LOCAL BREAKING : ಸಂಪರ್ಕಕ್ಕೆ ಸಿಗದ ಸದಸ್ಯರು. ಕುಸಿದ ಕಾಂಗ್ರೆಸ್ ಸಂಖ್ಯಾಬಲ? : ಆಪರೇಷನ್ ಕಮಲದ ಭೀತಿ.?

You are currently viewing LOCAL BREAKING : ಸಂಪರ್ಕಕ್ಕೆ ಸಿಗದ ಸದಸ್ಯರು. ಕುಸಿದ ಕಾಂಗ್ರೆಸ್ ಸಂಖ್ಯಾಬಲ? : ಆಪರೇಷನ್ ಕಮಲದ ಭೀತಿ.?

ಸಂಪರ್ಕಕ್ಕೆ ಸಿಗದ ಸದಸ್ಯರು. ಕುಸಿದ ಕಾಂಗ್ರೆಸ್ ಸಂಖ್ಯಾಬಲ??ಆಪರೇಷನ್ ಕಮಲದ ಭೀತಿ.??

ಕುಕನೂರು : ಕುಕನೂರು ಪಟ್ಟಣ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ಕೆಲವೇ ಕೆಲವು ಘಂಟೆಗಳು ಬಾಕಿ ಇರುವಾಗಲೇ ಹಲವು ಹೈಡ್ರಾಮಾ, ತಿರುವುಗಳು ನಡೆಯುತ್ತಿರುವುದು ತೀವ್ರ ಕುತೂಹಲ ಹುಟ್ಟಿಸುತ್ತಿವೆ.

ನಾಳೆ ದಿನಾಂಕ 19 ರಂದು ಮದ್ಯಾಹ್ನದಿಂದ ಪಟ್ಟಣ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆಗೆ ಚುನಾವಣೆ ನಡೆಯುತ್ತಿದ್ದು ತಾಲೂಕು ಆಡಳಿತ ಸಕಲ ರೀತಿಯಲ್ಲಿ ತಯಾರಿ ಮಾಡಿಕೊಂಡಿದೆ.

ಸಿಎಂ ಆರ್ಥಿಕ ಸಲಹೆಗಾರ ಶಾಸಕ ಬಸವರಾಜ ರಾಯರೆಡ್ಡಿ

ಕಾಂಗ್ರೆಸ್, ಬಿಜೆಪಿ ಪಾಳೆಯದಲ್ಲಿ ತೆರೆ ಮರೆಯಲ್ಲಿ ಕೆಲವು ನಾಟಕೀಯ ಬೆಳವಣಿಗೆಗಳು ನಡೆಯುತ್ತಿದ್ದು ಕಾಂಗ್ರೆಸ್ ಪಕ್ಷದ ನಾಯಕರು ನಿದ್ದೆಗೆಡುವಂತೆ ಮಾಡಿದೆ.

ಕಾಂಗ್ರೆಸ್  ದಸ್ಯರ ಹೈಜಾಕ್ ಶಂಕೆ..??

ಸದ್ಯದ ಬೆಳವಣಿಗೆ ಪ್ರಕಾರ ಕಾಂಗ್ರೆಸ್ ಪಕ್ಷದ ಇಬ್ಬರು ಸದಸ್ಯರು ಪಕ್ಷದ ಸಂಪರ್ಕಕ್ಕೆ ಸಿಗುತ್ತಿಲ್ಲ. ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಶ್ರಾವಣ ಮಾಸದ ಪ್ರವಾಸ ಕ್ಕೆ ಹೋಗಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಸಮಾಜಯಿಸಿ ನೀಡುತ್ತಿದ್ದರೂ ಕೂಡಾ ಒಳಗೊಳಗೇ ಕೈಕೋಡುವ ಭೀತಿ ಕಾಂಗ್ರೆಸ್ ನಾಯಕರಿಗೆ ಕಾಡುತ್ತಿದೆ.

ವಿಪ್ ಜಾರಿ ಮಾಡಲು ಮುಂದಾದ ಕಾಂಗ್ರೆಸ್!!

ಹಲವು ನಾಟಕೀಯ ತಿರುವು ಪಡೆಯುತ್ತಿರುವ ಹಿನ್ನೆಲೆ ಕಾಂಗ್ರೆಸ್ ಪಕ್ಷದ ಚಿನ್ಹೆ ಅಡಿ ಗೆದ್ದಿರುವ ಸದಸ್ಯರೆಲ್ಲಗೂ ವಿಪ್ ಜಾರಿ ಮಾಡಲಾಗುತ್ತಿದೆ.

ಈ ಕುರಿತಂತೆ ಸ್ಪಷ್ಟವಾಗಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ರೆಹಮಾನ್ ಸಾಬ್ ಮಕ್ಕಪ್ಪನವರ್, ಶಾಸಕರಾದ ಬಸವರಾಜ್ ರಾಯರಡ್ಡಿ ಮತ್ತು ಪಕ್ಷದ ಹಿರಿಯರ ಮಾರ್ಗದರ್ಶನದಂತೆ ಎಲ್ಲಾ ಕಾಂಗ್ರೆಸ್ ಸದಸ್ಯರಿಗೆ ಚುನಾವಣೆ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಕುರಿತು ಇಂದು ಸಂಜೆಯೊಳಗೆ ವಿಪ್ ಜಾರಿ ಮಾಡಲಾಗುತ್ತದೆ. ಸಂಪರ್ಕಕ್ಕೆ ಸಿಗದ ಇಬ್ಬರು ಸದಸ್ಯರ ಮನೆಗೆ ವಿಪ್ ಪ್ರತೀ ಅಂಟಿಸಿ ಬರುತ್ತೇವೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷಕ್ಕೆ ಪಟ್ಟಣ ಪಂಚಾಯತ್ ಗದ್ದುಗೆ ನಿಶ್ಚಿತ.

ಒಟ್ಟು 19 ಸದಸ್ಯರಲ್ಲಿ 10 ಕಾಂಗ್ರೆಸ್ ಸದಸ್ಯರು ಚುನಾಯಿತರಾಗಿದ್ದು ಅದರಲ್ಲಿ ಸದ್ಯಕ್ಕೆ ಇಬ್ವರು ಪಕ್ಷದ ಮುಖಂಡರ ಸಂಪರ್ಕದಲ್ಲಿ ಇಲ್ಲ. ಅವರಿಬ್ಬರಿಗೂ ವಿಪ್ ಜಾರಿ ಮಾಡುತ್ತೇವೆ, ಸಂಜೆ ಯೊಳಗೆ ಆ ಸದಸ್ಯರು ರಿಪೋರ್ಟ್ ಮಾಡುವ ನಿರೀಕ್ಷೆ ಇದೆ. ಹಾಗೊಂದು ವೇಳೆ ಇಬ್ಬರು ಸದಸ್ಯರು ಕೈಕೊಟ್ಟರೂ ಶಾಸಕರ ಒಂದು ಮತ, ಲೋಕಸಭಾ ಸದಸ್ಯರ ಒಂದು ಮತದಿಂದ ಪಟ್ಟಣ ಪಂಚಾಯತ್ ಗದ್ದುಗೆ ಕಾಂಗ್ರೆಸ್ ಪಕ್ಷಕ್ಕೆ ದಕ್ಕಲಿದೆ ಎಂದು ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ರೆಹಮಾನ್ ಸಾಬ್ ಮಕ್ಕಪ್ಪನವರ್ ಹೇಳಿದ್ದಾರೆ.

ಸದಸ್ಯರು ಒಟ್ಟಾಗಿದ್ದಾರೆ : ಸಂಗಮೇಶ್ ಗುತ್ತಿ.

ಮತ್ತೊಂದುಡೆ ಪ್ರತಿಕ್ರಿಯೆ ಕೊಟ್ಟಿರುವ ಬ್ಲಾಕ್ ಕಾಂಗ್ರೆಸ್ ವಕ್ತಾರ ಸಂಗಮೇಶ್ ಗುತ್ತಿ, ಇಬ್ಬರು ಸದಸ್ಯರು ದೇವಸ್ಥಾನಕ್ಕೆ ಹೋಗಿದ್ದಾರೆ. ಸಂಜೆ ವೇಳೆಗೆ ಊರಿಗೆ ಬರಲಿದ್ದಾರೆ. ಎಲ್ಲ ಸದಸ್ಯರು ಒಟ್ಟಾಗಿದ್ದಾರೆ ಎಂದು ಹೇಳಿದ್ದಾರೆ.

19 ಸದಸ್ಯ ಬಲದ ಪಟ್ಟಣ ಪಂಚಾಯತ್ ನಲ್ಲಿ ಕಾಂಗ್ರೆಸ್ ಪಕ್ಷದ 10 ಸದಸ್ಯರು, ಬಿಜೆಪಿ ಪಕ್ಷದ 9 ಸದಸ್ಯರು ಇದ್ದಾರೆ. ಇದರ ಜೊತೆಗೆ ಆಡಳಿತರೂಢ ಕಾಂಗ್ರೆಸ್ ಪಕ್ಷದ ಶಾಸಕರ ಒಂದು ಮತ, ಮತ್ತು ಸಂಸತ್ ಸದಸ್ಯರ ಒಂದು ಮತ ಸೇರಿದರೆ ಕಾಂಗ್ರೆಸ್ ಪಕ್ಷದ ಸಂಖ್ಯಾಬಲ 12 ಕ್ಕೆ ಏರಲಿದೆ. ಸರಳ ಬಹುಮತದೊಂದಿಗೆ ಕಾಂಗ್ರೆಸ್ ಪಕ್ಷವು ಪಟ್ಟಣ ಪಂಚಾಯತ್ ಗದ್ದುಗೆ ಹಿಡಿಯಲಿದೆ ಎಂಬುದು ಸದ್ಯದ ವರ್ತಮಾನ.

ಪ್ರಜಾವೀಕ್ಷಣೆ ಸುದ್ದಿ ಜಾಲ. ಕುಕನೂರು

Leave a Reply

error: Content is protected !!