IPL Mega Auction 2025: ಬರೋಬ್ಬರಿ 20 ಕೋಟಿ ರೂ.ಕ್ಕಿಂತ ಹೆಚ್ಚು ಮೊತ್ತಕ್ಕೆ ಹರಾಜು ಆಗಬಲ್ಲ ಆಟಗಾರರು ಇವರೇ..!!
ಪ್ರಜಾ ವೀಕ್ಷಣೆ ಸ್ಪೋಟ್ಸ್ ಬ್ಯೂರೊ ಡೆಸ್ಕ್ : ಭಾರತದ ಪ್ರತಿಷ್ಠಿತ ಟೂರ್ನಿಗಳಲ್ಲಿ ಒಂದಾದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್-IPL-18) 2025ರ ಮೆಗಾ ಹರಾಜು ಪ್ರಕ್ರಿಯೆ ಇಂದು (ನವೆಂಬರ್ 24 ಮತ್ತು 25 ರಂದು) ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯಲಿದೆ. ಐಪಿಎಲ್ ಮೆಗಾ ಹರಾಜಿಗೆ 1500 ಕ್ಕೂ ಹೆಚ್ಚು ಆಟಗಾರರು ನೊಂದಾಯಿಸಿಕೊಂಡಿದ್ದರು.
ಈ ಬಾರಿಯ ಐಪಿಎಲ್ 2025 ಮೆಗಾ ಹರಾಜಿಗೆ ಶಾರ್ಟ್ ಲೀಸ್ಟ್ ಮಾಡಲಾಗಿದೆ. ಇದರಲ್ಲಿ 574 ಆಟಗಾರರನ್ನು ಶಾರ್ಟ್ ಲೀಸ್ಟ್ ಮಾಡಲಾಗಿದೆ. ಇದರಲ್ಲಿ 366 ದೇಶೀಯ ಆಟಗಾರರು ಇದ್ದಾರೆ. ಇದರ ಜೊತೆಗೆ 208 ವಿದೇಶಿ ಆಟಗಾರರು ಇದ್ದು, ಅಸೋಸಿಯೇಟ್ ರಾಷ್ಟ್ರಗಳ ಮೂವರು ಆಟಗಾರರು ಕೂಡ ಈ ಹರಾಜಿನಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದು ಬಂದಿದೆ. ಐಪಿಲ್‌ನ ತಂಡಗಳ ಮಾಲೀಕರ ಚಿತ್ತ ಕದ್ದಿರುವ ಟಾಪ್ 5 ಆಟಗಾರರು 20 ಕೋಟಿ ರೂ.ಕ್ಕಿಂತ ಹೆಚ್ಚು ಮೊತ್ತಕ್ಕೆಹರಾಜು ಆಗಬಲ್ಲರು. ಅಂತವರ ಪಟ್ಟಿಯ ವರದಿ ಇಲ್ಲಿದೆ.
ಈ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಸ್ಟಾರ್ ಆಟಗಾರರ ದಂಡೆಯಿದೆ. ಅದರಲ್ಲಿ ಪ್ರಮುಖವಾಗಿ ಭಾರತದ ವಿಕೆಟ್ ಕೀಪರ್ ಕಂ ಬ್ಯಾಟ್ಸ್‌ಮ್ಯಾನ್ ಕೆಎಲ್ ರಾಹುಲ್, ರಿಶಭ್ ಪಂತ್, ಹಾಗೂ ಬ್ಯಾಟರ್ ಶ್ರೇಯಸ್ ಐಯ್ಯರ್, ಜೋಸ್ ಬಟ್ಲರ್, ಮೊಹಮ್ಮದ್ ಶಮಿ ಅವರು ಹರಾಜು ಆಗಬಲ್ಲರು ಎಂದು ತಿಳಿದು ಬಂದಿದೆ. ಇಂದು ಮಧ್ಯಾಹ್ನ 3:00 ಗಂಟೆಯಿಂದ 10 ಗಂಟೆಯವರೆಗೂ ನಡೆಯಲಿದೆ ಎಂದು ಮಾಹಿತಿ ಇದೆ.