ಯಲಬುರ್ಗಾ : ತಾಲೂಕಿನ ಸಂಗನಹಾಳ ಗ್ರಾಮದಲ್ಲಿ ಕಟಿಂಗ್ ಶಾಪ್ ಮಾಲೀಕನಿಂದ ಯುವಕನೊಬ್ಬನ ಹತ್ಯೆಯಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಇಂದು ಬೆಳಗ್ಗೆ ಯಲಬುರ್ಗಾ ತಾಲೂಕಿನ ಸಂಗನಹಾಳ ಗ್ರಾಮದಲ್ಲಿ ಕಟ್ಟಿಂಗ್ ಶಾಪ್ ಮಾಲೀಕ ಮುದುಕಪ್ಪ (ವಯಸ್ಸು 35) ಹಾಗೂ ಕೊಲೆಯಾದ ಯುವಕ ಯಮನೂರು ಸ್ವಾಮಿ ತಂದೆ ಈರಪ್ಪ ಬಂಡಿಹಾಳ (ವಯಸ್ಸು 26) ನಡುವೆ ಹಣ ವಿಚಾರದಲ್ಲಿ ಜಗಳ ಆಗಿದೆ. ಈ ಜಗಳ ತೀವ್ರವಾಗಿದ್ದು, ಬಳಿಕ ಕಟಿಂಗ್ ಶಾಪ್ ಮಾಲಿಕ ತನ್ನ ಚೂಪಾದ ಚಾಕುವಿನಿಂದ ಇರಿದು ಯುವಕನನ್ನ ಹತ್ಯೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಈ ಘಟನೆ ಯಲಬುರ್ಗಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಇದೇ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.