ಕೇಂದ್ರ ಮತ್ತು ರಾಜ್ಯಗಳ ಮಧ್ಯೆ ತೆರಿಗೆ ಹಂಚಿಕೆ (tax sharing) ವಿಚಾರ ಭಾರತದಲ್ಲಿ ಸದಾ ವಿವಾದದಲ್ಲೇ ಇರುತ್ತದೆ. ದಕ್ಷಿಣ ರಾಜ್ಯಗಳಿಂದ (south indian states) ಬಹಳ ಅಧಿಕ ತೆರಿಗೆ ಮೊತ್ತ ಸಂಗ್ರಹವಾದರೂ ಕೇಂದ್ರದಿಂದ ದೊರಕುತ್ತಿರುವ ತೆರಿಗೆ ಪಾಲು.
ಬಹಳ ಕಡಿಮೆ ಇದೆ ಎಂದು ಡಿಕೆ ಸುರೇಶ್ ಇತ್ತೀಚೆಗೆ ಆಪಾದಿಸಿ, ದಕ್ಷಿಣ ಭಾರತವನ್ನೇ ಪ್ರತ್ಯೇಕಿಸಬೇಕೆಂದು ಒತ್ತಾಯಿಸಿ ವಿವಾದಕ್ಕೆ ಒಳಗಾಗಿದ್ದಾರೆ. ಈ ತೆರಿಗೆ ಹಂಚಿಕೆ ವಿವಾದ ಮತ್ತು ಆಕ್ಷೇಪ ಹೊಸದೇನಲ್ಲ. ದೇಶದ ಬೇರೆ ಭಾಗಕ್ಕೆ ಹೋಲಿಸಿದರೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಹೆಚ್ಚು ತೆರಿಗೆ ಸಂಗ್ರಹ ಆಗುತ್ತದೆ ಎನ್ನುವುದು ವಾಸ್ತವ. ಆದರೆ, ಸಿಂಹಪಾಲು ಮಾತ್ರ ಹಿಂದೆ ಪ್ರದೇಶದ ರಾಜ್ಯಗಳಿಗೆ ಎನ್ನುವುದೂ ಕೂಡ ವಸ್ತುಸ್ಥಿತಿಯೇ. ಹಾಗಾದರೆ, ಕೇಂದ್ರ ಸರ್ಕಾರ ದಕ್ಷಿಣ ರಾಜ್ಯಗಳಿಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆಯೇ?
2024-25ರ ಹಣಕಾಸು ವರ್ಷಕ್ಕೆ ರಾಜ್ಯಗಳಿಗೆ ಕೇಂದ್ರದಿಂದ ಹಂಚಿಕೆಯಾದ ತೆರಿಗೆ ವಿವರ
ಒಟ್ಟು ತೆರಿಗೆ ಹಂಚಿಕೆ: 12,19,782.85 ಕೋಟಿ ರೂ (12.2 ಲಕ್ಷ ಕೋಟಿ ರೂ)
ಕಾರ್ಪೊರೇಶನ್ ತೆರಿಗೆ: 3,83,052.63 ಕೋಟಿ ರೂ
ವರಮಾನ ತೆರಿಗೆ: 4,22,079.11 ಕೋಟಿ ರೂ
ಕೇಂದ್ರೀಯ ತೆರಿಗೆ: 3,79,922.02 ಕೋಟಿ ರೂ
ಆಮದು ಸುಂಕ: 24,890.35 ಕೋಟಿ ರೂ
ಕೇಂದ್ರ ಅಬಕಾರಿ ಸುಂಕ: 14,883 ಕೋಟಿ ರೂ
ಸೇವಾ ತೆರಿಗೆ: 41 ಕೋಟಿ ರೂ
ಇತರ ತೆರಿಗೆ: 1,927 ಕೋಟಿ ರೂ
ವಿವಿಧ ರಾಜ್ಯಗಳ ತೆರಿಗೆ ಪಾಲು (ಗರಿಷ್ಠದಿಂದ ಕನಿಷ್ಠದವರೆಗೆ)
ಉತ್ತರ ಪ್ರದೇಶ: 17.939%
ಬಿಹಾರ: 10.058%
ಮಧ್ಯಪ್ರದೇಶ: 7.850%
ಪಶ್ಚಿಮ ಬಂಗಾಳ: 7.523%
ಮಹಾರಾಷ್ಟ್ರ: 6.317%
ರಾಜಸ್ಥಾನ: 6.026%
ಒಡಿಶಾ: 4.528%
ತಮಿಳುನಾಡು: 4.079%
ಆಂಧ್ರಪ್ರದೇಶ: 4.047%
ಕರ್ನಾಟಕ: 3.647%
ಗುಜರಾತ್: 3.478%
ಛತ್ತೀಸ್ಗಡ್: 3.407%
ಜಾರ್ಖಂಡ್: 3.307%
ಅಸ್ಸಾಮ್: 3.128%
ತೆಲಂಗಾಣ: 2.102%
ಕೇರಳ: 1.925%
ಪಂಜಾಬ್: 1.807%
ಅರುಣಾಚಲಪ್ರದೇಶ: 1.757%
ಉತ್ತರಾಖಂಡ್: 1.118%
ಹರ್ಯಾಣ: 1.093%
ಹಿಮಾಚಲಪ್ರದೇಶ: 0.830%
ಮೇಘಾಲಯ: 0.716%
ಮಣಿಪುರ: 0.716%
ತ್ರಿಪುರಾ: 0.708%
ನಾಗಾಲ್ಯಾಂಡ್: 0.569%
ಮಿಝೋರಾಮ್: 0.500%
ಸಿಕ್ಕಿಂ: 0.388%
ಗೋವಾ: 0.386%
ತಂಬಾಕು ಉತ್ಪನ್ನ ತಯಾರಿಸುವ ಯಂತ್ರಗಳ ನೊಂದಣಿ ಆಗದಿದ್ದರೆ ಲಕ್ಷ ರೂ ದಂಡ: ಆದಾಯ ಸೋರಿಕೆ ತಡೆಗೆ ಸರ್ಕಾರ ಕ್ರಮ
ವಿವಿಧ ರಾಜ್ಯಗಳಿಗೆ ಕೇಂದ್ರದಿಂದ ಹಂಚಿಕೆಯಾದ ತೆರಿಗೆ ಹಣ
ಉತ್ತರ ಪ್ರದೇಶ: 2,18,816.84 ಕೋಟಿ ರೂ
ಬಿಹಾರ: 1,22,685.76 ಕೋಟಿ ರೂ
ಮಧ್ಯಪ್ರದೇಶ: 95,752.96 ಕೋಟಿ ರೂ
ಪಶ್ಚಿಮ ಬಂಗಾಳ: 91,764.26 ಕೋಟಿ ರೂ
ಮಹಾರಾಷ್ಟ್ರ: 77,053.69 ಕೋಟಿ ರೂ
ರಾಜಸ್ಥಾನ: 73.504.11 ಕೋಟಿ ರೂ
ಒಡಿಶಾ: 55,231.76 ಕೋಟಿ ರೂ
ತಮಿಳುನಾಡು: 49,754.95 ಕೋಟಿ ರೂ
ಆಂಧ್ರಪ್ರದೇಶ: 49,364.61 ಕೋಟಿ ರೂ
ಕರ್ನಾಟಕ: 44,485.59 ಕೋಟಿ ರೂ
ಗುಜರಾತ್: 42,424.05 ಕೋಟಿ ರೂ
ಛತ್ತೀಸ್ಗಡ್: 41,557.99 ಕೋಟಿ ರೂ
ಜಾರ್ಖಂಡ್: 40,338.22 ಕೋಟಿ ರೂ
ಅಸ್ಸಾಮ್: 38,154.81 ಕೋಟಿ ರೂ
ತೆಲಂಗಾಣ: 25,639.84 ಕೋಟಿ ರೂ
ಕೇರಳ: 23,480.81 ಕೋಟಿ ರೂ
ಪಂಜಾಬ್: 22,041.48 ಕೋಟಿ ರೂ
ಅರುಣಾಚಲಪ್ರದೇಶ: 21,431.59 ಕೋಟಿ ರೂ
ಉತ್ತರಾಖಂಡ್: 13,637.15 ಕೋಟಿ ರೂ
ಹರ್ಯಾಣ: 13,332.23 ಕೋಟಿ ರೂ
ಹಿಮಾಚಲಪ್ರದೇಶ: 10,124.20 ಕೋಟಿ ರೂ
ಮೇಘಾಲಯ: 9,355.73 ಕೋಟಿ ರೂ
ಮಣಿಪುರ: 8,733.65 ಕೋಟಿ ರೂ
ತ್ರಿಪುರಾ: 8,636.05 ಕೋಟಿ ರೂ
ನಾಗಾಲ್ಯಾಂಡ್: 6,940.56 ಕೋಟಿ ರೂ
ಮಿಝೋರಾಮ್: 6,098.93 ಕೋಟಿ ರೂ
ಸಿಕ್ಕಿಂ: 4,732.76 ಕೋಟಿ ರೂ
ಗೋವಾ: 4,708.37 ಕೋಟಿ ರೂ
ತೆರಿಗೆ ಹಂಚಿಕೆ ಶಿಫಾರಸು ಕೇಂದ್ರದ್ದಲ್ಲ, ಹಣಕಾಸು ಆಯೋಗದ್ದು…
ಕೇಂದ್ರ ಮತ್ತು ರಾಜ್ಯಗಳ ಮಧ್ಯೆ ತೆರಿಗೆ ಹಂಚಿಕೆ ಹೇಗೆ ಆಗಬೇಕೆಂದು ಹಣಕಾಸು ಸಚಿವಾಲಯದಿಂದ ಕೂತು ನಿರ್ಧರಿಸುವುದಿಲ್ಲ. ಅದಕ್ಕಾಗೆಂದೇ ಹಣಕಾಸು ಆಯೋಗವನ್ನು ಕಾಲ ಕಾಲಕ್ಕೆ ರಚಿಸಲಾಗುತ್ತದೆ. ಮೊನ್ನೆಮೊನ್ನೆ 16ನೇ ಹಣಕಾಸು ಆಯೋಗ ರಚನೆ ಆಗಿದೆ. ಇದು ಮುಂದಿನ ಐದು ವರ್ಷಗಳಿಗೆ ತೆರಿಗೆ ಹಂಚಿಕೆ ಸೂತ್ರವನ್ನು ಸರ್ಕಾರಕ್ಕೆ ಶಿಫಾರಸು ಮಾಡುತ್ತದೆ. ಈಗ ಆಗುತ್ತಿರುವ ತೆರಿಗೆ ಹಂಚಿಕೆಯು 15ನೇ ಹಣಕಾಸು ಆಯೋಗ ಶಿಫಾರಸು ಮಾಡಿದ್ದು.
15ನೇ ಆಯೋಗ ಶಿಫಾರಸು ಮಾಡಿದ ಹಂಚಿಕೆ ಸೂತ್ರ ಇದು
ಶಿಶು ಮರಣ, ಲಿಂಗ ಅನುಪಾತ, ಜನನ ಪ್ರಮಾಣ ಇತ್ಯಾದಿ ಜನಸಂಖ್ಯಾ ಬೆಳವಣಿಗೆ (Demographic performance), ಆದಾಯ, ಜನಸಂಖ್ಯೆ, ರಾಜ್ಯದ ವಿಸ್ತಾರ, ಅರಣ್ಯ ಮತ್ತು ಪರಿಸರ ವ್ಯಾಪ್ತಿ, ತೆರಿಗೆ ಪ್ರಮಾಣ ಇವಿಷ್ಟೂ ಅಂಶಗಳನ್ನು ಪರಿಗಣಿಸಿ ತೆರಿಗೆ ಹಂಚಿಕೆ ಸೂತ್ರ ರಚಿಸಲಾಗುತ್ತದೆ. ಒಂದೊಂದು ಅಂಶಕ್ಕೂ ಪ್ರತ್ಯೇಕ ತೂಕ ಇರುತ್ತದೆ. ಅದರ ವಿವರ ಈ ಕೆಳಕಂಡಂತಿದೆ:
ಜನಸಂಖ್ಯಾ ಸಾಧನೆ (Demographic performance): 12.5%
ಆದಾಯ: 45%
ಪ್ರದೇಶದ ವಿಸ್ತಾರ: 15%
ಜನಸಂಖ್ಯೆ: 15%
ಅರಣ್ಯ ಮತ್ತು ಪರಿಸರ: 10%
ತೆರಿಗೆ ಸಂಗ್ರಹ: 2.5%.
ಮಾಹಿತಿ ಕೃಪೆ : ದಿ ಗ್ಲಾನ್ಸ್.