ಕುಕನೂರು : ದೇಶದಲ್ಲಿ ಮತ್ತೊಮ್ಮೆ ಮೋದಿ ಆಡಳಿತ ನಡೆಯುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಯುವ ಮುಖಂಡ ಅನಿಲ್ ಆಚಾರ್ ಹೇಳಿದರು
ಪಟ್ಟಣದ ಗುದ್ನೇಪ್ಪನಮಠದಲ್ಲಿ ನಡೆದ ಗ್ರಾಮ ಚಲೋ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಪತ್ರಿಕೆಯೊಂದಿಗೆ ಮಾತನಾಡಿದ ಅವರು ದೇಶದ ಅಭಿವೃದ್ಧಿಗೇ ಮತ್ತೊಮ್ಮೇ ನರೇಂದ್ರ ಮಾದಿಜಿ ಪ್ರಧಾನಿಯಾಗಬೇಕಿದೆ ದೇಶ ಅಭಿವೃದ್ಧಿ ಯಂತ ಸಾಗಿ ವಿಶ್ವಗುರು ಮ ಭಾರತವಾಗಬೇಕಾದರೆ ನರೇಂದ್ರ ಮೋದಿಯb ಅತ್ಯವಶ್ಯಕವಾಗಿದೆ ಅದಕ್ಕೆ ಪ್ರಾಮಾಣಿಕವಾಗಿ ಕಾರ್ಯಕರ್ತರು ನರೇಂದ್ರ ಮೋದಿಯವರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮನೆಗೆ ಮನೆಗೆ ಮುಟ್ಟಿಸಲು ಶ್ರಮಪಡಬೇಕು ಅಲ್ಲದೆ ಮುಂಬರುವ ಲೋಕ ಸಭಾ ಚುಣಾವಣೆಯಲ್ಲಿ ಎಲ್ಲಾ ಕಾರ್ಯಕರ್ತರು ಭೂತ್ ಮಟ್ಟದ ಅಧ್ಯಕ್ಷರು ಶ್ರಮ ವಹಿಸಬೇಕು ಕೇಂದ್ರ ಸರ್ಕಾರದ ಕರ ಪತ್ರಗಳನ್ನು ಮನೆ-ಮನೆಗೆ ತಲುಪಿಸಿ ವಿಷಯಗಳನ್ನು ತಿಳಿಸಿಕೊಡಬೇಕು ಮತ್ತು ಗ್ರಾಮ ಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಚಾರಮಾಡಿ ಬಹುಮತದಿಂದ ಆರಿಸಿ ತರಬೇಕೆಂದು ಕರೆ ನೀಡಿದರು ಮುಂದಿನ ಚುಣಾವಣೆಗೆ ನರೇಂದ್ರ ಮೋದಿಯವರ ಕೈಯನ್ನು ಬಲಪಡಿಸುತ್ತೇವೆ. ಗ್ರಾಮದಲ್ಲಿ ಮನೆ-ಮನೆಗೆ ಹೋಗಿ ಕರಪತ್ರಗಳನ್ನು ಕೇಂದ್ರ ಸರಕಾರದ ಯೋಜನೆಗಳನ್ನು ಮನವರಿಕೆ ಮಾಡಿ ತಿಳಿಸಿದರು ಹಾಗೂ ಗೋಡೆ ಬರಹವನ್ನು ಬರೆಯಿಸಿದರು.
ಈ ಕಾರ್ಯಕ್ರಮದಲ್ಲಿ. ಭಾಜಪ ಕುಕನೂರು ನಗರ ಘಟಕದ ಅಧ್ಯಕ್ಷ ಬಸವರಾಜ್ ಹಾಳಕೇರಿ, ಪ್ರಧಾನ ಕಾರ್ಯದರ್ಶಿ ಕರಿಬಸಯ್ಯ ಬಿನ್ನಾಳ, ಪಟ್ಟಣ ಪಂಚಾಯಿತಿ ಸದಸ್ಯ ಜಗನ್ನಾಥ್ ಬೋವಿ, ಯುವ ಮುಖಂಡ ಸಿದ್ದಲಿಂಗಯ್ಯ ಬಂಡಿ, ನಾಗಯ್ಯ, ಹಾಗೂ ಗ್ರಾಮ ಚಲೋ ಅಭೀಯಾನದ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು, ಬಿಜೆಪಿ ಮುಖಂಡರು, ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು