ಇಂದಿನಿಂದ ಕಂದಾಯ ಇಲಾಖೆ ಆನ್ಲೈನ್ ಸೇವೆಗಳು ಅನಿರ್ಧಿಷ್ಟಾವಧಿಗೆ ಬಂದ್
ಕುಕನೂರು : ರಾಜ್ಯದ್ಯಂತ ನಾಳೆಯಿಂದ ಕಂದಾಯ ಇಲಾಖೆ ಆನ್ಲೈನ್ ಸೇವೆಗಳು ಅನಿರ್ದಿಷ್ಟ ಅವಧಿಯವರೆಗೆ ಬಂಧಾಗಲಿವೆ. ಕಂದಾಯ ಇಲಾಖೆಯ ಆಧಾರ ಸ್ತಂಭವಾಗಿರುವ ಗ್ರಾಮ ಲೆಕ್ಕಾಧಿಕಾರಿಗಳು ನಡೆಸುತ್ತಿರುವ ಅನಿದಿಷ್ಟ ಅವಧಿ ಧರಣಿಯಿಂದಾಗಿ ಕಂದಾಯ ಇಲಾಖೆ ಆನ್ಲೈನ್ ಸೇವೆಗಳಲ್ಲಿ ವ್ಯತೆಯ ಉಂಟಾಗಲಿದೆ.
ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ವತಿಯಿಂದ ಈ ಪ್ರತಿಭಟನೆಯನ್ನು ರಾಜ್ಯದ್ಯಂತ ಹಮ್ಮಿಕೊಳ್ಳಲಾಗಿದೆ. ಗ್ರಾಮ ಲೆಕ್ಕಾಧಿಕಾರಿಗಳ ಪ್ರಮುಖ ಬೇಡಿಕೆಗಳು…
1.ಕಂದಾಯ ಇಲಾಖೆಯಿಂದ ಅಭಿವೃದ್ಧಿಪಡಿಸಿರುವ ಸುಮಾರು 17 ಅಧಿಕ ಮೊಬೈಲ್ ಹಾಗೂ ವೆಬ್ ತಂತ್ರಾAಶಗಳ ಮೂಲಕ ಕರ್ತವ್ಯ ನಿಲ್ಲಿಸಲು ಈ ತಂತ್ರಾಂಶಗಳ ನಿರ್ವಹಣೆಗೆ ಅವಶ್ಯವಾಗಿರುವ ಮೊಬೈಲ್ ಸಾಧನ ಹಾಗೂ ಲ್ಯಾಪ್ಟಾಪ್ ಹಾಗೂ ಅದಕ್ಕೆ ಅವಶ್ಯವಾಗಿರುವ ಇಂಟರ್ನೆಟ್ ಹಾಗೂ ಸ್ಕ್ಯಾನರ್ ಗಳನ್ನು ಒದಗಿಸಿದೆ ಕರ್ತವ್ಯಕ್ಕೆ ನಿರ್ವಹಿಸಲು ಒತ್ತಡ ಏರುತ್ತಿದ್ದರಿಂದ ಕ್ಷೇತ್ರ ಮಟ್ಟದಲ್ಲಿ ಅಧಿಕ ಒತ್ತಡದೊಂದಿಗೆ ಗ್ರಾಮ ಲೆಕ್ಕಾಧಿಕಾರಿಗಳು ಕಾರ್ಯನಿರ್ವಹಿಸುತ್ತಿರುವುದು ಕಂಡುಬಂದಿದೆ.
ಆದ್ದರಿಂದ ಗ್ರಾಮ ಲೆಕ್ಕಾಧಿಕಾರಿಗಳಿಗೆ ಉತ್ತಮವಾದ ಮೊಬೈಲ್ ಲ್ಯಾಪ್ಟಾಪ್ ಗೂಗಲ್ ಕ್ರೋಮ್ ಬುಕ್ ಪ್ರಿಂಟರ್ ಇಂಟರ್ನೆಟ್ ಸೌಲಭ್ಯಗಳನ್ನು ನೀಡಬೇಕು.
2. ನಿವೃತ್ತಿ ಹಂತದಲ್ಲಿರುವ ಗ್ರಾಮ ಲೆಕ್ಕಾಧಿಕಾರಿಗೆ ಪದನೋಕ್ತಿ ನೀಡಬೇಕು.
3. ಗ್ರಾಮ ಲೆಕ್ಕಾಧಿಕಾರಿಗಳ ಅಂತರ್ಜಲ ಪತಿ ಪತ್ನಿ ಪ್ರಕರಣಗಳ ವರ್ಗಾವಣೆಗೆ ಆದೇಶ ನೀಡಿ ಅಂತಿಮ ಆದೇಶಕ್ಕೆ ಬಾಕಿ ಇರುವ ಪ್ರಕರಣಗಳಿಗೆ ಆದೇಶ ನೀಡಬೇಕು.
4. ಮೊಬೈಲ್ ತಂತ್ರಾAಶಗಳ ಕೆಲಸದ ವಿಚಾರವಾಗಿ ಇದುವರೆಗೂ ಆಗಿರುವ ಎಲ್ಲಾ ಅಮಾನತುಗಳನ್ನು ತಕ್ಷಣ ರದ್ದುಪಡಿಸಿ ಅದನ್ನು ಹಿಂಪಡೆಯಬೇಕು.
5. ಪ್ರಯಾಣ ಬತ್ಯೆ ದರವನ್ನು 500/- ರೂಪಾಯಿಗಳಿಂದ 3000/- ರೂಪಾಯಿಗಳಿಗೆ ಹೆಚ್ಚುವರಿ ಮಾಡುವ ಬಗ್ಗೆ.
6. ಕೆಲಸದ ಅವಧಿಯ ಮುನ್ನ ಹಾಗೂ ಕೆಲಸದ ಮುಕ್ತಾಯದ ನಂತರ ನಡೆಸಲಾಗುವ ಎಲ್ಲಾ ಬಗೆಯ ವರ್ಚುವಲ್ಲಿ ಸಭೆಗಳನ್ನು ಕಡ್ಡಾಯವಾಗಿ ನಿಷೇಧಿಸುವ ಕುರಿತು.
ಹೀಗೆ ವಿವಿಧ ಬೇಡಿಕೆಗಳನ್ನು ಈಡೇರಿಸುವವರೆಗೂ ಇಲಾಖೆಗೆ ಸಂಬಂಧಿಸಿದ ಯಾವುದೇ ಲೇಖನಿ ಕಾರ್ಯಗಳನ್ನು ಮಾಡುವುದಿಲ್ಲ ಎಂದು ರಾಜ್ಯಾದ್ಯಂತ ಗ್ರಾಮ ಲೆಕ್ಕಾಧಿಕಾರಿಗಳು ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದಾರೆ. ಈ ಕುರಿತು ಕುಕನೂರು ತಾಲೂಕಿನ ಗ್ರಾಮ ಲೆಕ್ಕಾಧಿಕಾರಿಗಳು ಸಂಘಟನೆಯೂ ಸಹಿತ ಧರಣಿ ನಡೆಸುತ್ತೇವೆ ಎಂದು ಕುಕನೂರು ತಹಸೀಲ್ದಾರರಿಗೆ ಮನವಿ ಪತ್ರವನ್ನು ಸಲ್ಲಿಸಿದ್ದಾರೆ.
ಅಲ್ಲದೆ ರಾಜ್ಯ ಸಂಘಟನೆಯ ಆದೇಶದ ಮೇರೆಗೆ ತಹಶೀಲ್ದಾರ್ ಕಚೇರಿಯ ಮುಂದೆ ಗ್ರಾಮ ಲೆಕ್ಕಾಧಿಕಾರಿಗಳು ಧರಣಿ ಕುಳಿತುಕೊಳ್ಳುವ ಸಂಭವ ಇದೆ ಎಂದು ತಿಳಿದು ಬಂದಿದೆ.