BREAKING : ರಸ್ತೆ ಅಪಘಾತ : ಯರೆಹಂಚಿನಾಳ PDO ಅಡಿವೆಪ್ಪ ಸಾವು..!

You are currently viewing BREAKING : ರಸ್ತೆ ಅಪಘಾತ : ಯರೆಹಂಚಿನಾಳ PDO ಅಡಿವೆಪ್ಪ ಸಾವು..!

ಬೆಳ್ಳಂ ಬೆಳಗ್ಗೆ ರಸ್ತೆ ಅಪಘಾತ, ಯರೇಹಂಚಿನಾಳ ಪಿ ಡಿ ಓ ಪರಸ್ಥಿತಿ ಗಂಭೀರ, ಕೊಪ್ಪಳ ಆಸ್ಪತ್ರೆಗೆ ದಾಖಲಿಸಿದ್ದು, ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಪಿಡಿಒ ಅಡಿವೆಪ್ಪ ಸಾವು..!

ಕುಕನೂರು : ಬೆಳ್ಳಂ ಬೆಳಿಗ್ಗೆ ರಸ್ತೆ ಅಪಘಾತದಲ್ಲಿ ಯರೇ ಹಂಚಿನಾಳ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಅಡಿವೆಪ್ಪ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಇಂದು ಮಂಗಳವಾರ ಬೆಳಿಗ್ಗೆ 8.30 ರ ಸುಮಾರಿಗೆ ಯೆರೇಹಂಚಿನಾಳ ಪಿ ಡಿ ಓ ಅಡಿವೆಪ್ಪ ಎಂಬುವವರು ಇಟಗಿಯಿಂದ ಕುಕನೂರು ಕಡೆ ಬೈಕ್ ನಲ್ಲಿ ಬರುತ್ತಿರುವಾಗ ಮಾರ್ಗಮದ್ಯದಲ್ಲಿ ಆಕ್ಸಿಡೆಂಟ್ ಆಗಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಹತ್ತಿರದ ಕುಕನೂರು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗೆ ಕೊಪ್ಪಳ ಜಿಲ್ಲಾ ಆಸ್ಪತ್ರೆ ಗೆ ಕರೆದೋಯ್ಯಲಾಗಿತ್ತು, ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಪಿಡಿಒ ಅಡಿವೆಪ್ಪ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

Leave a Reply

error: Content is protected !!