LOCAL NEWS :ವಿಧ್ಯಾರ್ಥಿಗಳ ಬಾಳನ್ನು ಬೆಳಗಿಸುವ ಶಿಕ್ಷಕರಿಗೆ ಋಣಿಯಾಗಿರೋಣ : ಹಸನ್. ಎನ್.ತಹಶೀಲ್ದಾರ

You are currently viewing LOCAL NEWS :ವಿಧ್ಯಾರ್ಥಿಗಳ ಬಾಳನ್ನು ಬೆಳಗಿಸುವ ಶಿಕ್ಷಕರಿಗೆ ಋಣಿಯಾಗಿರೋಣ : ಹಸನ್. ಎನ್.ತಹಶೀಲ್ದಾರ

ಶಿರಹಟ್ಟಿ : ಇಂದು ಗಂಧದ ಗುಡಿ ಬಳಗ (ರಿ) ಹಾಗೂ ಕರ್ನಾಟಕ ಪ್ರಜಾಪರ ವೇದಿಕೆಯ ವತಿಯಿಂದ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಶಿರಹಟ್ಟಿ ಪಟ್ಟಣದ ಸರಕಾರಿ ಹಿರಿಯ ಕನ್ನಡ ಗಂಡು ಮಕ್ಕಳ ಪ್ರಾಥಮಿಕ ಶಾಲೆಯ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಸನ್ಮಾನಿಸುವ ಮೂಲಕ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.

ಈ ಸಂಧರ್ಭದಲ್ಲಿ ಮಾತನಾಡಿದ ಗಂಧದ ಗುಡಿ ಬಳಗ ರಾಜ್ಯ ಕಾರ್ಯಕಾರಿ ಸಮಿತಿ ಸಂಚಾಲಕ ಹಸನ್,ಎನ್, ತಹಶೀಲ್ದಾರ ಮಾತನಾಡಿ, ‘ಭಾರತ ದೇಶದ ಎರಡನೇ ರಾಷ್ಟ್ರಪತಿಯಾಗಿ ಹಾಗೂ ದೇಶದ ಮೊದಲ ಉಪ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ ಶ್ರೇಷ್ಠ ಶಿಕ್ಷಣ ತಜ್ಞರಾಗಿದ್ದ ಡಾ!! ಸರ್ವಪಲ್ಲಿ ರಾಧಾಕೃಷ್ಣನ್ ಅವರು ಶಿಕ್ಷಕರ ಮೇಲಿನ ಅಪಾರ ಗೌರವದಿಂದ ಅವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಮಾಡಿದರು.

ಭಾರತೀಯ ಪರಂಪರೆಯಲ್ಲಿ ಗುರುವಿಗೆ ಮಹತ್ವ ಸ್ಥಾನ ನೀಡಲಾಗಿದೆ ಸಮಾಜದಲ್ಲಿ ಒಬ್ಬ ವ್ಯಕ್ತಿಯನ್ನು ಒಳ್ಳೆಯ ವ್ಯಕ್ತಿಯನ್ನಾಗಿ ರೂಪಿಸುವಲ್ಲಿ ಗುರುವಿನ ಪಾತ್ರ ಮಹತ್ವದಾಗಿದೆ ಗುರುಕುಲ ಶಿಕ್ಷಣದಿಂದ ಹಿಡಿದು ಇಂದಿನ ಶಿಕ್ಷಣದವರೆಗೆ ಶಿಕ್ಷಕರು ವಿದ್ಯಾರ್ಥಿಗಳ ಜೀವನವನ್ನು ರೂಪಿಸುವಲ್ಲಿ ತಮ್ಮನ್ನು ತಾವು ಅರ್ಪಿಸಿಕೊಳ್ಳುತ್ತಿದ್ದಾರೆ ಇಂತಹ ಶಿಕ್ಷಕರ ಕಾರ್ಯವು ನಿಜಕ್ಕೂ ಶ್ಲಾಘನೀಯವಾದದ್ದು, ವಿದ್ಯಾರ್ಥಿಗಳ ಬಾಳನ್ನು ಬೆಳಗಿಸುವ ಶಿಕ್ಷಕರಿಗೆ ನಾವೇಲ್ಲರೂ ಋಣಿಯಾಗಿರೋಣ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಎಸ್.ಎಚ್.ಪೂಜಾರ,ಶಿಕ್ಷಕರಾದ ಎಸ್.ಬಿ.ಖೋಕಲೆ, ಎಂ.ವಾಯ್.ಹರಿಜನ್, ಎಸ್.ಎಸ್.ಶೆಟ್ಟರ, ಎಸ್.ಎಫ್.ಸುಣಗಾರ, ಎಸ್.ಸಿ.ಮೂರಶಿಳ್ಳಿ, ಪಿ.ಪಿ.ಗಾಣಿಗೇರ, ಎಸ್.ಎ.ಮಡಿವಾಳರ, ಶರೀಫ.ಗುಡಿಮನಿ,ಶಿವಾನಂದ. ಸುಲ್ತಾನಪೂರ, ಅನೀಲ.ಗುಡಿಮನಿ, ಕಳಕಪ್ಪ.ಬಿಸನಳ್ಳಿ,ಹಾಗೂ ಶಾಲೆಯ ವಿಧ್ಯಾರ್ಥಿಗಳು ಹಾಜರಿದ್ದರು.

ವರದಿ: ವೀರೇಶ್ ಗುಗ್ಗರಿ

Leave a Reply

error: Content is protected !!