆ ಅಂತ್ಯ ಸಂಸ್ಕಾರ ನಡೆಯಲಿದೆ. ಇವರು ವಿದ್ಯಾರ್ಥಿ ದೇಸೆಯಿಂದಲೆ ದಮನಿತರ ವಿಮೋಚನೆಗೆ ಜೀವ ಸವೇಸಿದವರು. ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟಕರಾಗಿ ಐತಿಹಾಸಿಕ ಭೂ ಹೋರಾಟದ ಗೆಲುವು ಸಾಧಿಸಿದ ಮೇದಿಕಿನಾಳ, ಜಾಲಿಹಾಳ , ಇಜೆ ಬಸಾಪೂರ ಹಾಗೂ ಕುದರಿಮೋತಿ ಘಟನೆ ವಿರುದ್ದ ಹೋರಾಟ, ಒಳಮೀಸಲಾತಿ ಹಕ್ಕಿಗಾಗಿ ಹಗಲಿರುಳು ಹೋರಾಡಿದರು. ವಸತಿ, ಭೂಮಿ, ಅಸ್ಪ್ರಶ್ಯತೆ, ದೇವದಾಸಿ ಪದ್ದತಿ ನಿರ್ಮೂಲನಾ ಚಳುವಳಿ ಹೀಗೆ ಸಾವಿರಾರು ಹೋರಾಟಗಳನ್ನು ರೂಪಿಸಿದವರು. ಸಾವಿರಾರು ಜನರ ಕಷ್ಟಗಳಿಗೆ ಸ್ಪಂದಿಸಿದವರು.
ಅಂದರ್ ಬಾಹರ್ ಗಿಲ್ಲ ಅವಕಾಶ. ಇಸ್ಪೀಟ್ ಜೂಜಾಟಕ್ಕೆ ಕೊಪ್ಪಳ ಜಿಲ್ಲಾ ಪೊಲೀಸ್ ಬ್ರೇಕ್
ರಾಯಚೂರು ಕೊಪ್ಪಳ ಜಿಲ್ಲೆಯ ಚಳುವಳಿಯ ಕೊಂಡಿಯಾಗಿ ದಸಂಸ ಕಟ್ಟಿ ನ್ಯಾಯಕ್ಕಾಗಿ ದಲಿತ, ಹಿಂದೂಳಿದ, ಅಲ್ಪಸಂಖ್ಯಾತ,ಮಹಿಳೆಯರನ್ನು ಸಂಘಟಿಸಿ ಸಂವಿಧಾನಿಕ ಹಕ್ಕುಗಳಿಗಾಗಿ ಹೋರಾಡಿದ ಹೋರಾಟದ ತ್ಯಾಗಜೀವಿ ಆನಂದ ಬಂಡಾರಿ ಅವರು ಲಕ್ಷಾಂತರ ಅಭಿಮಾನಿಗಳನ್ನು ಅಗಲಿದ್ದಾರೆ. ಅವರ ಅಗಲಿಕೆ ಶೋಷಿತ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಆಪ್ತರು ಅಭಿಪ್ರಾಯ ಹಂಚಿಕೊಂಡಿದ್ದಾರೆ.