ಸಂಪುಟ ಪುನಃರಚನೆ ಗುಟ್ಟು ಬಿಟ್ಟುಕೊಟ್ಟ ಹೆಬಾಳ್ಕರ್. ಬಸವರಾಜ್ ರಾಯರಡ್ಡಿಗೆ ಮಂತ್ರಿ ಸ್ಥಾನ ಫಿಕ್ಸ್ .??
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಶಿವಮೊಗ್ಗದಲ್ಲಿ ಹೇಳಿದ ಮಾತೊಂದು ಶಾಸಕ ಬಸವರಾಜ್ ರಾಯರಡ್ಡಿ ಅವರು ಮಂತ್ರಿ ಮಂಡಲ ಸೇರಿಕೊಳ್ಳುವ ವಿಷಯದ ಬಗ್ಗೆ ಇಂಬು ಕೊಡುವಂತಿದೆ.
ಅಷ್ಟಕ್ಕೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದು ಏನು ??
ಮೊನ್ನೆಯ ಶಿವಮೊಗ್ಗದಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಚಿವ ಸಂಪುಟ ಪುನಃರಚನೆ ಕುರಿತಂತೆ ಮಾತಾಡುತ್ತಾ 5-6 ತಿಂಗಳಲ್ಲಿ ಸಂಪುಟ ಪುನಃರಚನೆ ಆಗುವ ಬಗ್ಗೆ ಸುಳಿವು ನೀಡಿದ್ದಾರೆ.
ಹಾಗೇನಾದರೂ ಆದರೆ ಮಂತ್ರಿ ಸ್ಥಾನ ಕಳೆದುಕೊಳ್ಳುವವರಾರು ? ಸೇರ್ಪಡೆ ಆಗುವವರಾರು? ಎಂದು ಈಗಲೇ ಚರ್ಚೆ ಶುರುವಾಗಿದೆ.
ಅಲ್ಲದೇ ಕಳೆದ ಜುಲೈ ತಿಂಗಳ ಕಾಂಗ್ರೆಸ್ ಪಕ್ಷದ ವರಿಷ್ಠರು, ರಾಜ್ಯ ವರಿಷ್ಠರು ಬೆಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೆಲವು ಸಚಿವರ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದ ಸುದ್ದಿ ಜಗಜ್ಜಾಹೀರವಾಗಿದೆ. ಮಾತ್ರವಲ್ಲ ಪರಸ್ಥಿತಿ ಹೀಗೆಯೇ ಮುಂದುವರೆದರೆ ಮಂತ್ರಿ ಸ್ಥಾನಕ್ಕೆ ಕುತ್ತು ಬರುವ ಸಣ್ಣ ಎಚ್ಚರಿಕೆಯನ್ನು ನೀಡಿದ್ದಾರೆ ಎನ್ನಲಾಗಿದೆ. 5-6 ತಿಂಗಳು ಕಾದು ನೋಡುವ ತಂತ್ರಕ್ಕೆ ಮೊರೆಹೋಗಿದ್ದಾರೆ.
ಇದೀಗ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಂತ್ರಿ ಮಂಡಲ ಪುನಃರಚನೆಯ ಬಗ್ಗೆ ಸುಳಿವು ನೀಡಿದ್ದು 2025 ರ ಜನೆವರಿ ತಿಂಗಳಂತ್ಯಕ್ಕೆ ಸಂಪುಟ ಪುನಃರಚನೆಯ ಸರ್ಕಸ್ ನಡೆಯಲಿದೆ ಎನ್ನಲಾಗಿದೆ.
ಮಂತ್ರಿ ಸ್ಥಾನಕ್ಕೆ ಕುತ್ತು ಯಾರಿಗೆ.??
ಒಂದು ಲೆಕ್ಕಾಚಾರದ ಪ್ರಕಾರ ಸಚಿವ ಆರ್. ಬಿ. ತಿಮ್ಮಾಪುರ, ಕೆ ಎನ್ ರಾಜಣ್ಣ, ಎಂ ಸಿ ಸುಧಾಕರ್ ಸೇರಿ 5 ರಿಂದ 6 ಸಚಿವರಿಗೆ ಕೊಕ್ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಹಾಗೇನಾದರೂ ಇವರ ಸ್ಥಾನದಲ್ಲಿ ಮೊದಲನೆಯವರಾಗಿ ಯಲಬುರ್ಗಾ ಶಾಸಕ, ಸಿ ಎಂ ಅವರ ಆರ್ಥಿಕ ಸಲಹೆಗಾರ ಬಸವರಾಜ್ ರಾಯರಡ್ಡಿ ಸಂಪುಟ ಸೇರುವ ಸಾಧ್ಯತೆ ನಿಚ್ಚಳವಾಗಿದೆ ಎಂದು ಹೇಳಲಾಗುತ್ತಿದೆ. ಯಾವುದಕ್ಕೂ ಮುಂಬರುವ ಸಂಕ್ರಾಂತಿ ವರೆಗೂ ಕಾಯಬೇಕಿದೆ.
— ಪ್ರಜಾವೀಕ್ಷಣೆ ಸುದ್ದಿ ಜಾಲ.