ಸ್ವಚ್ಛತಾ ಹಿ ಸೇವಾ ಪಾಕ್ಷಿಕ ಸ್ವಚ್ಛತಾ ಪ್ರತಿಜ್ಞೆ ಕಾರ್ಯಕ್ರಮ
ಶಿರಹಟ್ಟಿ : ತಾಲೂಕು ಬೆಳ್ಳಟ್ಟಿ ಭೀಮರೆಡ್ಡಿ ಹಳವು೦ಡಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಹಾಗೂ ಸರಕಾರಿ ಪದವಿಪೂರ್ವ ಕಾಲೇಜ್ ಆವರಣದಲ್ಲಿ , ಕೇಂದ್ರ ಸರಕಾರದ ಆದೇಶದಂತೆ ಸ್ವಚ್ಛತಾ ಹಿ ಸೇವಾ ಪಾಕ್ಷಿಕೆ 2024 ಆಚರಣೆ ಕಾರ್ಯಕ್ರಮ ಜರಗಿತು.
ಈ ಸಂದರ್ಭದಲ್ಲಿ ಮಕ್ಕಳೊಂದಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಹಾಗೂ ಜಿಲ್ಲಾ ಪಂಚಾಯತಿಯ ಮಾನ್ಯ ಯೋಜನಾ ನಿರ್ದೇಶಕರ ಉಪಸ್ಥಿತಿಯಲ್ಲಿ ,ಸ್ವಚ್ಛತೆ ಕುರಿತು ಜಾಗೃತಿ ಕಾರ್ಯಕ್ರಮದ ಮುಖಾಂತರ ಪ್ರತಿಜ್ಞಾವಿಧಿಯನ್ನ ಬೋಧಿಸಲಾಯಿತು.
ಈ ಕಾರ್ಯಕ್ರಮದಲ್ಲಿ ತಾಲೂಕಿನ ಕಾರ್ಯನಿರ್ವಾಹ ಅಧಿಕಾರಿಗಳು ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರು ವಿದ್ಯಾ ಸಂಸ್ಥೆಯ ಮುಖ್ಯೋಪಾಧ್ಯಾಯರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಹಾಗು ಜಿಲ್ಲಾ ಸಮಾಲೋಚಕರು ಹಾಗೂ ಮುದ್ದು ವಿದ್ಯಾರ್ಥಿನಿಯರು ಹಾಜರಿದ್ದರು.