ಪುರಸಭೆ ನೂತನ ಅಧ್ಯಕ್ಷ- ಉಪಾಧ್ಯಕ್ಷರಿಗೆ ಸಚಿವ ಎಚ್.ಕೆ.ಪಾಟೀಲವರಿಂದ ಸನ್ಮಾನ.

ಪುರಸಭೆ ನೂತನ ಅಧ್ಯಕ್ಷ- ಉಪಾಧ್ಯಕ್ಷರಿಗೆ ಸಚಿವ ಎಚ್.ಕೆ.ಪಾಟೀಲವರಿಂದ ಸನ್ಮಾನ.

ಲಕ್ಷ್ಮೇಶ್ವರ : ಪಟ್ಟಣದ ಪುರಸಭೆಗೆ ನೂತನವಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಯಲ್ಲವ್ವ ಗಂಗಪ್ಪ ದುರಗಣ್ಣವರ ಹಾಗೂ ಫೀರ್ದೋಷ ಆಡೂರ ರವರಿಗೆ ಗದಗ ಜಿಲ್ಲಾ ಉಸ್ತುವಾರಿ ಹಾಗೂ ಕಾನೂನು ಮತ್ತು ಸಂಸದೀಯ ಸಚಿವರಾದ ಎಚ್.ಕೆ.ಪಾಟೀಲರವರು ಸನ್ಮಾನಿಸಿ ಗೌರವಿಸಿದರು.

ನಂತರ ಮಾತನಾಡಿದ ಅವರು ಪಟ್ಟಣದ ಐತಿಹಾಸಿಕ ಪ್ರಸಿದ್ಧ ಶ್ರೀ ಸೋಮೇಶ್ವರ ದೇವಸ್ಥಾನದ ಉತ್ತರ ದ್ವಾರಬಾಗಿಲು ನಿರ್ಮಾಣ ಕಾರ್ಯ ಪ್ರಾರಂಭ ಮಾಡುವುದಕ್ಕೆ ನಮ್ಮ ಇಲಾಖೆಯಿಂದ 50ಲಕ್ಷ ಹಣ ಮಂಜೂರ ಮಾಡಲಾಗಿದೆ.ಈ ಭಾಗದ ರೈತರ ಅನುಕೂಲಕ್ಕಾಗಿ ಹೆಸರು ಕಾಳು ಖರೀದಿ ಕೇಂದ್ರ ಆರಂಭ ಮಾಡುವುದಾಗಿ ಹೇಳಿದರು,ಪಟ್ಟಣದ ರಸ್ತೆ,ಚರಂಡಿ ನಿರ್ಮಾಣ,ಕುಡಿಯುವ ನೀರು ಮತ್ತು ಮೂಲಭೂತ ಸೌಲಭ್ಯಗಳ ಪೂರೈಕೆಗೆ ಸಂಬಂಧಿಸಿದ ಇಲಾಖೆಯಿಂದ ಹೆಚ್ಚಿನ ಅನುದಾನ ಮಂಜೂರಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಜಾತಾ ದೊಡ್ಡಮನಿ, ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ರಾಮಣ್ಣ ಲಮಾಣಿ, ಮಹೇಶ ಹೊಗೆಸೊಪ್ಪಿನ, ರಾಮು ಗಡದವರ, ಬಸವರಾಜ ಓದುನವರ, ಜಯಕ್ಕ ಕಳ್ಳಿ, ಜಯಮ್ಮ ಅಂದಲಗಿ, ಸುಶೀಲವ್ವ ಲಮಾಣಿ, ಮಂಜವ್ವ ನಂದೆಣ್ಣವರ, ರಾಜಣ್ಣ ಕುಂಬಿ, ಪದ್ಮರಾಜ ಪಾಟೀಲ್, ಚನ್ನಪ್ಪ ಜಗಲಿ, ನೀಲಪ್ಪ ಶರಸೂರಿ,ಕಿರಣ ನವಲೆ,ಪಕ್ಕೀರೇಶ ಮ್ಯಾಟಣ್ಣವರ, ಗುರುನಾಥ ದಾನಪ್ಪನವರ, ಬಾಬಣ್ಣ ಅಳವಂಡಿ, ರಾಜು ಮಡಿವಾಳರ,ಮಂಜುನಾಥ ಶೆರಶೂರಿ,ಪಕ್ಕೀರೇಶ ನಂದೆಣ್ಣವರ, ಸೇರಿದಂತೆ ಅನೇಕರಿದ್ದರು.

ವರದಿ: ವೀರೇಶ ಗುಗ್ಗರಿ

Leave a Reply

error: Content is protected !!