ಕುಕನೂರು : ತಾಲೂಕಿನ ಬನ್ನಿಕೊಪ್ಪ ಗ್ರಾಮದಲ್ಲಿ ನಡೆಯುತ್ತಿರುವ ಸಿಮೆಂಟ್ ರಸ್ತೆ ಹಾಗೂ ಡ್ರೈನೇಜ್ ಕಾಮಗಾರಿಗಳು ಸಂಪೂರ್ಣ ಕೃಪೆ ಗುಣಮಟ್ಟದಿಂದ ಕೂಡಿದ್ದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಹಿಂದೆ ನಿರ್ಮಿಸಲಾಗಿದ್ದ ಉತ್ತಮ ಗುಣಮಟ್ಟದ ಡ್ರೈನೇಜ್ ಕಿತ್ತುಹಾಕಿ ಹೊಸದಾಗಿ ನಿರ್ಮಾಣ ಮಾಡುತ್ತಿರುವ ಸಿ.ಸಿ ರಸ್ತೆ, ಚರಂಡಿ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದ್ದು ಒಂದು ವರ್ಷ ಬಾಳಿಕೆ ಬರುವ ಗ್ಯಾರಂಟಿ ಯು ಸಹ ಇರುವುದಿಲ್ಲ ಎಂದು ಗ್ರಾಮಸ್ಥರು ರೊಚ್ಚಿಗೆದ್ದಿದ್ದಾರೆ.
ಸಿಸಿ ರಸ್ತೆ ಕಾಮಗಾರಿಗೆ ಸಿಸಿ ಹಾಕುವ ಮೊದಲು ನೆಲ ಆಗದು ಕಡಿ ಹಾಗೂ ಗರಿಸು ಹಾಕಿ ರಸ್ತೆಯನ್ನು ಗಟ್ಟಿಗೊಳಿಸಬೇಕಾದ ಗುತ್ತಿಗೆದಾರರು ರಸ್ತೆಯನ್ನು ಗಟ್ಟಿಗೊಳಿಸಲು 40 ಎಂಎಂ ಕಡಿ ಹಾಗೂ ವೈಟಮಿಕ್ಸ್ ಹಾಕಬೇಕಾದ ಸ್ಥಳದಲ್ಲಿ ಯಾವುದೇ ಸೂಕ್ತ ರೀತಿಯ ಕಾಮಗಾರಿ ನಡೆಸದೆ ಮನಸೋ ಇಚ್ಛೆ ಕಾಮಗಾರಿ ನಿರ್ಮಾಣ ಮಾಡುತ್ತಿರುವುದು ಗ್ರಾಮಸ್ಥರ ಸಿಟ್ಟಿಗೆ ಕಾರಣವಾಗಿದ್ದು 6 ಇಂಚಿಗಳ ದಪ್ಪನಾಗಿ ನಿರ್ಮಾಣಗೊಳ್ಳಬೇಕಾದ ಸಿ.ಸಿ ರಸ್ತೆಯು ಕೇವಲ ಮೂರು ಇಂಚುಗಳಷ್ಟು ಎತ್ತರ ಹಾಕಿರುವುದು ಅನುಮಾನಕ್ಕೆ ಕಾರಣವಾಗಿದೆ ಹಾಗೂ ಸ್ಥಳದಲ್ಲಿ ಇರದೆ ಇರುವುದು ಸಹ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಇದೆಲ್ಲದರ ಜೊತೆಗೆ ಕಾಮಗಾರಿಗೆ ಮರಳು ಬಳಸದೆ ಕೇವಲ ಎಂ ಸ್ಯಾಂಡ್ ಬಳಕೆ ಮಾಡುತ್ತಿರುವುದು ಅದು ಸಹ ಕೇವಲ ಧೂಳಿನಿಂದ ಕೂಡಿದ್ದು ಜೊತೆಗೆ ಸಂಪೂರ್ಣ ಕಳಪೆ ಮಟ್ಟದ ಯಾವುದೇ ಗ್ರೇಡ್ ಸಹ ಇಲ್ಲದ ಸಿಮೆಂಟ್ ಬಳಕೆ ಮಾಡುತ್ತಿರುವುದು ಅನುಮಾನಕ್ಕೆ ಆಸ್ಪದ ನೀಡಿದ್ದು ಗಟ್ಟಿಮುಟ್ಟಾದ ಕಾಮಗಾರಿ ನಿರ್ಮಾಣ ಮಾಡದೆ ಕೇವಲ ಬಿಲ್ ಪಾವತಿಸಿಕೊಳ್ಳುವ ಉದ್ದೇಶದಿಂದ ಕಾಮಗಾರಿ ನಡೆಸುತ್ತಿರುವುದು ಮೇಲ್ನೋಟಕ್ಕೆ ಸಾಬೀತಾಗಿರುತ್ತದೆ ಇದೇ ಕಾರಣದಿಂದ ಗ್ರಾಮಸ್ಥರು ಕಾಮಗಾರಿಯನ್ನು ಸಹಿತಗೊಳಿಸಿದ್ದು ಸಂಬಂಧಪಟ್ಟ ಇಂಜಿನಿಯರ್, ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಕಾಮಗಾರಿ ಸ್ಥಳಕ್ಕೆ ಆಗಮಿಸಿ ಕಾಮಗಾರಿ ಪರಿಶೀಲಿಸಿದ ನಂತರವೇ ಕಾಮಗಾರಿಯನ್ನು ಮುಂದುವರಿಸಲು ಅವಕಾಶ ಮಾಡಿಕೊಡುವುದಾಗಿ ಗ್ರಾಮಸ್ಥರು ತಿಳಿಸಿರುತ್ತಾರೆ.
ಈ ಸಂದರ್ಭದಲ್ಲಿ ನಾಗರಾಜ್ ವೆಂಕಟಾಪುರ್, ಮರಿಗೌಡ್ರು ತಗ್ಗಿನಮನಿ, ಸಿದ್ದಪ್ಪ ಮಾಳೆಕೊಪ್ಪ, ಶರಣಪ್ಪ ಯರಾಶಿ, ಹಾಲೇಶ್ ಯರಾಶಿ ಹನುಮಂತಗೌಡ ಆದಾಪುರ್, ಮಾರುತಿ ಅಡಿವಳ್ಳಿ, ಸುರೇಶ್ ಓಜನಹಳ್ಳಿ, ಮುತ್ತಪ್ಪ ಗೊಂಡಬಾಳ, ಮಲ್ಲಪ್ಪ ಮೆಣಸಿನಕಾಯಿ, ವಿಶ್ವನಾಥ್ ನಡುಮನಿ, ಯಂಕನಗೌಡ ಅಪ್ಪ ಗೌಡ್ರ, ಬಸವರಾಜ್ ಡಂಬಳ. ಹಾಗೂ ಇತರರು ಇದ್ದರು.