ಬಸ ಡಿಪೋ ರಸ್ತೆ ದುರಸ್ತಿಗೊಳಿಸುವಂತೆ ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿಗಳಿಗೆ ಮನವಿ
ಶಿರಹಟ್ಟಿ : ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಸ್ಮಶಾನಭೂಮಿಯಿಂದ ಬಸ್ ಡಿಪೋವರೆಗೂ ಬೀದಿ ದೀಪ ಹಾಗೂ ರಸ್ತೆ ಪಕ್ಕದ ಕಂಠಿಗಳನ್ನು ಕತ್ತರಿಸಿ ಹಾಕಬೇಕೆಂದು ಆಗ್ರಹಿಸಿ ಪಟ್ಟಣದ ಕುಂದು ಕೊರತೆ ನಿವಾರಣಾ ಸಮಿತಿ ಪದಾಧಿಕಾರಿಗಳು ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಸಿದ್ದರಾಯ ಕಟ್ಟಿಮನಿ ಅವರಿಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿದ ನಂತರ ಮಾತನಾಡಿದ ಸ್ಥಳೀಯ ಕುಂದು ಕೊರತೆ ಸಮಿತಿ ಅಧ್ಯಕ್ಷ ಅಕ್ಬರ್ ಸಾಬ್ ಯಾದಗಿರಿ ಪರಿಪುರದ ಸ್ಮಶಾನಭೂಮಿಯಿಂದ ಸಾರಿಗೆ ಇಲಾಖೆ ಬಸ್ ಡಿಪೋರಿಗೆ ಬಸ್ ಹೋಗಲು ಹಾಗೂ ಜನರಿಗೊತ್ತಿಯವರ ತೊಂದರೆ ಆಗಿದೆ. ಕೂಡಲೇ ಸಮಸ್ಯೆಗಳನ್ನು ಬಗೆಹರಿಸಲು ಒತ್ತಾಯಿಸಿದರು.
ಬಸ್ ಡಿಪೋ ರಸ್ತೆಯಲ್ಲಿ ದೊಡ್ಡ ದೊಡ್ಡ ತೆಗ್ಗುಗಳು ಇರುವುದರಿಂದ ಬಸ್ಸು ಹಾಗೂ ರೈತರು ಅಡ್ಡಾಡಲು ತುಂಬಾ ತೊಂದರೆಯಾಗಿದ್ದು ಮಳೆಗಾಲದಲ್ಲಿ ವಾಹನ ಚಾಲಕರು ಹರ ಸಾಹಸ ಮಾಡಬೇಕಾಗುತ್ತದೆ ಸ್ವಲ್ಪ ಯಾಮಾರಿದರೆ ಪಕ್ಕದಲ್ಲಿರುವ ಗಟಾರಕ್ಕೆ ಹೋಗುತ್ತಾವೆ. ಮುಖ್ಯವಾಗಿ ಸಂಜೆ ವೇಳೆ ರಸ್ತೆ ಉದ್ದಕ್ಕೂ ಕತ್ತಲೆಯಲ್ಲಿ ಹೋಗಬೇಕಾದ ಪರಿಸ್ಥಿತಿ ಇದೆ. ಈ ರಸ್ತೆಗೆ ಯಾವುದೇ ಬೆಳಗಿನ ವ್ಯವಸ್ಥೆ ಇರುವುದಿಲ್ಲ ಅದರಲ್ಲೂ ಈ ರಸ್ತೆಯು ಕಿರಿದಾಗಿರುವುದರಿಂದ ಬಸ್ಸುಗಳು ಬಂದರೆ ರೈತರು ಪರದಾಡುವ ಪರಿಸ್ಥಿತಿ ಉಂಟಾಗುತ್ತಿದೆ. ಬೆಳದಿರುವ ಜಾಲಿ ಕಂಠಿಗಳನ್ನು ತೆಗೆದು ಸ್ವಚ್ಛಗೊಳಿಸಬೇಕೆಂದು ಎಂದರು.
ಬಸ್ ಡಿಪೋರಸ್ತೆ ಹಾಗೂ ಬೀದಿ ದೀಪಗಳ ಬಗ್ಗೆ ಹಲವಾರು ಬಾರಿ ಪಟ್ಟಣ ಪಂಚಾಯತಿ ಹಾಗೂ ಶಾಸಕರಿಗೆ ಲಿಖಿತಾ ಹಾಗೂ ಮೌಕಿಕ ತಿಳಿಸುತ್ತಾ ಬಂದಿದ್ದು ಯಾವುದೇ ಕಾರ್ಯ ಪ್ರಗತಿಯಲ್ಲಿ ಬಂದಿಲ್ಲ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ಸ್ಥಳಕ್ಕೆ ಬಂದು ಭೇಟಿ ನೀಡಿದ್ದಾರೆ ಸಮಸ್ಯೆಗಳ ಬಗ್ಗೆ ಅರಿವಾಗುತ್ತಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀನಿವಾಸ ಬಾರ್ ಬಾರ್, ಮುನ್ನಾ ಡಾಲಾಯತ್, ಕೋಳಿವಾಡ, ಇಂತಿಯಾಜ್ ಸಿಗ್ಲಿ
ಮತ್ತಿತ್ತರು ಭಾಗಿಯಾಗಿದ್ದರು.
ವರದಿ : ವೀರೇಶ್ ಗುಗ್ಗರಿ