2023ರ IPLನ 9ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ 81 ರನ್‌ಗಳಿಂದ ಭರ್ಜರಿ ಗೆಲುವು ಕಂಡಿತು. ಟಾಸ್ ಸೋತು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ ನಿಗದಿತ ಓವರ್‌ನಲ್ಲಿ 7 ವಿಕೆಟ್ ನಷ್ಟಕ್ಕೆ 205 ರನ್ ರಾಯಲ್ ಚಾಲೆಂಜರ್ಸ್ ಬೆಂಗಳೂರುಗೆ ಟಾರ್ಗೆಟ್ ನೀಡಿತ್ತು, ಈ ಗುರಿಯನ್ನು ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 17.5 ಓವರ್‌ನಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 123 ರನ್ ಗಳಿಸಲಷ್ಟೆ ಶಕ್ತವಾಯಿತು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ವಿರಾಟ್ 21, ಡುಪ್ಲೆಸಿ 23, ವಿಲ್ಲೆ 19 ರನ್ ಗಳಿಸಿದರು. ಅದೇ ರೀತಿ ಬೌಲಿಂಗ್‌ನಲ್ಲಿ ಡೀವಿಡ್ ವಿಲ್ಲೆ ಕರಣ್ ಶರ್ಮಾ ತಲಾ 2, ಬ್ರೇಸ್ವೆಲ್ ಮತ್ತು ಪಟೆಲ್ ತಲಾ ಒಂದು ವಿಕೆಟ್ ಪಡೆದರು. ಕೋಲ್ಕತ್ತಾ ನೈಟ್ ರೈಡರ್ಸ್ ಪರ ಗುರ್ಬಾಜ್ 57, ಠಾಕೂರ್ 68, ರಿಂಕೂ 46 ರನ್ ಬಾರಿಸಿದರು. ಕೋಲ್ಕತ್ತಾ ನೈಟ್ ರೈಡರ್ಸ್ ಬೌಲಿಂಗ್‌ನಲ್ಲಿ ಉತ್ತಮ ಫಾರ್ಮ್‌ನಿಂದ ಮಾಡಿದ ವರುಣ್ ಚಕ್ರವರ್ತಿ 4, ಸುಯೇಶ್ ಶರ್ಮಾ 3, ನರೇನ್ 2, ಠಾಕೂರ್ 1 ವಿಕೆಟ್ ಪಡೆದರು.