IPL Mega Auction 2025: ಇಂದು ಐಪಿಎಲ್ 18ನೇ ಆವೃತ್ತಿಯ ಮೆಗಾ ಹರಾಜು ಪ್ರಕ್ರಿಯೆ..!!

You are currently viewing IPL Mega Auction 2025: ಇಂದು ಐಪಿಎಲ್ 18ನೇ ಆವೃತ್ತಿಯ ಮೆಗಾ ಹರಾಜು ಪ್ರಕ್ರಿಯೆ..!!

ಪ್ರಜಾವೀಕ್ಷಣೆ ಸುದ್ದಿಜಾಲ :-

IPL Mega Auction 2025 : ಇಂದು ಐಪಿಎಲ್ 18ನೇ ಆವೃತ್ತಿಯ ಮೆಗಾ ಹರಾಜು ಪ್ರಕ್ರಿಯೆ..!!

ಪ್ರಜಾ ವೀಕ್ಷಣೆ ಸ್ಪೋಟ್ಸ್‌ ಬ್ಯೂರೊ ಡೆಸ್ಕ್ : ಭಾರತದ ಪ್ರತಿಷ್ಠಿತ ಟೂರ್ನಿಗಳಲ್ಲಿ ಒಂದಾದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್-IPL-18) 2025ರ ಐಪಿಎಲ್ 18ನೇ ಆವೃತ್ತಿ ಮಾರ್ಚ್ 14ರಿಂದ ಮೇ 25ರವರೆಗೆ ನಡೆಯಲಿದೆ. ಇದರ ಮೆಗಾ ಹರಾಜು ಪ್ರಕ್ರಿಯೆ ಇಂದು (ನವೆಂಬರ್ 24 ಮತ್ತು 25 ರಂದು) ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯಲಿದೆ. ಐಪಿಎಲ್ ಮೆಗಾ ಹರಾಜಿಗೆ 1500 ಕ್ಕೂ ಹೆಚ್ಚು ಆಟಗಾರರು ನೊಂದಾಯಿಸಿಕೊಂಡಿದ್ದರು.

ಈ ಬಾರಿಯ ಐಪಿಎಲ್‌ 2025 ಮೆಗಾ ಹರಾಜಿಗೆ ಶಾರ್ಟ್‌ ಲೀಸ್ಟ್ ಮಾಡಲಾಗಿದೆ. ಇದರಲ್ಲಿ 574 ಆಟಗಾರರನ್ನು ಶಾರ್ಟ್‌ ಲೀಸ್ಟ್ ಮಾಡಲಾಗಿದೆ. ಇದರಲ್ಲಿ 366 ದೇಶೀಯ ಆಟಗಾರರು ಇದ್ದಾರೆ. ಇದರ ಜೊತೆಗೆ 208 ವಿದೇಶಿ ಆಟಗಾರರು ಇದ್ದು, ಅಸೋಸಿಯೇಟ್ ರಾಷ್ಟ್ರಗಳ ಮೂವರು ಆಟಗಾರರು ಕೂಡ ಈ ಹರಾಜಿನಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಈ ಮೆಗಾ ಹರಾಜು ಪ್ರಕ್ರಿಯೆ ನಡೆಯುವ ಸಮಯ

ಇಂದು ಮಧ್ಯಾಹ್ನ 3:00 ಗಂಟೆಗೆ ನಡೆಯಲಿದೆ ಎಂದು ಮಾಹಿತಿ ಇದೆ. ಸಾಮಾನ್ಯವಾಗಿ ಮೆಗಾ ಹರಾಜು ಬೆಳಗ್ಗೆ ನಡೆಯಬೇಕಾಗಿತ್ತು. ಆದರೆ, ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೊದಲ ಟೆಸ್ಟ್‌ ಆಸ್ಟ್ರೇಲಿಯಾದ ಪರ್ತ್‌ನಲ್ಲಿ ನಡೆಯುತ್ತಿದ್ದು. ಹೀಗಾಗಿ ಮೊದಲ ಟೆಸ್ಟ್‌ ಪಂದ್ಯ ಮುಗಿದ ಬಳಿಕ ಐಪಿಎಲ್ ಹರಾಜು ನಡೆಯಲಿದೆ. ಎರಡೂ ದಿನ ಮಧ್ಯಾಹ್ನ 3 ಗಂಟೆ ಸುಮಾರಿಗೆ ಮೆಗಾ ಹರಾಜು ಆರಂಭವಾಗಲಿದೆ. ಇದು ರಾತ್ರಿ ಹತ್ತು ಗಂಟೆಯವರೆಗೂ ಮುಂದುವರಿಯಬಹುದು ಎಂದು ತಿಳಿದು ಬಂದಿದೆ.

ಈ ಹರಾಜಿನಲ್ಲಿ ಒಟ್ಟು 318 ಭಾರತೀಯ ಅನ್‌ ಕ್ಯಾಪ್ಡ್‌ ಆಟಗಾರರು, 12 ವಿದೇಶಿ ಅನ್‌ ಕ್ಯಾಪ್ಡ್ ಆಟಗಾರರು ಭಾಗವಹಿಸಲಿದ್ದಾರೆ. ಐಪಿಎಲ್‌ 10 ಮಾಲೀಕರು 204 ಸ್ಲಾಟ್‌ಗಳು ತುಂಬಿಕೊಳ್ಳಬೇಕಿದೆ. ಇದರಲ್ಲಿ 70 ವಿದೇಶಿ ಆಟಗಾರರು ಹರಾಜು ಆಗಬೇಕಿದೆ. ಹರಾಜು ಪಟ್ಟಿಯನ್ನು ವಿವಿಧ ವಿಭಾಗಗಳಲ್ಲಿ ವಿಂಗಡಿಸಲಾಗಿದೆ. 2 ಕೋಟಿ ರೂ. ಬೆಲೆಯ 81 ಆಟಗಾರರು, 27 ಆಟಗಾರರು 1.5 ಕೋಟಿ ರೂ., 18 ಆಟಗಾರರು 1.25 ಕೋಟಿ ರೂ., ಇನ್ನು 23 ಆಟಗಾರರ ಮುಖ ಬಲೆ 1 ಕೋಟಿ ಆಗಿರಲಿದೆ ಎಂದು ಮಾಹಿತಿ ಇದೆ.

Leave a Reply

error: Content is protected !!